Cabinet Minister: ಟೀಂ ಲೀಡರ್ ರಾಜೀನಾಮೆ: ಸಿಎಂ ಮನೆಗೆ ಎಂಟ್ರಿ ನೀಡಿದ ಮಿತ್ರಮಂಡಳಿ!
ಮಿತ್ರಮಂಡಳಿ ಸಚಿವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಬೆಂಗಳೂರು: ಒಂದು ಕಡೆ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಸೆಕ್ಸ್ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ನಂತರ ರಾಜಕೀಯ ಬೆಳವಣಿಗೆಗಳು ನಡೆದಿದ್ದು ಮಿತ್ರಮಂಡಳಿ ಸಚಿವರು ಸಿಎಂ ಯಡಿಯೂರಪ್ಪ(BS Yediyurappa) ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
Karnataka Congress: 'ಕಮಲಕ್ಕೆ ಹಾರಿ ಬಂದ 15 ಶಾಸಕರಿಗೆ ಬಿಜೆಪಿ ರಾಜಕೀಯ ಸಮಾಧಿ'
ಇಂದು ಮಧ್ಯಾಹ್ನ ಸಿಎಂ ಭೇಟಿಯಾಗಿ ಮಿತ್ರಮಂಡಳಿಯ ಸಚಿವರು ಮಾತುಕತೆ ನಡೆಸಿದ್ದಾರೆ. ಮಧ್ಯಾಹ್ನ ಕಾವೇರಿ ನಿವಾಸದಲ್ಲಿ ಸುಧಾಕರ್(Dr K Sudhakar), ಎಸ್ ಟಿ ಸೋಮಶೇಖರ್, ನಾರಾಯಣಗೌಡ, ಎಂಟಿ ಬಿ ನಾಗರಾಜ್, ಬಿಸಿ ಪಾಟೀಲ್ ಸಿಎಂ ಭೇಟಿಯಾಗಿದ್ದಾರೆ.
Ramesh Jarkiholi: ರಮೇಶ್ ಜಾರಕಿಹೊಳಿ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು!
ಮಧ್ಯಾಹ್ನ ಭೋಜನ ವಿರಾಮದ ವೇಳಿ ಸಿಎಂ ನಿವಾಸಕ್ಕೆ ತೆರಳಿ ಸಿಎಂ ಜೊತೆ ಚರ್ಚೆ ಮಾಡಿ ಬಂದಿದ್ದಾರೆ. ರಮೇಶ್ ಜಾರಕಿಹೊಳಿ(Ramesh Jarkiholi) ಪ್ರಕರಣದ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ST Somashekhar: 22 ಲಕ್ಷ ರೈತರಿಗೆ ₹ 14 ಸಾವಿರ ಕೋಟಿ ಸಾಲ..!
ರಮೇಶ್ ಜಾರಕಿಹೊಳಿ ರಾಜೀನಾಮೆ ಬಳಿಕ ಇದೇ ಮೊದಲು ಬಾರಿಗೆ ಎಲ್ಲಾ ಮಿತ್ರ ಮಂಡಳಿಯ ಸಚಿವರು(Cabinet Minister) ಸಿಎಂ ಭೇಟಿಯಾಗಿ ಚರ್ಚೆ ಮಾಡಿ ಬಂದಿರುವುದು ಸಾಕಷ್ಟು ಕೂತಹಲ ಮೂಡಿಸಿದೆ.
SSLC Examination : ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ..!
ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಇದ್ದಕ್ಕಿದ್ದಂತೆ ಹದಿನೇಳು ಜನ ಶಾಸಕ(MLAs)ರು ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದರು. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿಯೇ ಟೀಂ ಪ್ರಯಾಣ ಮಾಡಿತ್ತು. ಅದಾದ ಮೇಲೆ ಬದಲಾದ ರಾಜಕಾರಣದ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷಗಳು ಉರುಳಿದೆ.
Ramesh Jarkiholi: ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಖಾತೆ ಯಾರ ಮುಡಿಗೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.