ಕಲಬುರಗಿ: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಕೊನೆಗೆ ಸಿಐಡಿ ಅಧಿಕಾರಿಗಳು ಪ್ರಮುಖ ಆರೋಪಿ, ಹಗರಣದ ರೂವಾರಿ ದಿವ್ಯಾ ಹಾಗರಗಿಯನ್ನು ಬಂಧಿಸಿದ್ದಾರೆ. ಅಕ್ರಮ ನಡೆದಿರುವ ಜ್ಞಾನಜ್ಯೋತಿ ಶಾಲೆಯ ಒಡತಿ ಹಾಗೂ ಬಿಜೆಪಿ ನಾಯಕಿಯಾಗಿರುವ ದಿವ್ಯಾಳನ್ನು ಮಹಾರಾಷ್ಟ್ರದ ಪುಣೆ ಬಳಿ ಸಿಐಡಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ದಿವ್ಯಾ ಹಾಗರಗಿ ಜೊತೆ ಶಿಕ್ಷಕಿಯರಾದ ಅರ್ಚನಾ ಮತ್ತು ಸುನಂದಾ ಕೂಡ ಬಂಧನವಾಗಿದೆ. ಪುಣೆ ಬಳಿ ಹೋಟೆಲ್‌ವೊಂದರಲ್ಲಿ ಊಟ ಮಾಡುತ್ತಿರುವಾಗಿ ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ(ಏ.28) ಶಹಬಾದ್ ನಗರರಸಭೆಯ ಜ್ಯೋತಿ ಪಾಟೀಲ್‌ರನ್ನು ಬಂಧಿಸಲಾಗಿತ್ತು. ಜ್ಯೋತಿ ಬಂಧನದ ನಂತರ ದಿವ್ಯಾ ಹಾಗರಗಿ ಕೂಡ ಲಾಕ್ ಆಗಿದ್ದಾರೆ.


ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ನೊಟೀಸ್ ಜಾರಿ: ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ತರಾಟೆ


ಜ್ಯೋತಿ ಪಾಟೀಲ್ ಫೋನ್‌ನಿಂದ ದಿವ್ಯಾಗೆ ಸಿಐಡಿ ಅಧಿಕಾರಿಗಳು ಕಾಲ್ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಇದರ ಆಧಾರದ ಮೇಲೆಯೇ ಟವರ್ ಲೋಕೆಷನ್ ಟ್ರೇಸ್ ಮಾಡಿ ದಿವ್ಯಾ ಇರುವ ಸ್ಥಳವನ್ನು ಸಿಐಡಿ ಅಧಿಕಾರಿಗಳ ಟೀಂ ಪತ್ತೆ ಹಚ್ಚಿದೆ. ಕಳೆದ 18 ದಿನಗಳಿಂದ ಮಹಾರಾಷ್ಟ್ರದಲ್ಲಿ ದಿವ್ಯಾ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದಳು.   


ಮತ್ತೊಬ್ಬ ಪ್ರಮುಖ ಆರೋಪಿ ಬಂಧನ


ಪಿಎಸ್‌ಐ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನೂ ಬಂಧಿಸಿದ್ದಾರೆ. ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನದ ಬೆನ್ನಲೆ ಇನ್ನೊಬ್ಬ ಪ್ರಮುಖ ಆರೋಪಿ ಮಂಜುನಾಥ ಮೇಳಕುಂದಿ ಬಂಧನಕ್ಕೆ ಸಿಐಡಿ ತಂಡ ಬಲೆ ಬೀಸಿತ್ತು. ನೀರಾವರಿ ಇಲಾಖೆ ಇಂಜಿನಿಯರ್ ಆಗಿದ್ದ ಮಂಜುನಾಥ್ ಮೇಳಕುಂದಿ ದಿವ್ಯಾ ಒಡೆತನದ ಜ್ಞಾನಜ್ಯೋತಿ ಇಂಗ್ಲಿಷ್ ಮಿಡಿಯಂ ಶಾಲೆಯಲ್ಲಿ ತಮ್ಮ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಸಿದ್ದ. ಮಂಜುನಾಥ ಪತ್ತೆಗೆ ಸಿಐಡಿಯ 2ವಿಶೇಷ ತಂಡ ಬೆನ್ನು ಬಿದ್ದಿತ್ತು. ಈ ಹಿಂದೆ ಬ್ಲೂಟೂಥ್ ಪ್ರಕರಣದಲ್ಲಿ ಈತನ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ 2 ವಾರದಿಂದ ಈತನೂ ಕೂಡ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದ.


ಇದನ್ನೂ ಓದಿ: "ಕಾಂಗ್ರೆಸ್ ನಾಯಕರು ದಾಖಲೆಗಳಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ"


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.