ಕನ್ನಡ ಶಾಲೆಗಳ ಉಳಿವಿಗೆ ತಜ್ಞರು, ವಿದ್ವಾಂಸರೊಂದಿಗೆ ದುಂಡು ಮೇಜಿನ ಸಭೆ

ಶಿಕ್ಷಣ ಸಚಿವ ಬಿ.ಸಿ‌ ನಾಗೇಶ್ ಮಾತನಾಡಿ, ಕನ್ನಡ ಶಾಲೆ ಉಳಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಕೆಲವು ವಿಷಯಗಳಿಗೆ ಕೋರ್ಟ್‌ಗಳಿಂದ ಕೆಲವು ಅಡ್ಡಿಯಾಯಿತು. ಕನ್ನಡದಲ್ಲಿ ಕಲಿತು ಪ್ರೊಫೆಷನಲ್ ಕೋರ್ಸ್‌ಗೆ ಹೋಗಲು ಸಾಧ್ಯವಿಲ್ಲ ಎಂಬುದು ಪೋಷಕರ ಆತಂಕ. ಹೀಗಾಗಿ 40 ಸಾವಿರ ಕನ್ನಡ ಶಾಲೆಗಳಿವೆ. ಈ ಪೈಕಿ 3,800 ಕನ್ನಡ ಮಾಧ್ಯಮ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. 562 ಶಾಲೆಗಳಲ್ಲಿ ಒಬ್ಬರು, ಇಬ್ಬರು ಮಕ್ಕಳಿದ್ದಾರೆ. ಶಾಲೆಗಳ ಸಂಖ್ಯೆ ಕಡಿಮೆ ಆಗಲು 2 ಕಿ.ಮೀ ಒಳಗೆ ಶಾಲೆ ಇರಬೇಕೆಂದಾಗ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ಈಗ ಕಡಿಮೆ ಆಗಿದೆ ಎಂದರು. ಈ ಬಾರಿಯೇ 3 ಸಾವಿರ ಶಾಲೆಯನ್ನು ಮಾದರಿ ಶಾಲೆ ಅಭಿವೃದ್ಧಿ ಮಾಡಲಾಗುವುದು ಏಂದು ಭರವಸೆ ನೀಡಿದರು.

Written by - Zee Kannada News Desk | Last Updated : Apr 6, 2022, 02:20 PM IST
  • ಕನ್ನಡ ಶಾಲೆಗಳ ಉಳಿವಿಗೆ ದುಂಡು ಮೇಜಿನ ಸಭೆ
  • ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಹಿರಿಯ ಸಾಹಿತಿ ಡಾ‌.ಎಸ್ ಎಲ್ ಭೈರಪ್ಪ ಭಾಗಿ
  • ದುಂಡು ಮೇಜಿನ ಸಭೆಯಲ್ಲಿ ಆರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ
ಕನ್ನಡ ಶಾಲೆಗಳ ಉಳಿವಿಗೆ ತಜ್ಞರು, ವಿದ್ವಾಂಸರೊಂದಿಗೆ ದುಂಡು ಮೇಜಿನ ಸಭೆ  title=
Kannada Schools

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ "ಕನ್ನಡ ಶಾಲೆ(Kannada Schools) ಉಳಿಸಿ- ಕನ್ನಡ ಬೆಳೆಸಿ" ಕುರಿತು ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿತ್ತು.  ಶಿಕ್ಷಣ ಸಚಿವ ಬಿ.ಸಿ ನಾಗೇಶ್(BC Nagesh), ಹಿರಿಯ ಸಾಹಿತಿ ಡಾ‌.ಎಸ್ ಎಲ್ ಭೈರಪ್ಪ, ಕ.ಸಾ.ಪ ಅಧ್ಯಕ್ಷ ಡಾ ಮಹೇಶ್ ಜೋಶಿ, ವಿದ್ವಾಂಸರಾದ ಅಷ್ಟಾವಧಾನಿ ಗಣೇಶ್ ಸೇರಿದಂತೆ ಶಿಕ್ಷಣ ತಜ್ಞರು, ಕನ್ನಡ ವಿದ್ವಾಂಸರು,ಸಾಹಿತಿಗಳು ಭಾಗಿಯಾಗಿದ್ದರು‌.

