ಬೆಂಗಳೂರು: ಜನವರಿ 22ರಂದು ಅಯೋಧ್ಯೆಯ ಪ್ರಭು ಶ್ರೀರಾಮ ಮಂದಿರದ ಉದ್ಘಾಟನೆ ಅದ್ಧೂರಿಯಾಗಿ ನೆರವೇರಲಿದೆ. ರಾಮ ಮಂದಿರದ ಉದ್ಘಾಟನೆಯ ಸಂಭ್ರಮದಲ್ಲಿ ಇಡೀ ದೇಶವೇ ಇರುವಾಗ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಂಭ್ರಮವನ್ನು ಕೆಡಿಸಲು ಕುತಂತ್ರ ಹೆಣೆಯುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಅಯೋಧ್ಯೆಗೆ ಹೋಗುವವರಿಗೆ ರಾಜ್ಯ ಕಾಂಗ್ರೆಸ್ ಗೋಧ್ರಾ ಘಟನೆಯನ್ನು ನೆನಪಿಸಿ, ಅದೇ ರೀತಿಯ ಬೆದರಿಕೆ ಹಾಕಿದೆ. ಈ ಸಂಭ್ರಮದ ಶುಭ ಘಳಿಗೆ ವೇಳೆ ಕಾಂಗ್ರೆಸ್ ಸುಳ್ಳು ಸುದ್ಧಿ ಹಬ್ಬಿಸುವುದರಲ್ಲಿ ನಿರತವಾಗಿದೆ. ರಾಮಭಕ್ತರು ಸಂಭ್ರಮಿಸದಂತೆ ರಾಜ್ಯ ಸರ್ಕಾರ ತಂತ್ರ ರೂಪಿಸಿದೆ ಎಂದು ಅಂತಾ ಕಿಡಿಕಾರಿದೆ.
ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳ
ಪ್ರಭು ಶ್ರೀರಾಮ ಮಂದಿರದ ಉದ್ಘಾಟನೆ ಜನವರಿ 22 ರಂದು ಅದ್ಧೂರಿಯಾಗಿ ಆಗುತ್ತಿದೆ. ಇಡೀ ದೇಶವೇ ಸಂಭ್ರಮದಲ್ಲಿರುವಾಗ, @INCKarnataka ಸರ್ಕಾರ ರಾಜ್ಯದಲ್ಲಿ ಸಂಭ್ರಮವನ್ನು ಕೆಡಿಸಲು ಹೆಣಿಯುತ್ತಿರುವ ಕುತಂತ್ರಗಳು:
▪️ಅಯೋಧ್ಯಗೆ ಹೋಗುವವರಿಗೆ ಗೋಧ್ರಾ ಬೆದರಿಕೆ
▪️ಶುಭ ಘಳಿಗೆ ವೇಳೆ ಸುಳ್ಳು ಸುದ್ಧಿ ಹಬ್ಬಿಸುವುದು
▪️ರಾಮ ಭಕ್ತರು ಸಂಭ್ರಮಿಸದಂತೆ…— BJP Karnataka (@BJP4Karnataka) January 6, 2024
ರಾಮ ಭಕ್ತರು ಸಂಭ್ರಮಿಸದಂತೆ 144 ಸೆಕ್ಷನ್ ಜಾರಿಗೆ ಸಿದ್ಧತೆ ನಡೆದಿದೆ. ರಾಮ ಮಂದಿರ ಉದ್ಘಾಟನೆಯ ದಿನ ರಾಜ್ಯದಾದ್ಯಂತ ವಿದ್ಯುತ್ ಸ್ಥಗಿತಗೊಳಿಸಲು ತಂತ್ರ ಹೆಣೆಯಲಾಗಿದೆ. ಮನೆ ಮನೆಯ ಟಿವಿ ಕೇಬಲ್ ಸಂಪರ್ಕ ತಪ್ಪಿಸುವ ದುರುದ್ದೇಶ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ರಾಮನ ಬಂಟ ಹನುಮನ ನಾಡಿನಲ್ಲಿ ಸಿಎಂ ಸಿದ್ದರಾಮಯ್ಯನವರ ಸರ್ಕಾರದ ದುರಾಡಳಿತಕ್ಕೆ, ಕುತಂತ್ರಕ್ಕೆ, ರಾಜ್ಯದ ಜನರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಂತಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಯುವ ನಿಧಿ ಯೋಜನೆಯಡಿ ಹೆಚ್ಚು ನೊಂದಣಿ ಮಾಡಿಕೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.