ಪ್ರಿಯತಮೆಯೊಂದಿಗೆ ಮುನಿಸು : ಟವರ್‌ ಏರಿ ಕುಳಿತ ʼಭಗ್ನ ಪ್ರೇಮಿʼ

 ಪ್ರೀತಿಸಿದ ಹುಡುಗಿಯೊಂದಿಗೆ ಮನಸ್ತಾಪ ಮಾಡಿಕೊಂಡ ಯುವಕನೋರ್ವ ಮೊಬೈಲ್‌ ಟವರ್‌ ಮೇಲೆ ಹತ್ತಿ ತಾನು ಆತ್ಮಹತ್ಯೆ ಮಾಡುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.

Written by - Bhavishya Shetty | Last Updated : Apr 18, 2022, 04:27 PM IST
  • ಪ್ರೀತಿಸಿದ ಹುಡುಗಿಯೊಂದಿಗೆ ಮನಸ್ತಾಪ
  • ಮೊಬೈಲ್‌ ಟವರ್‌ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ
  • ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಪ್ರಿಯತಮೆಯೊಂದಿಗೆ ಮುನಿಸು : ಟವರ್‌ ಏರಿ ಕುಳಿತ ʼಭಗ್ನ ಪ್ರೇಮಿʼ title=
Bantwal Mobile Tower

ಪ್ರೀತಿಗೆ ಕಣ್ಣಿಲ್ಲ ಎಂಬ ಮಾತಿದೆ. ಅದೆಷ್ಟೋ ಮಂದಿ ತಾವು ಪ್ರೀತಿಸಿದವರ ಜೊತೆ ಜೀವನ ನಡೆಸಬೇಕು ಎಂದು ಆಸೆಪಟ್ಟಿರುತ್ತಾರೆ. ಅನೇಕರು ಈ ಮಾತಿನಂತೆ ನಡೆದುಕೊಂಡಿದ್ದಾರೆ. ಇನ್ನೂ ಕೆಲವರು ಇಂತಹ ಪ್ರೀತಿಯಿಂದ ಮೋಸ ಹೋಗಿ, ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೂ ನಡೆದಿದೆ. 

ಇದನ್ನು ಓದಿ: ಪತ್ನಿಯ ಬೆತ್ತಲೆ ಫೋಟೋ ಸ್ನೇಹಿತನಿಗೆ ಕಳುಹಿಸಿದ ವಿಕೃತ ಪತಿ: ಮುಂದೇನಾಯ್ತು!?

ಇದೀಗ ಪ್ರೀತಿಸಿದ ಹುಡುಗಿಯೊಂದಿಗೆ ಮನಸ್ತಾಪ ಮಾಡಿಕೊಂಡ ಯುವಕನೋರ್ವ ಮೊಬೈಲ್‌ ಟವರ್‌ ಮೇಲೆ ಹತ್ತಿ ತಾನು ಆತ್ಮಹತ್ಯೆ ಮಾಡುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್‌  ಠಾಣಾ ವ್ಯಾಪ್ತಿಯಲ್ಲಿ. 

ಪ್ರಿಯತಮೆ ಜೊತೆ ಜಗಳವಾಡಿ, ಬಳಿಕ ಕೋಪಗೊಂಡು ಆತ್ಮಹತ್ಯೆಗೆ ಶರಣಾಗುವುದಾಗಿ ಯುವಕ ಬೆದರಿಕೆ ಹಾಕಿದ್ದ. ಸದ್ಯ ಯುವಕನನ್ನು ಪೊಲೀಸರು ಮತ್ತು ಸ್ಥಳೀಯರು ಸೇರಿ ಮನವೊಲಿಸಿ ಕೆಳಗಿಳಿಸಿದ್ದಾರೆ. 

ಈ ಯುವಕನ ಹೆಸರು ಸುಧೀರ್‌. ಈತ ಬಂಟ್ವಾಳ ತಾಲೂಕಿನ ಕೆಂಜಾರಿನ ಯುವಕ. ಸುಧೀರ್‌ ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಅವರಿಬ್ಬರ ನಡುವೆ ಮನಸ್ತಾಪ ಆಗಿದ್ದು, ಸೋಮವಾರ ಬೆಳಿಗ್ಗೆ ಅಡ್ಯಾರ್ ಬಳಿ ಇರುವ ಮೊಬೈಲ್‌ ಟವರ್ ಏರಿ ತಾನು ಆತ್ಮಹತ್ಯೆಗೆ ಶರಣಾಗುವುದಾಗಿ ಬೆದರಿಕೆ ಹಾಕಿದ್ದಾನೆ. ಪ್ರೀತಿಸಿದ ಯುವತಿ ಸ್ಥಳಕ್ಕೆ ಬಂದ ನಂತರ ಆತನು ಟವರ್‌ನಿಂದ ಕೆಳಗೆ ಇಳಿದಿದ್ದಾನೆ.

ಇದನ್ನು ಓದಿ: ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಕುರಿತು ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ..

ಯುವಕನ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೊಯ್ಸಳ ತಂಡದವರು ಯುವಕನನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News