ಬೆಂಗಳೂರು: RBI Latest Decision - ಭಾರತೀಯ ರಿಸರ್ವ್ ಬ್ಯಾಂಕ್ (RBI), ಕರ್ನಾಟಕದ ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನ (Deccan Urban Co-Operative Bank) ವ್ಯವಹಾರದ ಮೇಲೆ ನಿರ್ಬಂಧ ವಿಧಿಸಿದೆ. ಇದರಿಂದ ಇನ್ಮುಂದೆ ಈ ಬ್ಯಾಂಕ್ ಯಾವುದೇ ಹೊಸ ಸಾಲವನ್ನು ಜಾರಿಗೊಳಿಸುವಂತಿಲ್ಲ ಹಾಗೂ ಯಾವುದೇ ರೀತಿಯ ಡಿಪಾಸಿಟ್ ಪಡೆಯುವ ಹಾಗಿಲ್ಲ. ಈ ಬ್ಯಾಂಕ್ ನ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟ ಹಿನ್ನೆಲೆ RBI ಈ ನಿರ್ಬಂಧ ಘೋಷಿಸಿದೆ. ಬ್ಯಾಂಕ್ ಮೇಲಿನ ಈ ನಿರ್ಬಂಧದ ಅರ್ಥ, ಬ್ಯಾಂಕ್ ನ ಲೈಸನ್ಸ್ ರದ್ದುಗೊಳಿಸಲಾಗಿದೆ ಎಂದಲ್ಲ ಎಂದು RBI ಸ್ಪಷ್ಟಪಡಿಸಿದೆ.


COMMERCIAL BREAK
SCROLL TO CONTINUE READING

ಗ್ರಾಹಕರು ಕೇವಲ ರೂ.1000 ಮಾತ್ರ ಹಿಂಪಡೆಯಬಹುದು
ಈ ಬ್ಯಾಂಕಿನ ಆರ್ಥಿಕ ಸ್ಥಿತಿ ಎಷ್ಟೊಂದು ಹದಗೆಟ್ಟಿದೇ ಎಂದರೆ, RBI ಈ ಬ್ಯಾಂಕಿನ ಎಲ್ಲಾ ಚಾಲ್ತಿ ಹಾಗೂ ಉಳಿತಾಯ ಖಾತೆ ಗ್ರಾಹಕರಿಗೆ 6 ತಿಂಗಳಿಗೆ ಒಂದು ಬಾರಿ ಕೇವಲ 1000 ರೂ. ಹಣ ಹಿಂಪಡೆಯುವ ಅನುಮತಿ ನೀಡಿದೆ. ಆದರೆ, ಈ ಆರು ತಿಂಗಳಲ್ಲಿ ಗ್ರಾಹಕರ ಹಣಕ್ಕೆ ಸಂಪೂರ್ಣ ಬಡ್ಡಿ ಪಾವತಿಸಲಾಗುವುದು ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟಪಡಿಸಿದೆ. ಇನ್ನೊಂದೆಡೆ ಗ್ರಾಹಕರು ತಮ್ಮ ಸಾಲ ತೀರಿಸಲು ಬ್ಯಾಂಕ್ ನಲ್ಲಿರುವ ಹಣವನ್ನು ಬಳಕೆ ಮಾಡಬಹುದು ಎಂದು RBI ಹೇಳಿದೆ. ಆದರೆ ಇದಕ್ಕೆ ಕೆಲ ಷರತ್ತುಗಳು ಕೂಡ ಅನ್ವಯಿಸಲಿವೆ.


