ಬೆಂಗಳೂರು: ಸಿಲಿಕಾನ್ ಸಿಟಿ( Bengaluru)ಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮಗನ ಪಾಲಿಗೆ ಅಮ್ಮನೇ ರಾಕ್ಷಸಿಯಾಗಿದ್ದಾಳೆ. ಮಗನ ಮುಖಕ್ಕೆ ಮಸಾಲೆ ಹಚ್ಚಿ ತಾಯಿಯೇ ಚಿತ್ರ ಹಿಂಸೆ ನೀಡಿರುವ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿದೆ.
ಮಿಕ್ಸಿಯಲ್ಲಿ ಮೆಣಸು ಅರೆದು ಕಣ್ಣಿಗೆ ಹಚ್ಚಿ ಹಿಂಸಿಸಿರುವ ತಾಯಿ(Mother Beating Child), ತಪ್ಪಾಯಿತು ಅಂದ್ರು ಮಗನನ್ನು ಬಿಟ್ಟಿಲ್ಲ. ತಾಯಿ ನೀಡಿದ ಹಿಂಸೆಯಿಂದ ಪುಟ್ಟ ಕಂದ ನರಳಾಡಿದೆ. ಮಹಿಳೆಯ ಹುಚ್ಚಾಟದ ವಿಡಿಯೋ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಹಿಜಾಬ್ ಒಳಗೆ ಅಡಗಿರುವ ಮತಕ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಬೆದರಿದೆಯೇ: ಬಿಜೆಪಿ
ಅಡಿಕೆ ತಿಂದಿದ್ದಕ್ಕೆ ಶಿಕ್ಷೆ..!
ಮಗ ಅಡಿಕೆ ತಿಂದ ಎಂಬ ಕಾರಣಕ್ಕೆ ಈ ರೀತಿ ತಾಯಿ ಹಿಂಸೆ ನೀಡಿದ್ದಾಳಂತೆ. ಈ ರೀತಿ ಮಾಡುವುದು ತಪ್ಪು ಅಂತಿದ್ದ ಪತಿಯ ಮೇಲೆಯೂ ಆಕೆ ಮುಗಿಬಿದ್ದಿದ್ದು, ಅನಿವಾರ್ಯವಾಗಿ ಪತಿಯೇ ವಿಡಿಯೋ(Viral Video) ಮಾಡಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Valentine's Day: ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಕೆಂಪು ಗುಲಾಬಿಗೆ ಭರ್ಜರಿ ಡಿಮ್ಯಾಂಡ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.