ಬೆಂಗಳೂರು : ಬೇಸಿಗೆ ರಜಾ-ಮಜಾ (Summer Holidays) ಕಳೆಯೋಕೆ ಮಕ್ಕಳನ್ನ ಎಲ್ಲಿಗೆ ಕರ್ಕೊಂಡು ಹೋಗೋದಪ್ಪಾ ಅಂತ ಯೋಚಿಸ್ತಿದೀರಾ..! ದೂರ ಯಾಕೆ ಬಿನ್ನಿ ಮಿಲ್ ಮೈದಾನದಲ್ಲಿ ಸುಂದರವಾದ ರೊಬೋಟಿಕ್ಸ್ ಪಕ್ಷಿಗಳ ಲೋಕ ಅನಾವರಣಗೊಂಡಿದೆ.. 


COMMERCIAL BREAK
SCROLL TO CONTINUE READING

ಏಪ್ರಿಲ್ ಹಾಗೂ ಮೇ ಎರಡು ತಿಂಗಳ ಕಾಲ ಸಂಜೆ 4 ರಿಂದ ರಾತ್ರಿ 9 ರವರೆಗೆ ಈ ಪ್ರದರ್ಶನ ಇರಲಿದೆ. ದಟ್ಟ ಕಾಡಲ್ಲಿ ಕಂಡುಬರುವ ಪಕ್ಷಿಗಳು, ಮಂಜು ಬೀಳುವ ಊರುಗಳಲ್ಲಿ ಕಾಣಸಿಗುವ ಪೆಂಗ್ವಿನ್, ಹಾಲಿವುಡ್ ಸಿನಿಮಾಗಳಲ್ಲಿ (Hollywood films) ತೋರಿಸುವ ಪೈರ್ ಡ್ರಾಗನ್, ನಾಗರಹೊಳೆಯ ಆನೆ, ಬುಡಕಟ್ಟು ಸಮುದಾಯದ ಜನರು, ಮುದ್ದುಮುದ್ದಾಗಿರುವ ಗಿಳಿ, ಮರ ಕುಟ್ಟುತ್ತಿರುವ ಮರಕುಟಿಕ, ಗರಿಬಿಚ್ಚಿ ಕುಣಿಯುತ್ತಿರುವ ನವಿಲು (peacock) , ನೀರಲ್ಲಿ ನಿಂತಿರುವ ಕೊಕ್ಕರೆ, ಆಸ್ಟ್ರಿಚ್, ಎಲಿಫೆಂಟ್  ಬರ್ಡ್ ಹೀಗೆ ಒಂದಲ್ಲ ಎರಡಲ್ಲ ಹತ್ತಾರು ವಿಧಧ ಬಣ್ಣದ ರೋಬೋಟಿಕ್ ಪಕ್ಷಿಗಳು ಹಾಗೂ ಅವುಗಳ ಇಂಪಾದ ಕೂಗಿನೊಂದಿಗೆ ಪ್ರದರ್ಶಿಸಲಾಗಿದೆ. 


ಇದನ್ನೂ ಓದಿ : ಕನ್ನಡ ಶಾಲೆಗಳ ಉಳಿವಿಗೆ ತಜ್ಞರು, ವಿದ್ವಾಂಸರೊಂದಿಗೆ ದುಂಡು ಮೇಜಿನ ಸಭೆ


ಅಷ್ಟೇ ಯಾಕೆ ದೊಡ್ಡ ಗಾತ್ರದ ಕಿಂಗ್ ಕಾಂಗ್ ಅನ್ನು ಮಕ್ಕಳು ಮುಟ್ಟಿ ಮುಟ್ಟಿ ಖುಷಿಪಟ್ಟರು. ಹಲವರು ನೆಚ್ಚಿನ ಕನ್ನಡ ಸ್ಟಾರ್ಸ್ ಆದ ಪುನೀತ್ (Puneeth Rajkumar), ಯಶ್, ದರ್ಶನ್ ಹಾಗೂ ಗಾರ್ಡನ್, ಗೊಂಬೆಗಳು, ಮುದ್ದಾದ ಪ್ರಾಣಿಗಳ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಕೇರಳ ಸಂಪ್ರದಾಯದ ಆನೆ ಮೆರವಣಿಗೆಯನ್ನೂ ಕೂಡಾ ಇಲ್ಲಿ ಪ್ರದರ್ಶಿಸಲಾಗಿದೆ. ಒಟ್ಟಿನಲ್ಲಿ ದೊಡ್ಡ ದೊಡ್ಡ ಗಾತ್ರದ ಪಕ್ಷಿ, ಆನೆಗಳು ನೋಡುಗರನ್ನು, ಮಕ್ಕಳನ್ನು ಪುಳಕಿತಗೊಳಿಸ್ತಿವೆ.


ಇದನ್ನೂ ಓದಿ : BJP Foundation Day:ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.