ಉಡುಪಿ : ಹಿಜಾಬ್ ವಿವಾದದ ನಡುವೆಯೇ ಉಡುಪಿ ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಸುತ್ತಮುತ್ತ ಫೆಬ್ರವರಿ 14 ರಿಂದ ಫೆಬ್ರವರಿ 19 ರವರೆಗೆ ಸೆಕ್ಷನ್ 144 ಜಾರಿಗೊಳಿಸಿದೆ. ಜಿಲ್ಲೆಯ ಪ್ರೌಢಶಾಲೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಮೆರವಣಿಗೆ ಮತ್ತು ಘೋಷಣೆಗಳಿಗೆ ಅವಕಾಶ ನಿಷೇಧಿಸಲಾಗಿದೆ.


COMMERCIAL BREAK
SCROLL TO CONTINUE READING

ಉಡುಪಿಯಲ್ಲಿ ಸೆಕ್ಷನ್ 144 ಜಾರಿ


ಉಡುಪಿ ಜಿಲ್ಲಾಡಳಿತದ(Udupi District Administration) ಈ ಆದೇಶವು ಫೆ.14ರ ಬೆಳಗ್ಗೆ 6ರಿಂದ ಫೆ.19ರ ಸಂಜೆ 6ರವರೆಗೆ ಅನ್ವಯವಾಗಲಿದೆ. ಆದೇಶದ ಪ್ರಕಾರ, ಪ್ರೌಢಶಾಲೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಪ್ರತಿಭಟನೆಗಳು ಮತ್ತು ರ್ಯಾಲಿಗಳಿಗೆ ನಿಷೇಧವಿದೆ. ಘೋಷಣೆಗಳನ್ನು ಕೊಗುವುದು, ಹಾಡುಗಳನ್ನು ಹಾಡುವುದು ಅಥವಾ ಭಾಷಣ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.


ಇದನ್ನೂ ಓದಿ : ಜಾತಿಗಣತಿ ವರದಿಯಿಂದ ಒಬಿಸಿ ಮೀಸಲಾತಿ ಅಡ್ಡಿ ಪರಿಹರಿಸಬಹುದು: ಸಿದ್ದರಾಮಯ್ಯ


ಮುನ್ನೆಚ್ಚರಿಕೆ ಕ್ರಮಗಳು!


ಸೋಮವಾರದಿಂದ ಶಾಲೆಗಳು ಪುನರಾರಂಭವಾಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ(Section 144 Implement). ಸೆಕ್ಷನ್ 144 ಜಾರಿಯಾದ ನಂತರ, ಪ್ರತಿಕೃತಿ ದಹನ, ಪಟಾಕಿ ಸುಡುವುದು, ಆಯುಧಗಳು ಮತ್ತು ಕಲ್ಲುಗಳನ್ನು ಒಯ್ಯುವುದು ಅಥವಾ ತೋರುವುದು, ಸಾರ್ವಜನಿಕವಾಗಿ ಸಿಹಿ ಹಂಚುವುದು ಮತ್ತು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ರೀತಿಯ ಅಸಭ್ಯ ವರ್ತನೆಯನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ.


ಹೈಕೋರ್ಟ್‌ನಲ್ಲಿದೆ ವಿವಾದದ ವಿಚಾರಣೆ 


ಗಮನಾರ್ಹ ಸಂಗತಿಯೆಂದರೆ, ಹಿಜಾಬ್ ವಿವಾದದ ವಿಚಾರಣೆಯ ವೇಳೆ ಹೈಕೋರ್ಟ್(Karnataka HighCourt) ಗುರುವಾರ ಅಂತಿಮ ಆದೇಶದವರೆಗೆ ವಿದ್ಯಾರ್ಥಿಗಳಿಗೆ ಯಾವುದೇ ಧಾರ್ಮಿಕ ಸಂಕೇತಗಳಾದ ಹಿಜಾಬ್, ಕೇಸರಿ ಶಾಲು ಧರಿಸಿ ಬರಲು ಅನುಮತಿ ಇಲ್ಲ ಎಂದು ಆದೇಶ ನೀಡಿತ್ತು. ಹೈಕೋರ್ಟ್‌ನ ಈ ಮಧ್ಯಂತರ ಆದೇಶದ ನಂತರ ಈಗ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲುಗಳ ಬಳಕೆಯನ್ನು ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ಶಾಂತಿ ನೆಲೆಸುವುದು ಅಗತ್ಯವಾಗಿದ್ದು, ಶೀಘ್ರದಲ್ಲೇ ಶಾಲಾ-ಕಾಲೇಜುಗಳನ್ನು ತೆರೆಯಬೇಕು ಎಂದು ಹೈಕೋರ್ಟ್ ಹೇಳಿದೆ.


ಇದನ್ನೂ ಓದಿ : ಕೋರ್ಟ್ ಆವರಣದಲ್ಲಿ ದುರ್ವರ್ತನೆ ಆರೋಪ: ವಕೀಲ ಜಗದೀಶ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.