ಬೆಂಗಳೂರು : ಅಮರ್ಜಾ ಯೋಜನೆಯ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗಿ ಜಲಾಶಯಕ್ಕೆ ನಿರಂತರವಾಗಿ ಒಳಹರಿವು ಬರುತ್ತಿದೆ.ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ.ಗರಿಷ್ಠ ಮಟ್ಟದ ನಂತರ ಬಂದ ಒಳಹರಿವಿನ ನೀರನ್ನು ಆಣೆಕಟ್ಟೆ ಕೋಡಿಯ ಮುಖಾಂತರ ನದಿ ಪಾತಳಿಗೆ ಯಾವುದೇ ಕ್ಷಣದಲ್ಲಿ ಬಿಡಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಲಬುರಗಿ ಐ.ಪಿ.ಸಿ. ವಿಭಾಗ ನಂ.1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಆದ್ದರಿಂದ ನದಿಪಾತ್ರದ ಗ್ರಾಮಗಳಾದ ಭೂಸನೂರು, ಕೋರಳ್ಳಿ, ದಂಗಾಪುರ, ದೇವಂತಗಿ, ಜವಳಿ (ಡಿ), ಹಿತ್ತಲಶಿರೂರು, ಕೋಗನೂರು, ದಿಕ್ಸಂಗಿ, ಬಾದನಳ್ಳಿ, ಚೌಡಾಪುರ, ಮದ್ರಾ (ಬಿ), ಇಂಗಳಗಿ, ಅವರಾದ, ದೇವಲಗಾಣಗಾಪುರ-ಅವರಾದ, ತೆಲ್ಲೂರು ಗ್ರಾಮಗಳು ನದಿಯ ಪ್ರವಾಹದಿಂದ ತೊಂದರೆ ಉಂಟಾಗಬಹುದಾಗಿದೆ.


ಆದ್ದರಿಂದ ನದಿಯ ಅಕ್ಕಪಕ್ಕದ ರೈತರು, ಸಾರ್ವಜನಿಕರು ನದಿಯಲ್ಲಿ ಇಳಿದು ಈಜುವುದಾಗಲಿ, ಬಟ್ಟೆ ಒಗೆಯುವುದಾಗಲಿ, ದನಕರುಗಗಳಿಗೆ ನೀರು ಕುಡಿಸುವುದಾಗಲಿ ಅಥವಾ ಇನ್ನಿತರ ಯಾವುದೇ ಕಾರಣಕ್ಕಾಗಿ ನದಿಯಲ್ಲಿ ಇಳಿಯಬಾರದು. ನದಿಯ ಪಾತ್ರದಲ್ಲಿರುವ ಸಣ್ಣ ನೀರಾವರಿ ಮತ್ತು ಇನ್ನಿತರ ಯಾವುದೇ ಇಲಾಖೆಗಳಿಗೆ ಸಂಬಂಧಪಟ್ಟ ಆಸ್ತಿಗಳಿದ್ದಲ್ಲಿ ಮುಂಜಾಗ್ರತೆಯಾಗಿ ಸುರಕ್ಷಿತ ಕ್ರಮ ಕೈಗೊಳ್ಳಬೇಂದು ಅವರು ತಿಳಿಸಿದ್ದಾರೆ.