ವಿಜಯಪುರ: Property Dispute - ಹೆಣ್ಣು, ಹೊನ್ನು, ಮಣ್ಣು ಎಂತವರನ್ನು ದಾಯಾದಿಗಳನ್ನಾಗಿಸುತ್ತವೆ ಎನ್ನಲಾಗುತ್ತದೆ. ಅಣ್ಣತಮ್ಮಂದಿರು ಆಸ್ತಿ ಹಂಚಿಕೊಂಡು ಬೇರೆ ಬೇರೆಯಾಗಿದ್ದವರೀಗ ದಾಯಾದಿಗಳಾಗಿದ್ದಾರೆ. ಹುಟ್ಟುತ್ತಾ ಅಣ್ಣ ತಮ್ಮಂದಿರರು ಬೆಳೆಯುತ್ತದೆ ದಾಯಾದಿಗಳು ಅನ್ನೋ ಮಾತಿಗೆ ಈ ಸ್ಟೋರಿನೇ ಸಾಕ್ಷಿಯಾಗಿದೆ. ಈ ವೃದ್ಧನಿಗೆ ಗಂಡು ಮಕ್ಕಳು ಇಲ್ಲ ಅಂತ ಮೊಮ್ಮಕ್ಕಳಿಗೆ ಆಸ್ತಿ ಬಿಟ್ಟು ಕೊಟ್ಟಿದ್ದೇ ಅಣ್ಣನ ಮಕ್ಕಳಿಂದ ಆಗಾಗ ಗಲಾಟೆ ನಡೆಯುತ್ತಿದೆ. ಇದೀಗ ಹಲ್ಲೆಗೊಳಗಾಗಿ ವೃದ್ಧ, ಆತನ ಮೊಮ್ಮಕ್ಕಳು ಆಸ್ಪತ್ರೆ ಸೇರಿದ್ದಾರೆ (Crime News). 

COMMERCIAL BREAK
SCROLL TO CONTINUE READING

ಆಸ್ತಿ ಆಸೆಗಾಗಿ ಒಡಹುಟ್ಟಿದವರೇ ವೈರಿಗಳಾಗಿದ್ದಾರೆ. ಜಮೀನಿಗೆ ಸಂಬಂಧಿಸಿದ ಹಳೆಯ ವೈಷಮ್ಯ ವಾದ ವಿವಾದವಾಗಿ ಒಂದು ಕುಟುಂಬ ಆಸ್ಪತ್ರೆ ಸೇರುವಂತೆ ಮಾಡಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದ ಹಿರೇಮಠ ಕುಟುಂಬದಲ್ಲಿ ಈ ಘಟನೆ ನೆಡೆದಿದೆ . ಮಡಿವಾಳಯ್ಯಾ ಹಿರೇಮಠ (Madivalayya Hiremath), ಮಾದೇವಿ ಮಡಿವಾಳಯ್ಯ ಹಿರೇಮಠ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ರು, ಗಂಡು ಮಕ್ಕಳಾಗದಕ್ಕೆ ಮಡಿವಾಳಯ್ಯಾ ಹಿರೇಮಠ ಹಾಗೂ ಮಾದೇವಿ ತಮ್ಮ ಮಗಳ ಮಗ ಸಂಗಮೇಶನಿಗೆ (Sangamesh) ತಮ್ಮ ಪಾಲಿನ 4 ಎಕರೆ 32ಗುಂಟೆ ಜಮೀನು ಬಿಟ್ಟು ಕೊಟ್ಟಿದ್ದಾನೆ. 


