ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ದೇವಾಲಯಗಳ ಮೇಲೆ ಪೊಲೀಸ್ ರ ಕಣ್ಣು ಬಿದ್ದಿದೆ. ನಿತ್ಯವೂ ಪ್ರಸಿದ್ಧ ದೇವಾಲಯಗಳಿಗೆ ಅತಿಯಾದ ಶಬ್ದ ಬರುವಿಕೆ ವಿಚಾರವನ್ನು ಇಟ್ಟುಕೊಂಡು ನೋಟಿಸ್ ಮೇಲೆ ನೋಟಿಸ್ ಜಾರಿ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ನಿನ್ನೆ ಮಲ್ಲೇಶ್ವರಂ ನ ಪುರಾತನ ದೇವಾಲಯವಾದ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ನೊಟೀಸ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದ್ರ ಬೆನ್ನಲ್ಲೆ ವೇಣುಗೋಪಾಲ ಸ್ವಾಮಿ ದೇವಾಲಯದ ಪಕ್ಕದಲ್ಲಿರೋ ಗಂಗಮ್ಮ ದೇವಿ ದೇವಸ್ಥಾನಕ್ಕೂ  ಪೊಲೀಸರಿಂದ ಶಬ್ದ ಮಾಲಿನ್ಯ ಮಾಡದಂತೆ ವಾರ್ನಿಂಗ್ ನೀಡಿರುವುದು ಬೆಳಕಿಗೆ ಬಂದಿದೆ. 


ಇದನ್ನೂ ಓದಿ- ಹುಬ್ಬಳ್ಳಿ ಗಲಭೆಗೂ ಕೆಜಿ ಹಳ್ಳಿ, ಡಿ ಜೆ ಹಳ್ಳಿ ಗಲಭೆಗೂ ಸಾಮ್ಯತೆ: ಗೃಹ ಸಚಿವ ಆರಗ ಜ್ಞಾನೇಂದ್ರ


ಪೊಲೀಸರ ನಡೆ ವಿರುದ್ಧ ಭಕ್ತರ ಅಸಮಾಧಾನ:
ನಿನ್ನೆ ಪೊಲೀಸ್ ಸಿಬ್ಬಂದಿಗಳಿಂದ ಮೌಕಿಕವಾಗಿ ನೋಟಿಸ್ ನೀಡಲಾಗಿದೆ. 45 ಡಿಸೆಬಲ್ ಗಿಂತ  ಹೆಚ್ಚು ಧ್ವನಿವರ್ಧಕ ಬಳಸದಂತೆ ಸೂಚಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ನಿಯಮ ಪಾಲಿಸಿ. ಹೆಚ್ಚು ಧ್ವನಿವರ್ಧಕಗಳನ್ನ ಬಳಸಬೇಡಿ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. 


ಇದನ್ನೂ ಓದಿ- ಹುಬ್ಬಳ್ಳಿ ಗಲಭೆ: ‘ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ?’


ನಾವು ಹಬ್ಬದ ದಿನಗಳಲ್ಲಿ ಮಾತ್ರ ಮೈಕ್ ಬಳಸುತ್ತೇವೆ:
ಇನ್ನು ಈ ಬಗ್ಗೆ ಮಾತನಾಡಿರುವ ಗಂಗಮ್ಮ ದೇವಿ ಅರ್ಚಕರು, ನಮ್ಮ ದೇವಾಲಯದಲ್ಲಿ ಹಬ್ಬದ ದಿನದಂದು ವಿಶೇಷ ಪೂಜೆ ವೇಳೆ ಅನುಮತಿ ಪಡೆಯುತ್ತೇವೆ. ಪೊಲೀಸರ ಅನುಮತಿ ಪಡೆದೇ ಧ್ವನಿವರ್ಧಕ ಬಳಸುತ್ತೇವೆ. ಆದ್ರೆ ನೋಟಿಸ್ ಯಾಕೆ ಕೊಟ್ಟಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಅಸಮಧಾನ ಹೊರಹಾಕಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.