ಬೆಂಗಳೂರು: ಗುಜರಾತ್ ನ ಶಿಕ್ಷಣ ಪಠ್ಯ ಕ್ರಮದಲ್ಲಿ ಭಗವತ್ ಗೀತೆ ಅಳವಡಿಕೆ ಹಿನ್ನಲೆಯಲ್ಲಿ ರಾಜ್ಯದಲ್ಲೂ ಪಠ್ಯ ಕ್ರಮದಲ್ಲಿ ನೀತಿ ಪಾಠದಲ್ಲಿ ಗೀತೆ, ಕುರಾನ್ ಹಾಗೂ ಬೈಬಲ್ ನ ಸಂಗತಿಗಳನ್ನು ಅಳವಡಿಕೆ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ. ಈ ಬಗ್ಗೆ ಶಿಕ್ಷಣ ತಜ್ಞರಿಂದ ಅಭಿಪ್ರಾಯ ಪಡೆಯಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಈ ಕುರಿತಂತೆ ವಿಧಾನಸೌಧದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (Education Minister BC Nagesh), ಶಿಕ್ಷಣ ಪಠ್ಯ ಕ್ರಮದಲ್ಲಿ ಮಾರಲ್ ಸೈನ್ಸ್ ಅಳವಡಿಸುವಂತೆ ಹಲವರು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಠ್ಯ ಕ್ರಮದಲ್ಲಿ ಮಾರಲ್ ಸೈನ್ಸ್ ಅಳವಡಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಮುಖ್ಯಮಂತ್ರಿಗಳ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ- ಈ ಊರಲ್ಲೊಂದು ವಿಲಕ್ಷಣ ಸಂಪ್ರದಾಯ: 20ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿದ ಅರ್ಚಕ
ಶಿಕ್ಷಣ ತಜ್ಞರ ಸಲಹೆ ಪಡೆದು ಪಠ್ಯದಲ್ಲಿ ಭಗವತ್ ಗೀತೆ (Bhagavat Geeta) ಸೇರ್ಪಡೆ ಬಗ್ಗೆ ತೀರ್ಮಾನ ಮಾಡುತ್ತೇವೆ. ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ. ಕೃಷ್ಣ ಅವರೂ ಸಹ ಸಿಎಂ ಆಗಿದ್ದಾಗ ಭಗವದ್ಗೀತೆ ಓದುತ್ತಿದ್ದರಂತೆ. ಪ್ರತಿ ರಾತ್ರಿ ಭಗವದ್ಗೀತೆ ಓದುತ್ತಿದ್ದೇ ಅವರ ಸ್ಟ್ರೆಂಥ್ ಅಂತಾ ಹೇಳಿದ್ದರು. ಈ ಬಗ್ಗೆ ಸ್ವತಃ ಎಸ್. ಎಂ. ಕೃಷ್ಣ ಅವರೇ ಹೇಳಿದ್ದರು ಎಂಬುದನ್ನು ಶಿಕ್ಷಣ ಸಚಿವರು ಉಲ್ಲೇಖಿಸಿದರು.
ಇದನ್ನೂ ಓದಿ- ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿ ಹಾಗೂ ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ನನ್ನ ತಾಯಿ ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಹೇಳಿಕೊಟ್ಟಿದ್ದೇ ನಾನು ಸತ್ಯವಂತನಾಗಿರಲು ಸ್ಫೂರ್ತಿ. ಯೌವ್ವನದಲ್ಲಿ ಸತ್ಯ ಹರಿಶ್ಚಂದ್ರರ ನಾಟಕ ನೋಡಿದ್ದಕ್ಕೆ ನಾನು ಸತ್ಯವಂತನಾಗಿದ್ದು ಎಂದು ಮಹಾತ್ಮ ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ. ಹೀಗಾಗಿ ಶಿಕ್ಷಣ ಪಠ್ಯ ಕ್ರಮದಲ್ಲಿ ಮಾರಲ್ ಸೈನ್ಸ್ ಅಳವಡಿಸುವುದರ ಬಗ್ಗೆ ಚಿಂತಿಸಲಾಗುತ್ತಿದ್ದು, ಈ ಕುರಿತಂತೆ ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುವುದು ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.