ಈ ವೇಳೆ ಮಾತನಾಡಿದ ಹಿರಿಯ ಸಾಹಿತಿ ಡಾ‌.ಎಸ್ ಎಲ್ ಭೈರಪ್ಪ ಅವರು, ಪ್ರೋತ್ಸಾಹ ಧನ ಕೊಟ್ಟು ಉತ್ತಮವಾಗಿ ಅಂಕ ಪಡೆಯುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಇದಕ್ಕಾಗಿ 200 ಕೋಟಿ ರೂ. ಅನುದಾನ ಕೊಡುವ ಕೆಲಸ ಆಗಬೇಕು ಎಂದರು. ಜೊತೆಗೆ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಎರಡೂ ಭಾಷೆಯಲ್ಲಿ ಪಾಠ ಮಾಡಬೇಕು. ಪರೀಕ್ಷೆಯೂ ಎರಡೂ ಭಾಷೆಯಲ್ಲಿ ಬರೆಯಲು ಅವಕಾಶ ಕೊಡಬೇಕು. ಪಠ್ಯಪುಸ್ತಕಗಳೂ ಎರಡೂ ಭಾಷೆಯಲ್ಲಿ ಪ್ರಿಂಟ್ ಆಗಬೇಕು ಎಂದು ಒತ್ತಾಯಿಸಿದರು.

ಇದನ್ನು ಓದಿ: BJP Foundation Day:ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿ

ಬಳಿಕ ಶಿಕ್ಷಣ ಸಚಿವ ಬಿ.ಸಿ‌ ನಾಗೇಶ್ ಮಾತನಾಡಿ, ಕನ್ನಡ ಶಾಲೆ ಉಳಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಕೆಲವು ವಿಷಯಗಳಿಗೆ ಕೋರ್ಟ್‌ಗಳಿಂದ ಕೆಲವು ಅಡ್ಡಿಯಾಯಿತು. ಕನ್ನಡದಲ್ಲಿ ಕಲಿತು ಪ್ರೊಫೆಷನಲ್ ಕೋರ್ಸ್‌ಗೆ ಹೋಗಲು ಸಾಧ್ಯವಿಲ್ಲ ಎಂಬುದು ಪೋಷಕರ ಆತಂಕ. ಹೀಗಾಗಿ 40 ಸಾವಿರ ಕನ್ನಡ ಶಾಲೆಗಳಿವೆ. ಈ ಪೈಕಿ 3,800 ಕನ್ನಡ ಮಾಧ್ಯಮ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. 562 ಶಾಲೆಗಳಲ್ಲಿ ಒಬ್ಬರು, ಇಬ್ಬರು ಮಕ್ಕಳಿದ್ದಾರೆ. ಶಾಲೆಗಳ ಸಂಖ್ಯೆ ಕಡಿಮೆ ಆಗಲು 2 ಕಿ.ಮೀ ಒಳಗೆ ಶಾಲೆ ಇರಬೇಕೆಂದಾಗ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ಈಗ ಕಡಿಮೆ ಆಗಿದೆ ಎಂದರು. ಈ ಬಾರಿಯೇ 3 ಸಾವಿರ ಶಾಲೆಯನ್ನು ಮಾದರಿ ಶಾಲೆ ಅಭಿವೃದ್ಧಿ ಮಾಡಲಾಗುವುದು ಏಂದು ಭರವಸೆ ನೀಡಿದರು.

ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ಕನ್ನಡ ಶಾಲೆಗಳು ಉಳಿದರೆ ಕನ್ನಡ ಉಳಿಯುತ್ತದೆ. ಕನ್ನಡ ಉಳಿದರೆ, ಕನ್ನಡಿಗರು ಉಳಿಯುತ್ತಾರೆ. ಕನ್ನಡಿಗರು ಉಳಿದರೆ ಕರ್ನಾಟಕ ಉಳಿಯುತ್ತದೆ. ವ್ಯಾಪಾರೀಕರಣ ಶಿಕ್ಷಣದಿಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ೨೦೧೦-೧೧ ರಲ್ಲಿ ಅಂಕಿ ಅಂಶಗಳ ಪ್ರಕಾರ 45,677 ಇದ್ದ ಸರ್ಕಾರಿ ಕನ್ನಡ ಶಾಲೆಗಳಲ್ಲಿ, ಕಳೆದ ಹತ್ತು ವರ್ಷಗಳಿಂದೀಚೆಗೆ 2426 ಶಾಲೆಗಳು ಮುಚ್ಚಿವೆ. ಇದು ನಿಜವಾಗಿಯೂ ಆತಂಕ ಪಡಬೇಕಾದದ್ದು ಎಂದು ಕಳವಳ ವ್ಯಕ್ತಪಡಿಸಿದರು. 

