ಬೆಂಗಳೂರು: ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಬ್ಯಾನ್ ಆಗಿರುವ ಪಿಎಫ್ಐ ಸಂಘಟನೆಗೆ ಎಲ್ಲಿಂದ ಹಣ ಬರುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ನ್ಯಾಯಾಂಗ ಬಂಧನದಲ್ಲಿರುವ ಪಿಎಫ್ಐ ಮುಖಂಡರು ಹಾಗೂ ಕಾರ್ಯಕರ್ತರು ಧಾರ್ಮಿಕ ಕೇಂದ್ರಗಳಿಗೆ ಹೋಗಿ ಸಾಮಾಜಿಕ ಕಾರ್ಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ದೇಣಿಗೆ ನೀಡುವವರು ತಮ್ಮ ಗುರುತು ಗೊತ್ತಾಗಬಾರದು ಅಂತಾ  ಎಟಿಎಂ ಮೂಲಕವೇ ಪಿಎಫ್ಐಗೆ ಹಣ ಜಮೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ನಿಷೇಧಿಸಲಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕಚೇರಿ ಹಾಗೂ‌ ಮುಖಂಡ‌ರ ಮನೆಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈಗ  ದಾಖಲೆಗಳ ಪರಿಶೀಲನೆ ವೇಳೆ‌ ದೇಶ-ವಿದೇಶಗಳಿಂದ ಎಟಿಎಂ ಮೂಲಕವೇ ಪಿಎಫ್ಐ ಸಂಘಟನೆಯ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಮೂಲಕ ಹವಾಲಾ ಹಣದ ಬಗ್ಗೆ ಎನ್ಐಎ ತನಿಖೆ‌ ನಡೆಸುತ್ತಿದೆ. ರಾಜ್ಯ ಪೊಲೀಸರ  ಬಂಧಿಸಿರುವ 19 ಮಂದಿಯ ಬ್ಯಾಂಕ್ ಖಾತೆ ಹಾಗೂ ಸಂಘಟನೆ ಬ್ಯಾಂಕ್ ಖಾತೆಗಳ ಬಗ್ಗೆ ನಗರ ಪೂರ್ವ ವಿಭಾಗದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.


ಈ ನಡುವೆ ಬಂಧಿತ 19 ಮಂದಿ ಪೈಕಿ ಬೆಂಗಳೂರಿನ ನಾಸೀರ್ ಪಾಷಾ, ಮಂಗಳೂರಿನ ಮೊಹಮ್ಮದ್ ಅಶ್ರಫ್ ಅಂಕಜಾಲ, ಮೊಹಿನುದ್ದೀನ್, ದಕ್ಷಿಣ ಕನ್ನಡ ಜಿಲ್ಲೆಯ ಅಯೂಬ್ ಅಜೆಂಡಿ ಹಾಗೂ ತಲೆಮರೆಸಿಕೊಂಡಿರುವ ಆರೋಪಿ ಸೇರಿ ಐವರು ಬ್ಯಾಂಕ್ ಖಾತೆಯಲ್ಲಿ ಕೋಟ್ಯಾಂತರ ರೂ. ವ್ಯವಹಾರ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. 


ಇದನ್ನೂ ಓದಿ- ಮಂಗಳೂರಿನಲ್ಲಿ ಮತ್ತೆ ಪಿಎಫ್ಐ ಮುಖಂಡರ ಮನೆಗಳ ಮೇಲೆ ದಾಳಿ: ಐವರು ವಶಕ್ಕೆ


ಸದ್ಯ ಹಣದ ಮೂಲ ಪತ್ತೆ ಹಚ್ಚಲಾಗುತ್ತಿದ್ದು, ಆರೋಪಿಗಳ ವಿಚಾರಣೆಯಲ್ಲಿ ಸಂಘಟನೆಗಾಗಿಯೇ ಹಣ ಸಂಗ್ರಹಿಸಲಾಗಿದೆ. ಆರೋಪಿಗಳು ಸಂಘಟನೆ ಜತೆಗೆ ಉತ್ತಮ ಕೆಲಸಗಳನ್ನು ಹೊಂದಿದ್ದು, ಲಕ್ಷಾಂತರ ರೂ. ವೇತನ ಪಡೆಯುತ್ತಿದ್ದಾರೆ. ಹೀಗಾಗಿ ವೇತನ ಹೊರತು ಪಡಿಸಿ ಬೇರೆ ಯಾವುದೇ ಮೂಲದಿಂದ ಹಣ ಪಡೆದಿಲ್ಲ ಎಂದು ಆರೋಪಿಗಳು ಹೇಳಿಕೆ‌ ನೀಡಿರುವುದಾಗಿ ತಿಳಿದು ಬಂದಿದೆ. 


