Loan ಪಡೆಯುವವರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿದ RBI, Repo Rate ನಲ್ಲಿ ಯಥಾಸ್ಥಿತಿ ಕಾಯ್ದ ಕೇಂದ್ರೀಯ ಬ್ಯಾಂಕ್

RBI New Credit Policy - RBI ಗವರ್ನರ್ 2021-22 ನೇ ಸಾಲಿನ ಆರ್ಥಿಕ ಪ್ರಗತಿ ದರ ಅಂದರೆ GDP ವೃದ್ಧಿ ದರ ಶೇ.10.5 ರಾಷ್ಟ್ರಿರಲಿದೆ ಎಂದು ಅಂದಾಜಿಸಿದ್ದಾರೆ. 2020 ರಲ್ಲಿ ನಮ್ಮ ಸಾಮರ್ಥ್ಯದ ಪರೀಕ್ಷೆಯೇ ನಡೆದಿದ್ದು, 2021ರಲ್ಲಿ ಹೊಸ ಆರ್ಥಿಕ ಯುಗದ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Written by - Nitin Tabib | Last Updated : Feb 5, 2021, 09:04 PM IST
  • ರೆಪೋ ರೇಟ್ ಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
  • GDP ದರದಲ್ಲಿ ವೇಗವಾಗಿ ಹೆಚ್ಚಳ ಅಂದಾಜು ವ್ಯಕ್ತಪಡಿಸಿದ RBI
  • ಇಲ್ಲಿವೆ RBI ನೂತನ ಘೋಷಣೆಗಳು.
Loan ಪಡೆಯುವವರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿದ RBI, Repo Rate ನಲ್ಲಿ ಯಥಾಸ್ಥಿತಿ ಕಾಯ್ದ ಕೇಂದ್ರೀಯ ಬ್ಯಾಂಕ್ title=
Reserve Bank Of India

ನವದೆಹಲಿ:  RBI New Credit Policy - ಗೃಹ ಸಾಲ ಅಥವಾ ವೈಯಕ್ತಿಕ ಸಾಲಪಡೆದುಕೊಳ್ಳುವ ಗ್ರಾಹಕರಿಗೆ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಅಸ್ತಿತ್ವದಲ್ಲಿರುವ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿರಲು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ನಿರ್ಧರಿಸಿದೆ. ಅಂದರೆ, ನಿಮ್ಮ ಸಾಲದ ಬಡ್ಡಿದರಗಳು ಈ ಸಮಯದಲ್ಲಿ ಹೆಚ್ಚಾಗುವುದಿಲ್ಲ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

ರೆಪೋ ರೇಟ್ ಶೇ.4 ರಷ್ಟು ಮುಂದುವರೆಯಲಿದೆ
ಪ್ರಮುಖ ಬಡ್ಡಿದರ ರೆಪೊ ದರ (Repo Rate)ವನ್ನು ಶೇಕಡಾ 4 ರಷ್ಟೇ ಮುಂದುವರೆಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಶುಕ್ರವಾರ ಪ್ರಕಟಿಸಿದ್ದಾರೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯ (RBI) ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸುವಾಗ, ದೇಶದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳು ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಹಣದುಬ್ಬರ ದರವು ಶೇಕಡಾ 6 ಕ್ಕೆ ಇಳಿದಿದೆ ಎಂದು ದಾಸ್ ಹೇಳಿದ್ದಾರೆ. 

2020 ರ ಮೇ 22 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಕೊನೆಯಬಾರಿಗೆ ತನ್ನ ನೀತಿಯನ್ನು ಪರಿಷ್ಕರಿಸಿತ್ತು. ಇದರಲ್ಲಿ ಬಡ್ಡಿದರವನ್ನು ಇದುವರೆಗೆ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಸಲಾಗಿದೆ. ಕೇಂದ್ರ ಬ್ಯಾಂಕ್ ಕಳೆದ ವರ್ಷ ಫೆಬ್ರವರಿಯಿಂದ  ತನ್ನ ನೀತಿಗತ ದರಗಳನ್ನು 115 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿದೆ.

ಇದನ್ನು ಓದಿ- Digital Currency ಬಿಡುಗಡೆಗೆ RBI ಸಿದ್ಧತೆ, ಬದಲಾಗಲಿದೆ ಹಣಕಾಸು ವಹಿವಾಟಿನ ಪದ್ಧತಿ

ಇದಲ್ಲದೆ ಹಣದುಬ್ಬರ ದರ ಮತ್ತೆ ಶೇ.4 ರ ಬ್ಯಾಂಡ್ ಕೆಳಗೆ ಜಾರಿಗೆ ಎಂದು RBI ಗವರ್ನರ್ ಹೇಳಿದ್ದಾರೆ.  RBI ಗವರ್ನರ್ 2021-22 ನೇ ಸಾಲಿನ ಆರ್ಥಿಕ ಪ್ರಗತಿ ದರ ಅಂದರೆ GDP ವೃದ್ಧಿ ದರ ಶೇ.10.5 ರಾಷ್ಟ್ರಿರಲಿದೆ ಎಂದು ಅಂದಾಜಿಸಿದ್ದಾರೆ. 2020 ರಲ್ಲಿ ನಮ್ಮ ಸಾಮರ್ಥ್ಯದ ಪರೀಕ್ಷೆಯೇ ನಡೆದಿದ್ದು, 2021ರಲ್ಲಿ ಹೊಸ ಆರ್ಥಿಕ ಯುಗದ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ-ಶೀಘ್ರ ಕೊನೆಗೊಳ್ಳಬಹುದು ATM Withdrawal ಮೇಲಿನ ಚಾರ್ಜ್..ಇಲ್ಲಿದೆ ಡೀಟೆಲ್ಸ್

ರೆಪೋ ರೇಟ್ ಗಳ ಆಧಾರದ ಮೇಲೆಯೇ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಇತರ ಬ್ಯಾಂಕ್ ಗಳು ಸಾಲ ಪಡೆಯುತ್ತವೆ ಎಂಬುದು ಇಲ್ಲಿ ಉಲ್ಲೇಖನೀಯ. ಫೈನಾನ್ಷಿಯಲ್ ಸೆಕ್ಟರ್ ಗೆ ಹೆಚ್ಚುವರಿ ಉಪಾಯಗಳನ್ನು ಘೋಷಿಸಿರುವ RBI ಗವರ್ನರ್, NBFCಗಳನ್ನು On Tap TLTRO ವ್ಯಾಪ್ತಿಗೆ ಸೇರಿಸಿದೆ.

ಇದನ್ನು ಓದಿ-RBI Latest Update: ಸ್ಥಗಿತಗೊಳ್ಳಲಿವೆಯೇ ರೂ.100 ಮುಖಬೆಲೆಯ ಹಳೆ ನೋಟುಗಳು...! RBI ಹೇಳಿದ್ದೇನು?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News