Chikkamagaluru Rain Effect: ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಜನ ಜೀವನವನ್ನು ಅಸ್ತವ್ಯಸ್ತಗೊಳಿಸುವುದರ ಜೊತೆಗೆ ರೈತರು ಮತ್ತು ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಜಿಲ್ಲಾದ್ಯಂತ ಕಾಫಿ ಬೆಳೆ ಕಟಾವಿಗೆ ಬಂದಿದ್ದು, ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆ ನೆಲಕ್ಕೆ ಉದುರಿ, ರೈತರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...


COMMERCIAL BREAK
SCROLL TO CONTINUE READING

ಕಾಫಿನಾಡಾದ ಮಲೆನಾಡು ಭಾಗದಲ್ಲಿ ನಿರಂತರವಾಗಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ  ಸುರಿಯಿತಿದ್ದು, ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ ಆಗುತ್ತಿದೆ. ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಬಾಳೂರಿನಲ್ಲಿ ಭಾರೀ ಮಳೆ ಆಗಿ, ಒಂದೆಡೆ ಕಾಫಿ ಬೆಳೆ ಕೊಚ್ಚಿ ಹೋಗ್ತಿದೆ. ಮತ್ತೊಂದೆಡೆ ಭಾರೀ ಮಳೆ-ಗಾಳಿಗೆ ಕಾಫಿ ಬೆಳೆ ನೆಲಕ್ಕೆ ಬೀಳಲು ಪ್ರಾರಂಭವಾಗಿದೆ.


ಇದನ್ನೂ ಓದಿ- ಖಾಸಗಿ ಸಾರಿಗೆಗೂ ʼಶಕ್ತಿ ಯೋಜನೆʼ ವಿಸ್ತರಿಸುವಂತೆ ಸರ್ಕಾರಕ್ಕೆ ಸೂಚಸಿದ ಹೈಕೋರ್ಟ್‌..!


ಅಕಾಲಿಕ ಮಳೆಗೆ ಮಲೆನಾಡಿಗರು ಹೈರಾಣು ಆಗಿದ್ದು, ಕಾಫಿ ಕೊಯ್ಲು ಸಮಯದಲ್ಲಿನ ಮಳೆಯಿಂದ ಬೆಳೆ ನಾಶ ಆಗಿ, ಮಳೆಯಲ್ಲಿ ಬಿದ್ದ ಹಣ್ಣನ್ನ ಬೆಳೆಗಾರರು ಆರಿಸುವಂತಾಗಿದೆ. ಹಗಲು ರಾತ್ರಿ ಎನ್ನದೆ ಕಣ್ಣು ಮುಚ್ಚಿ ಸುರಿಯುತ್ತಿರುವ ಮಳೆ ಒಂದೆಡೆ ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ಅಡಚಣೆ ಉಂಟು ಮಾಡಿದ್ದು ಮೈ ಕೊರೆಯುವ ಚಳಿ ದಟ್ಟ ಮಂಜು ಮತ್ತು ಮಳೆ ಮಹಿಳೆಯರು ಮಕ್ಕಳು ಹಾಗೂ ವೃದ್ಧರು ಮನೆಯಿಂದ ಹೊರ ಬಾರದಂತಹ ಸ್ಥಿತಿ ನಿರ್ಮಿಸಿದೆ. 


ಇನ್ನೊಂದೆಡೆ ಮಳೆ ಕೊರತೆ ಯಿಂದಾಗಿ ರೈತರು ಮತ್ತು ಬೆಳೆಗಾರರು ಬೆಳೆದಿದ್ದ ಅಲ್ಪ ಸ್ವಲ್ಪ ಬೆಳೆ ಇದೀಗ ಅಕಾಲಿಕ ಮಳೆಯಿಂದಾಗಿ ಮಣ್ಣು ಪಾಲಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿಯಲ್ಲಿ ರೈತರು ಮತ್ತು ಬೆಳೆಗಾರರಿದ್ದಾರೆ. ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಹತ್ತಾರು ಕೋಟಿ ರೂ. ನಷ್ಟ ಸಂಭವಿಸಿದ್ದು, ಕೇಂದ್ರ ಸರ್ಕಾರ ಸಂಸದರ ಸಮಿತಿ ರಚಿಸಿ ಕಾಫಿ ನಷ್ಟದ ಸಮೀಕ್ಷೆ ನಡೆಸಬೇಕು. ಸೂಕ್ತ ಪರಿಹಾರ ನೀಡಬೇಕು. ಬೆಳೆಗಾರರಿಗೆ ಮಾರಕವಾಗಿರುವ ಸರ್ಫೇಸಿ ಕಾಯ್ದೆಯನ್ನು ಕೂಡಲೇ ರದ್ದು ಪಡಿಸಬೇಕು, ಕಾಫಿ ಒಣಗಿಸುವ ಯಂತ್ರ ಪ್ರತಿಯೊಬ್ಬ ರೈತನಿಗೂ ಒದಗಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ. 


ಇದನ್ನೂ ಓದಿ- ರಾಮಮಂದಿರ ಉದ್ಘಾಟನೆ ದಿನ ರಾಜ್ಯದಲ್ಲಿ ವಿದ್ಯುತ್ ಸ್ಥಗಿತ: ಕಾಂಗ್ರೆಸ್ ವಿರುದ್ಧ BJP ಗಂಭೀರ ಆರೋಪ!


ಒಟ್ಟಾರೆಯಾಗಿ, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಕಾಫಿ ಬೆಳೆಗಾರರು ಹೈರಾಣು ಆಗಿದ್ದು, ಅಕಾಲಿಕ ಮಳೆಗೆ ಕಾಫಿ ಬೆಳೆ ಕೊಚ್ಚಿ ಹೋಗುತ್ತಿದೆ. ಒಂದು ಕಡೆ ವರ್ಷ ಪೂರ್ತಿ ಕಾಡು ಪ್ರಾಣಿಗಳ ಹಾವಳಿಗೆ ಅರ್ಧ ಬೆಳೆ ಕಳೆದುಕೊಂಡಿರುವ ರೈತರು, ಇದೀಗ ಅಕಾಲಿಕ ಮಳೆಗೆ ಉಳಿದರ್ಧ ಬೆಳೆಯನ್ನೂ ಕೂಡ ಕಳೆದುಕೊಳ್ಳುವಂತಾಗಿದೆ. ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಕಾಫಿ ಬೆಳೆಗಾರರು ಹಿಡಿ ಶಾಪ ಹಾಕುವಂತಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.