ಕಲಬುರಗಿಯಲ್ಲಿ ಚಾಲಕನಿಲ್ಲದೆ ಚಲಿಸಿದ ರೈಲ್ವೆ ಇಂಜಿನ್
ಕಲಬುರಗಿ: ವಿದ್ಯುತ್ ಚಾಲಿತ ರೈಲು ಇಂಜಿನ್ ಒಂದು ಚಾಲಕನಿಲ್ಲದೆ ಸುಮಾರು ಆರು ಕಿಲೋಮೀಟರ್ ಚಲಿಸಿದ ಘಟನೆ ಬುಧವಾರ ನಡೆದಿದೆ.
ಕಲಬುರಗಿ ಜಿಲ್ಲೆಯ, ಚಿತ್ತಾಪುರ ತಾಲೂಕಿನ ವಾಡಿ ರಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇಂಜಿನ್ ಹೋಗುತ್ತಿರುವುದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಬೈಕ್ ನಲ್ಲಿ ಹೋಗಿ ರೈಲು ಇಂಜಿನ್ ಅನ್ನು ನಿಲ್ಲಿಸಿದ್ದಾರೆ. ರೈಲ್ವೆ ಸಿಬ್ಬಂದಿಗಳು ಕೊಂಚೂರು ಬಳಿ ಇಂಜಿನ್ ತಡೆದು ವಾಪಸ್ ನಿಲ್ದಾಣಕ್ಕೆ ಚಲಾಯಿಸಿಕೊಂಡು ಬಂದಿದ್ದಾರೆ.
ನಾಲವಾರ ಕಡೆ ರೈಲ್ವೆ ಹಳಿ ಡೌನ್ ಲೆವೆಲ್ ಇದ್ದುದ್ದರಿಂದ ಇಂಜಿನ್ ತಾನಾಗಿಯೇ ಚಲಿಸಿದೆ. ಕೇವಲ ಇಂಜಿನ್ ಮಾತ್ರ ಇದ್ದದ್ದರಿಂದ ಯಾವುದೇ ಅನಾಹುತ ದುರ್ಘಟನೆ ಸಂಭವಿಸಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.