ಇದನ್ನೂ ಓದಿ-Cylinder Blast: ಸಿಲಿಂಡರ್ ಬ್ಲಾಸ್ಟ್ ಆಗಿ ವ್ಯಕ್ತಿಗೆ ಗಂಭೀರ ಗಾಯ

ಇದು ಮಡಿವಾಳಯ್ಯನ ಅಣ್ಣನ ಮಕ್ಕಳ ಕಣ್ಣು ಕೆಂಪಗಾಗಿಸಿದೆ. ನಮಗೆ ಆಸ್ತಿ ನೀಡದೇ ತನ್ನ ಮಗಳ ಮಗ ಸಂಗಮೇಶನಿಗೆ ಆಸ್ತಿ ನೀಡಿದನಲ್ಲ ಅಂತ ಸಹೋದರನ ಮಕ್ಕಳಾದ ಮಾಳಯ್ಯ ಹಾಗೂ ಸಂಗಯ್ಯಾ ಹಲವಾರು ಬಾರಿ ಜಗಳ ಮಾಡಿದ್ದಾರೆ‌. ಕೆಲ ಎರಡು ವರ್ಷಗಳಿಂದ ಜಮೀನಿಗೆ ದಾರಿ ವಿಚಾರಕ್ಕೆ ಗಲಾಟೆ  ಮಾಡುತ್ತಾ ಬಂದಿದ್ದಾರೆ . ನಿನ್ನೆ ಮಡಿವಾಳಯ್ಯನ ಮೊಮ್ಮಗ ಕಬ್ಬಿನ ಗದ್ದೆಯಲ್ಲಿ ಎತ್ತುಗಳಿಂದ ಕುಂಟೆ ಹೊಡೆಯೋವಾಗ ಒಂದು ಎತ್ತು ಮಾಳಯ್ಯ ಹಾಗೂ ಸಂಗಯ್ಯರ ಜಮೀನಿನಲ್ಲಿ ಹೋಗಿದೆ. ಇದೇ ನೆಪದಲ್ಲಿ ಮಾಳಯ್ಯ ಹಾಗೂ ಸಂಗಯ್ಯಾ ಇವರೊಂದಿಗೆ ಜಗಳ ತೆಗೆದಿದ್ಧಾರೆ. ಮಾತಿಗೆ ಮಾತು ಬೆಳೆದು ಹೊಡೆದಾಡಿದ್ದಾರೆ.  ಬಡಿಗೆಗಳು ಹಾಗೂ ಕಲ್ಲಿನಿಂದ ಮಾಳಯ್ಯ ಹಾಗೂ ಸಂಗಯ್ಯಾ  ಹಾಗೂ ಇತರರು ಸೇರಿ ಮಡಿವಾಳಯ್ಯಾ ಹಿರೇಮಠ ಹಾಗೂ ಮೊಮ್ಮಗ ಸಂಗಮೇಶ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಡಿವಾಳಯ್ಯ ಹಾಗೂ ಸಂಗಮೇಶನಿಗೆ ಗಂಭೀರ ಗಾಯಗಳಾಗಿದ್ದ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.


ಇದನ್ನೂ ಓದಿ-Breaking News: ಖಾಸಗಿ ಬಸ್ ಪಲ್ಟಿಯಾಗಿ ಸ್ಥಳದಲ್ಲೇ 8 ಮಂದಿ ದುರ್ಮರಣ!

ಇನ್ನು ಒಂದೇ ಕುಟುಂಬದವರಾದ ಇವರೆಲ್ಲಾ ಮೊದಮೊದಲು ಎಲ್ಲರೂ ಚೆನ್ನಾಗಿಯೇ ಇದ್ರು . ಯಾವಾಗ ಮಡಿವಾಳಯ್ಯ ತನ್ನ ಪಾಲಿನ 4 ಎಕರೆ 32 ಗುಂಟೆ ಎಕ್ರೆ ಜಮೀನನನ್ನು ಮಗಳ ಮಗ ಸಂಗಮೇಶನಿಗೆ ಬಿಟ್ಟು ಕೊಟ್ರೊ, ಕುಟುಂಬದಲ್ಲಿ ಬಿರುಕು ಬಿಟ್ಟಿದೆ. ನಿನ್ನೆ ನಡೆದ ಜಗಳ ಮಾರಣಾಂತಿಕ ಹಲ್ಲೆಗೂ ಬಂದು ತಲುಪಿದೆ. ನಿಮ್ಮನ್ನು ಇಷ್ಟಕ್ಕೆ ಬಿಡೋದಿಲ್ಲಂತ ಕೊಲೆ ಬೆದರಿಕೆ ಹಾಕಿದ್ದಾರೆ ಅಂತ ಮಡಿವಾಳಯ್ಯ ಆರೋಪಿಸಿದ್ದಾರೆ. ಇನ್ನು ತಮ್ಮ ಮೇಲೆ ನಡೆದ ಹಲ್ಲೆಯ ಕುರಿತು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ (Babaleshwar Police Station) ಮಡಿವಾಳಯ್ಯ ದೂರು ದಾಖಲಿಸಿದ್ದಾರೆ.


ಇದನ್ನೂ ಓದಿ-ಪಠ್ಯದಲ್ಲಿ ಗೀತೆ ಸೇರ್ಪಡೆ: ಕುರಾನ್ -ಬೈಬಲ್ ನಲ್ಲೂ ಒಳ್ಳೆ ಸಂಗತಿಗಳಿದ್ದರೆ ಸೇರಿಸಲಾಗುವುದು: ಸಚಿವ ಬಿ.ಸಿ.ನಾಗೇಶ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.