ಮೈಸೂರು: ರೈಲ್ವೆ ಗುಣಮಟ್ಟ ಮತ್ತು ಸ್ಥಿತಿಗತಿಗಳನ್ನು ತಿಳಿಯಲು ರೈಲ್ವೆ ಸಚಿವ ಪಿಯೂಶ್ ಗೋಯಲ್ ಕಾವೇರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಸೋಮವಾರ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡಿದರು.


COMMERCIAL BREAK
SCROLL TO CONTINUE READING

ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಸೋಮವಾರ(ಫೆ.19) ಮೈಸೂರು-ಬೆಂಗಳೂರು ನಡುವೆ ನೂತನವಾಗಿ ನಿರ್ಮಾಣವಾಗಿರುವ ಜೋಡಿ ಹಳಿ ವಿದ್ಯುದೀಕರಣ ಹಾಗೂ ಮೈಸೂರು-ಉದಯಪುರ ನಡುವೆ ಪ್ಯಾಲೆಸ್ ಕ್ವೀನ್ ಹಮ್ ಸಫರ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರೈಲ್ವೆ ಸಚಿವ ಪಿಯೂಶ್ ಗೋಯಲ್ ನಂತರ ಕಾವೇರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದು ವಿಶೇಷವಾಗಿತ್ತು.


ಮೈಸೂರುನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸಿದ ರೈಲ್ವೆ ಸಚಿವ ಪಿಯೂಶ್ ಗೋಯಲ್ ರೈಲಿನಲ್ಲಿ ತಮ್ಮ ಅನುಭವವನ್ನು ಟ್ವಿಟ್ಟರ್ ಮೂಲಕ ಈ ರೀತಿ ಹಂಚಿಕೊಂಡಿದ್ದಾರೆ.


* ಮೈಸೂರುನಿಂದ ಬೆಂಗಳೂರಿಗೆ ರೈಲು ಪ್ರಯಾಣ. ಸಹ ಪ್ರಯಾಣಿಕರಿಂದ ಪಡೆದ ಪ್ರತಿಕ್ರಿಯೆ ನಮ್ಮ ಸುಧಾರಣೆ ಮತ್ತು ಉತ್ತಮ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.



* ಕರ್ನಾಟಕದ ರೈಲಿನಲ್ಲಿರುವ ಯುವ ಸ್ನೇಹಿತರ ಜೊತೆ. ಮಕ್ಕಳು ರೈಲು ಮೂಲಕ ಪ್ರಯಾಣಿಸುತ್ತಿದ್ದಾರೆ ಮತ್ತು ನಿಮ್ಮ ಮುಂದಿನ ಕುಟುಂಬ ವಿಹಾರವು ಭಾರತೀಯ ರೈಲ್ವೆಯ ಸೇವೆಗಳನ್ನು ಬಳಸಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ.



* ತಮ್ಮ ಸಮರ್ಪಣೆ ಮತ್ತು ಕಠಿಣ ಕೆಲಸಕ್ಕಾಗಿ ರೈಲ್ವೆ ಸಿಬ್ಬಂದಿಗೆ ಪ್ರಶಂಸೆ.