ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ‌ ಒಂದಾಗಿರುವ ಹನೂರು ತಾಲೂಕಿನ‌ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ ಫೆಬ್ರವರಿ 17 ರಿಂದ ಫೆಬ್ರವರಿ 21 ರ ವರೆಗೆ ಮಹಾಶಿವರಾತ್ರಿ ಜಾತ್ರೆ ನಡೆಯಲಿದ್ದು ಭಕ್ತಸಾಗರವೇ ಹರಿದು ಬರುತ್ತಿದೆ.


COMMERCIAL BREAK
SCROLL TO CONTINUE READING

ಹೌದು..., ಮಾದಪ್ಪನ ಬೆಟ್ಟಕ್ಕೆ ಬೆಂಗಳೂರು, ರಾಮನಗರ, ಮಂಡ್ಯ, ಕನಕಪುರದ ಜನರು ಕಾವೇರಿ ಸಂಗಮದಲ್ಲಿ ನದಿ ದಾಟಿ ಬರುತ್ತಿದ್ದು ನದಿಯಲ್ಲಿ ಜನಪ್ರವಾಹ ಆದಂತೆ ಭಾಸವಾಗುತ್ತಿದೆ.


ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಶಿವರಾತ್ರಿ ಜಾತ್ರೆ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಭಕ್ತರು ನದಿ ದಾಟಿ ಬರುತ್ತಿದ್ದ ಸ್ಥಳೀಯರು ಮಜ್ಜಿಗೆ, ಪಾನಕ ವಿತರಿಸುತ್ತಿದ್ದಾರೆ. ಕಳೆದ ಬಾರಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ವೇಳೆ ಕಾವೇರಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿ ಮೂವರು ಭಕ್ತರು ನಾಪತ್ತೆಯಾಗಿದ್ದ ಹಿನ್ನೆಲೆ ಈ ಬಾರಿ ರಾಮನಗರ ಜಿಲ್ಲಾಡಳಿತದ ವತಿಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.


ಇದನ್ನೂ ಓದಿ- ಬೆಂಗಳೂರಿನ ಕಾರ್‌ ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ - ಕೋಟ್ಯಾಂತರ ರೂ. ಮೌಲ್ಯದ ಐಷಾರಾಮಿ ಕಾರ್‌ಗಳು ಭಸ್ಮ


ನದಿಯ ನೀರು ಏಕಾಏಕಿ ಅಧಿಕ ಪ್ರಮಾಣದಲ್ಲಿ ಹೆಚ್ಚಾದ ಪರಿಣಾಮ ಕೆಲವು ಭಕ್ತರು ನೀರಿನಲ್ಲಿ ತೇಲಿ ಹೋಗಿದ್ದರೆ ಇನ್ನು ಕೆಲವರು  ನಾಪತ್ತೆಯಾಗಿದ್ದರು. ಈ ಬಾರಿ ಇಂತಹ ಘಟನೆಗಳು ಮರುಕಳಿಸಿದಂತೆ ಹಾಗೂ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊರಹರಿವನ್ನು ನಿಲ್ಲಿಸಲಾಗಿದ್ದು ಪಾದಯಾತ್ರಿಗಳ ಸುರಕ್ಷತೆಗೆ 20 ನುರಿತ ಈಜುಗಾರರು ನೇಮಿಸಲಾಗಿದೆ.


ಇದನ್ನೂ ಓದಿ- ಹೊಸಪೇಟೆ-ಹಂಪಿ-ಗಂಗಾವತಿ ಮಾರ್ಗದಲ್ಲಿ ಬರಲಿದೆ ಚತುಷ್ಪಥ ರಸ್ತೆ..!


500 ಬಸ್ ಸೌಕರ್ಯ- ಬೈಕ್ ಗಳಿಗೆ ನಿರ್ಬಂಧ : 
ಮಲೆಮಹದೇಶ್ವರ ಬೆಟ್ಟ ಜಾತ್ರೆಗಾಗಿ ಸಾರಿಗೆ ಸಂಸ್ಥೆಯ 5 ದಿನಗಳ ಕಾಲ ನಿರಂತರ 500 ಬಸ್ ಸೇವೆಯನ್ನು ಕೊಡಲು ಮುಂದಾಗಿದೆ. ಜೊತೆಗೆ, ಸುರಕ್ಷಿತ ಕ್ರಮವಾಗಿ ದ್ವಿಚಕ್ರ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ. ಫೆ.17 ರಿಂದ ಫೆ. 21 ರವರೆಗೆ ಬೈಕ್ ಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದ್ದು ಇಬ್ಬರು ಡಿವೈಎಸ್ಪಿ, 11 ಮಂದಿ ಪಿಐ, 30 ಮಂದಿ ಪಿಎಸ್ಐ, 68 ಮಂದಿ ಎಎಸ್ಐ, 375 ಪೊಲೀಸ್ ಕಾನ್ಸ್‌ಟೇಬಲ್, 32 ಮಂದಿ ಮಹಿಳಾ ಕಾನ್ಸ್‌ಟೇಬಲ್, 4 ಡಿಎಆರ್, 1 ಕೆಎಸ್ಆರ್ ಪಿ ತುಕಡಿ ಹಾಗೂ 230 ಹೋಂಗಾರ್ಡ್ ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