ಪಿಎಫ್‌ಐ ಸಂಘಟನೆಗೆ ರಾಜ್ಯದ ಕೆಲ ಧಾರ್ಮಿಕ ಕೇಂದ್ರಗಳು ಕೂಡ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿ ಸಂಘಟನೆಗೆ ನೀಡುತ್ತಿದ್ದವು ಎಂದು ಹೇಳಲಾಗಿದೆ. ಜೊತೆಗೆ ಧಾರ್ಮಿಕ ಕೇಂದ್ರಗಳ ಬಳಿ ಖುದ್ದಾಗಿ ಸಂಘಟನೆ ಕಾರ್ಯಕರ್ತರೇ ಅಧಿಕೃತವಾಗಿ ಸಾಮಾಜಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವಂತೆ ಕೇಳಿ ಹಣ  ಸಂಗ್ರಹಿಸುತ್ತಿದ್ದರು. ಅದರ ಅಲ್ಪ ಹಣವನ್ನು ವಿದ್ಯಾರ್ಥಿ ವೇತನ ಹಾಗೂ ಇತರೆ ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡಿ ದೊಡ್ಡ ಮೊತ್ತದ ಹಣವನ್ನು ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಹೀಗೆ ನಗದು ರೂಪದಲ್ಲಿ ಸಂಗ್ರಹಿಸುತ್ತಿದ್ದ ಹಣವನ್ನು ಕಾರ್ಯಕರ್ತರು ನೇರವಾಗಿ ಎಟಿಎಂ ಕೇಂದ್ರಗಳಿಗೆ ತೆರಳಿ, ಸಂಘಟನೆ ಖಾತೆಗೆ ಜಮೆ ಮಾಡುತ್ತಿದ್ದರು. ಕೆಲವು ಬಾರಿ ಸಂಘಟನೆ ಮುಖಂಡರ ಖಾತೆಗೆ ಜಮೆ ಮಾಡಿರುವ ಮಾಹಿತಿ ಕೂಡ ಸಿಕ್ಕಿದೆ. ಈ ರೀತಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಂದ ಎಟಿಎಂ ಕೇಂದ್ರಗಳ ಮೂಲಕ ಹಣ ಬರುತ್ತಿತ್ತು. ಒಟ್ಟಾರೆ ಶೇ.60 ರಷ್ಟು ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಹಣವೇ ಸಂಘಟನೆ ಖಾತೆಗೆ ಬರುತ್ತಿತ್ತು.


ಇದನ್ನೂ ಓದಿ- PFI ಜೊತೆ ಪೊಲೀಸರ ನಂಟು.? ರಾಜ್ಯದ‌ ಮೇಲೂ NIA ಕಣ್ಣು.!


ಪಿಎಫ್‌ಐ ಸಂಘಟನೆ ಆರಂಭದ ದಿನಗಳಿಂದಲೂ ಇದುವರೆಗೂ ರಾಜ್ಯ ವಿವಿಧ ಶಾಖೆಯ ಸಂಘಟನೆ ಖಾತೆಗೆ ಹತ್ತಾರೂ ಕೋಟಿ ಅಧಿಕ ಹಣ ಜಮೆಯಾಗಿದೆ ಎಂದು ಹೇಳಲಾಗಿದೆ. ಆದರೆ, ಯಾರೆಲ್ಲ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ಸಂಗ್ರಹಿಸಬೇಕಿದೆ  ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ನಗರ ಪೊಲೀಸರು ರಾಷ್ಟ್ರೀಯ ತನಿಖಾ ದಳಕ್ಕೆ ಪತ್ರ ಬರೆದಿದ್ದು, ತಮ್ಮ ಕಾರ್ಯಾಚರಣೆಯಲ್ಲಿ ಬಂಧನವಾಗಿರುವ ಏಳು ಮಂದಿ ಆರೋಪಿಗಳು ಮತ್ತವರು ಸಂಘಟನೆ ಹೆಸರಿನಲ್ಲಿ ನಡೆಸುತ್ತಿದ್ದ ವ್ಯವಹಾರದ ಬಗ್ಗೆ ಕೆಲವೊಂದು ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಈ ಮಾಹಿತಿ ಆಧರಿಸಿ ಆರೋಪಿಗಳ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ಕೋರಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.