ಈ ಊರಲ್ಲೊಂದು ವಿಲಕ್ಷಣ ಸಂಪ್ರದಾಯ: 20ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿದ ಅರ್ಚಕ

ಹರಕೆ ಹೊತ್ತ ಭಕ್ತರು ಜಾತ್ರೆ ವೇಳೆ ಪ್ರಾಣಿಗಳ ಬಲಿ ಕೊಡುವಾಗ ಅರ್ಚಕ ಪ್ರತಿ ಪ್ರಾಣಿಯನ್ನು ತನ್ನ ಹಲ್ಲಿನಿಂದ ಕಚ್ಚಿ ರಕ್ತ ಹೀರಿ ಕುಡಿಯುವುದು ತಲೆತಲಾಂತಗಳಿಂದ ನಡೆದುಕೊಂಡು ಬಂದಿದೆ.

Written by - Zee Kannada News Desk | Last Updated : Mar 19, 2022, 11:57 AM IST
  • ಪ್ರತಿ ಪಾಲ್ಗುಣ ಮಾಸದಲ್ಲಿ ನಡೆಯುವ ಗ್ರಾಮದ ದೊಡ್ಡಮ್ಮತಾಯಿ ಜಾತ್ರೆ
  • ದೊಡ್ಡಮ್ಮತಾಯಿ ಜಾತ್ರೆಯಲ್ಲಿ ಕುರಿಗಳ ರಕ್ತ ಹೀರುವ ಸಂಪ್ರದಾಯ
  • ಅರ್ಚಕ ಕುರಿ ರಕ್ತ ಹೀರುವ ವಿಡಿಯೋ ಜೀ ಕನ್ನಡ ನ್ಯೂಸ್ ಗೆ ಲಭ್ಯ
ಈ ಊರಲ್ಲೊಂದು ವಿಲಕ್ಷಣ ಸಂಪ್ರದಾಯ: 20ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿದ ಅರ್ಚಕ title=
Weird tradition

ಚಾಮರಾಜನಗರ: ಜಾತ್ರೆಯಲ್ಲಿ ಕುರಿಗಳ ರಕ್ತವನ್ನು ಕುಡಿದು ದೇವರನ್ನು ಸಂಪ್ರೀತಗೊಳಿಸಿದ ವಿಲಕ್ಷಣ ಘಟನೆ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಪ್ರತಿ ಪಾಲ್ಗುಣ ಮಾಸದಲ್ಲಿ ನಡೆಯುವ ಗ್ರಾಮದ ದೊಡ್ಡಮ್ಮತಾಯಿ ಜಾತ್ರೆಯಲ್ಲಿ (Doddammatayi Jatre) ಕುರಿಗಳ ರಕ್ತ ಹೀರುವ ಸಂಪ್ರದಾಯ ನಡೆದಿದೆ. ಅರ್ಚಕ ಕುರಿ ರಕ್ತ ಹೀರುವ ವಿಡಿಯೋ  ಜೀ ಕನ್ನಡ ನ್ಯೂಸ್ ಗೆ ಲಭ್ಯವಾಗಿದ್ದು, 20 ಕ್ಕೂ ಹೆಚ್ಚು ಕುರಿಗಳ ಬಲಿ ಕೊಟ್ಟಿದ್ದು ಅದರ ರಕ್ತವನ್ನು ಅರ್ಚಕರು ಕುಡಿದಿದ್ದಾರೆ ಎಂದು ಭಕ್ತಾದಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ- Peacocks Found Dead ವಿಷ ಉಣಿಸಿ ರಾಷ್ಟ್ರ ಪಕ್ಷಿ ನವಿಲುಗಳ ಮಾರಣಹೋಮ..!?

ದೊಡ್ಡಮ್ಮತಾಯಿ ರಥದಲ್ಲಿ ನಿಂತಿರುವ ಅರ್ಚಕನಿಗೆ (Archaka) ಅಲ್ಲೇ ಬಲಿಕೊಟ್ಟ ಕುರಿಯನ್ನು ನೀಡಿದಾಗ ಹಲ್ಲಿನಿಂದ ಕಚ್ಚಿ ರಕ್ತ ಹೀರಿದರೆ ದೇವರನ್ನು ಸಂತೃಪ್ತಿಗೊಳಿಸಿದ ಹಾಗೆ ಎಂಬುದು ಭಕ್ತಾಧಿಗಳ ನಂಬಿಕೆಯಾಗಿದೆ. ಹರಕೆ ಹೊತ್ತ ಭಕ್ತರು ಜಾತ್ರೆ (Jatre) ವೇಳೆ ಪ್ರಾಣಿಗಳ ಬಲಿ ಕೊಡುವಾಗ ಅರ್ಚಕ ಪ್ರತಿ ಪ್ರಾಣಿಯನ್ನು ತನ್ನ ಹಲ್ಲಿನಿಂದ ಕಚ್ಚಿ ರಕ್ತ ಹೀರಿ ಕುಡಿಯುವುದು ತಲೆತಲಾಂತಗಳಿಂದ ನಡೆದುಕೊಂಡು ಬಂದಿದೆ.

ಇದನ್ನೂ ಓದಿ- Niranthara Ranga Utsava: ಮಾರ್ಚ್ 23ರಿಂದ 27ರವರೆಗೆ ‘ನಿರಂತರ ರಂಗ ಉತ್ಸವ’

ಇನ್ನು ಈ ಹಬ್ಬದಲ್ಲಿ ಸಂಬಂಧಿಕರನ್ನು ಕರೆಸಿ ಬಲಿಕೊಟ್ಟ ಕುರಿಯಿಂದ ಖಾದ್ಯ ತಯಾರಿಸಿ ಉಣ ಬಡಿಸುತ್ತೇವೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ವಿಲಕ್ಷಣ ಸಂಪ್ರದಾಯವೊಂದು ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿರುವುದು ಅಚ್ಚರಿಯೇ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News