ಇದನ್ನು ಓದಿ: ಕನ್ನಡ ಸಿನಿಮಾ ಹವಾ: ರಿಲೀಸ್‌ಗೂ ಮೊದಲೇ 500 ಕೋಟಿ ವಸೂಲಿ ಮಾಡಿದ 'ಕೆಜಿಎಫ್‌-2'..!

ವಿಶೇಷ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಪ್ರಧಾನ ಗುರುದತ್ತ ಅವರು ಮಾತನಾಡಿ, 30 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ  12 ಸಾವಿರ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಗೋವಿಂದ ಸಮಿತಿ ವರದಿ ಮಾಡಿದೆ. ಆಂಗ್ಲ ಶಾಲೆಗಳನ್ನು ತೆರೆಯುತ್ತಿರುವ ಸರ್ಕಾರದ ಮೂರ್ಖತನದ ಕ್ರಮ ಹಾಗೂ ಅನುದಾನಿತ ಕನ್ನಡ ಶಾಲೆಗಳನ್ನು ಕೂಡಿಸುವ ಪ್ರಯತ್ನ ಆಘಾತ ತಂದಿದೆ ಎಂದರು.  

ಸಭೆಯಲ್ಲಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿಗಳು ನಿಡುಮಾಮಿಡಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಹುಕ್ಕೇರಿ ಇವರೊಂದಿಗೆ ಹಿರಿಯ ಸಾಹಿತಿಗಳು, ಪ್ರಮುಖ ಶಿಕ್ಷಣ ತಜ್ಞರು, ಚಿಂತಕರು ಹಾಗೂ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು. 

ದುಂಡು ಮೇಜಿನ ಸಭೆಯಲ್ಲಿ ಕೈಗೊಂಡ ಆರು ನಿರ್ಣಯಗಳು :
1. ಇನ್ನು ಮುಂದೆ ಸರ್ಕಾರವು ಯಾವುದೇ ಕಾರಣವನ್ನು ಮುಂದೊಡ್ಡಿ ಸರ್ಕಾರಿ, ಅನುದಾನ ರಹಿತ, ಅನುದಾನ ಸಹಿತ ಕನ್ನಡ ಮಾದ್ಯಮ ಶಾಲೆಗಳನ್ನು ಮುಚ್ಚಬಾರದು. 
2. ಕನ್ನಡ ಶಾಲೆಗಳನ್ನು ಸಬಲೀಕರಣಗೊಳಿಸುವುದಕ್ಕೆ ಆರ್.ಟಿ.ಇ. 2001ರ ಕಾಯ್ದೆ ಅನ್ವಯ ಇರುವ 9 ಮೂಲಭೂತ ಮಾನದಂಡಗಳನ್ನು ಸಮರ್ಪಕವಾಗಿ ಪರಿಪಾಲನೆ ಮಾಡತಕ್ಕದ್ದು. 
3. ರಾಜ್ಯದ ಒಟ್ಟು ಉತ್ಪನ್ನದಲ್ಲಿ (ಎಸ್.ಜಿ.ಡಿ.ಪಿ) ಕನಿಷ್ಠ ಶೇಕಡಾ 6 ರಷ್ಟು ಹಣಕಾಸನ್ನು ಶಿಕ್ಷಣಕ್ಕಾಗಿ ಪ್ರತಿವರ್ಷವೂ ಆಯವ್ಯಯದಲ್ಲಿ ಮೀಸಲಿಡಬೇಕು.
4. ಅನುದಾನ ರಹಿತ ಕನ್ನಡ ಶಾಲೆಗಳು ಉಳಿಯುವುದಕ್ಕೆ ಮತ್ತು ಬೆಳೆಯುವುದಕ್ಕೆ ವಿಶೇಷ ಅನುದಾನ ಮತ್ತು ರಿಯಾಯಿತಿಯನ್ನು ನೀಡಬೇಕು.
5. ರಾಜ್ಯ ಭಾಷೆಯೇ 1 ರಿಂದ 8 ನೆಯ ತರಗತಿಯವರೆಗೆ ಶಿಕ್ಷಣ ಮಾಧ್ಯಮವಾಗಬೇಕೆಂದು, ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕೆಂದು ರಾಜ್ಯ ಸರ್ಕಾರವು, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
6. ನೂತನ ಶಿಕ್ಷಣ ನೀತಿಯ ಪ್ರಕಾರ 2022-2023ನೇ ಶೈಕ್ಷಣಿಕ ವರ್ಷದಿಂದ ಯಾವುದೇ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಬಾರದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News