ಕೇವಲ ಆರು ತಿಂಗಳ ತಡೆ, ಆದರೆ ಆತಂಕ ಬೇಡ
RBI ಪ್ರಕಾರ ಈ ಬ್ಯಾಂಕ್ ನಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಅಂದರೆ ಫೆಬ್ರುವರಿ 19, 2021 ರಿಂದ ಮುಂದಿನ ಆರು ತಿಂಗಳುಗಳ ಕಾಲ ಯಾವುದೇ ರೀತಿಯ ವ್ಯವಹಾರಗಳಿಗೆ ತಡೆ ಇರಲಿದೆ. ಆದರೆ ಈ ತಡೆಯ ಅರ್ಥ ಬ್ಯಾಂಕ್ ನ ಲೈಸನ್ಸ್ ರದ್ದುಗೊಳಿಸಲಾಗಿದೆ ಎಂದು ಭಾವಿಸಬಾರದು ಎಂದು ಆರ್.ಬಿ.ಐ (Reserve Bank Of India) ಸ್ಪಷ್ಟಪಡಿಸಿದೆ. ನಿರ್ಬಂಧನೆಗಳನ್ನು ಪಾಲಿಸಿ ಈ ಬ್ಯಾಂಕ್ ಎಂದಿನಂತೆ ತನ್ನ ಕೆಲಸ ಮುಂದುವರೆಸಲಿದೆ. ಈ ಆರು ತಿಂಗಳ ನಿರ್ಬಂಧನೆಯ ಅವಧಿಯ ಬಳಿಕ ಪುನಃ ಬ್ಯಾಂಕ್ ನ ಸಮೀಕ್ಷೆ ನಡೆಸಲಾಗುವುದು. ಆದರೆ, ಕೆಲಸದ ಮೇಲಿನ ಬ್ಯಾನ್ ಹೊರತಾಗಿಯೂ ಶೇ.99.58 ರಷ್ಟು ಗ್ರಾಹಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು RBI ಹೇಳಿದೆ.


ಇದನ್ನೂ ಓದಿ-ಬ್ಯಾಂಕ್ ನಲ್ಲಿ Locker ಹೊಂದಿಲ್ಲವೇ? ಈಗಲೇ ಅಪ್ಲೈ ಮಾಡಿ, ಕಾರಣ ಇಲ್ಲಿದೆ


ಇದೆ ವೇಳೆ ಗ್ರಾಹಕರಿಗೆ 'ಉಳಿತಾಯ ವಿಮಾ ಹಾಗೂ ಸಾಲ ಗ್ಯಾರಂಟಿ ನಿಗಮ'ದ ವತಿಯಿಂದ ಉಳಿತಾಯದ ಮೇಲೆ ಸಿಗುವ ವಿಮಾ ಲಾಭ ನೀಡಲಾಗುವುದು. ಈ ವಿಮೆಯ ಅಡಿ ಬ್ಯಾಂಕ್ ನಲ್ಲಿ ಗ್ರಾಹಕರು ಮಾಡಿರುವ ಉಳಿತಾಯದ ಮೇಲೆ 5 ಲಕ್ಷ ರೂ.ವಿಮಾ ಕವರೇಜ್ ಸಿಗಲಿದೆ.


ಇದನ್ನೂ ಓದಿ-ಶೀಘ್ರದಲ್ಲಿಯೇ ದೇಶಾದ್ಯಂತ One Nation, One Ombudsman ಯೋಜನೆ ಜಾರಿ: RBI


RBI ಅನುಮತಿ ಪಡೆಯದೇ ಈ ಬ್ಯಾಂಕ್ ಯಾವುದೇ ರೀತಿಯ ಠೇವಣಿ ಸಂಗ್ರಹವಾಗಲಿ ಅಥವಾ ಸಾಲ ವಿಲೇವಾರಿಯಾಗಲಿ ಅಥವಾ ಇನ್ನಾವುದೇ ಚಟುವಟಿಕೆ ನಡೆಸುವುದಾಗಲಿ ಈ 6 ತಿಂಗಳ ಅವಧಿಯಲ್ಲಿ ನಡೆಸಬಾರದು ಎಂದು RBI ಹೇಳಿದೆ. ಈ ಕುರಿತು ಬ್ಯಾಂಕ್ ನಿರ್ದೇಶಕ ಮಂಡಳಿಗೆ ಫೆಬ್ರುವರಿ 18 ರಂದು ಸೂಚನೆ ನೀಡಿದ್ದ RBI, ಬ್ಯಾಂಕ್ ವತಿಯಿಂದ ಯಾವುದೇ ರೀತಿಯ ಹಣ ಪಾವತಿ ಅದರಲೂ ವಿಶೇಷವಾಗಿ ಅದು ಎಂತಹುದೇ ಸಾಲ ಮರುಪಾವತಿಯಾಗಿದ್ದರೂ ಕೂಡ ಮಾಡಬಾರದು ಎಂದು ಸೂಚಿಸಿದೆ.


ಇದನ್ನೂ ಓದಿ-Loan ಪಡೆಯುವವರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿದ RBI, Repo Rate ನಲ್ಲಿ ಯಥಾಸ್ಥಿತಿ ಕಾಯ್ದ ಕೇಂದ್ರೀಯ ಬ್ಯಾಂಕ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.