ಬೆಂಗಳೂರು: ತನಗೆ ಮಗ್ಗುಲ ಮುಳ್ಳಾಗಬಹುದು ಎಂಬ ಭಯದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ತನ್ನ ಆಪ್ತರ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಅಂತಾ ಬಿಜೆಪಿ ಆರೋಪಿಸಿದೆ. #SidduVsDKS ಹ್ಯಾಶ್ ಟ್ಯಾಗ್ ಬಳಿಸಿ ಬಿಜೆಪಿ ಕಾಂಗ್ರೆಸ್ ನಾಯಕರ ಮುಸುಕಿನ ಗುದ್ದಾಟಕ್ಕೆ ವ್ಯಂಗ್ಯವಾಡಿದೆ.


COMMERCIAL BREAK
SCROLL TO CONTINUE READING

‘ಡಿ.ಕೆ.ಶಿವಕುಮಾರ್ ವೇಗವನ್ನು ಸಿದ್ದರಾಮಯ್ಯಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಿಕೆಶಿ ಅವರು ತಾನು ಸಿಎಂ ಆಗುವ ಕನಸಿಗೆ ಪೂರಕವಾಗಿ ತಮ್ಮ ನಿಷ್ಠಾವಂತರ ಪಡೆ ಕಟ್ಟುತ್ತಿದ್ದಾರೆ. ಇದು ತನಗೆ ಮಗ್ಗುಲ ಮುಳ್ಳಾಗಬಹುದು ಎಂಬ ಭಯದಿಂದ ಸಿದ್ದರಾಮಯ್ಯ ತನ್ನ ಆಪ್ತರ ಮೂಲಕ ಡಿಕೆಶಿ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಇದರಲ್ಲಿ ಗೆಲ್ಲುವವರ್ಯಾರು?’ ಅಂತಾ ಬಿಜೆಪಿ(BJP Karnataka) ಟ್ವೀಟ್ ಮಾಡಿದೆ. ರಾಜ್ಯದಲ್ಲಿ ನ್ಯೂ ಇಯರ್ ಪಾರ್ಟಿಗೆ ಬ್ರೇಕ್! ಅಕ್ಕಪಕ್ಕದ ರಾಜ್ಯಗಳಿಗೆ ಪಾರ್ಟಿ ಪ್ರಿಯರು ಎಸ್ಕೇಪ್.?


‘ಪರಿಷತ್‌ ಚುನಾವಣೆ(Karnataka MLC Election)ಯಲ್ಲಿ ಹಿಂದಿನದ್ದಕಿಂತ ಕೆಲವು ಸ್ಥಾನ ಕಳೆದುಕೊಂಡರೂ ರಾಜ್ಯವನ್ನೇ ಗೆದ್ದ ಸಂಭ್ರಮ ತೋರಿಸಿದ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಈಗ ಅಯೋಮಯವಾಗಿದೆ. ಎರಡು ಪವರ್‌ ಸೆಂಟರ್‌ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತಿದೆ. ನಾಯಕತ್ವದ ಕುರಿತು ಶೀತಲ ಸಮರ ಆರಂಭವಾಗಿದೆ. ಕನಕಪುರ ಬಂಡೆ ಪುಡಿಯಾಗುವುದು ನಿಶ್ಚಿತವೇ?’ ಅಂತಾ ಬಿಜೆಪಿ ಕುಟುಕಿದೆ.


ಡಿಕೆಶಿ ವಿರುದ್ಧ ಹೈಕಮಾಂಡ್ ಗೆ ದೂರು?


ಚುನಾವಣಾ ವರ್ಷ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್(Congress)ನಲ್ಲಿ ನಾಯಕತ್ವದ ಪೈಪೋಟಿ ಬಿರುಸುಗೊಂಡಿದೆ. ಈ ಬೆಳವಣಿಗೆ ಪಕ್ಷದ ಹೈಕಮಾಂಡ್ ಗೆ  ಚುನಾವಣೆಗೂ ಮುನ್ನವೇ ನಾಯಕತ್ವದ ಚಹರೆ ಕಟ್ಟಿಕೊಳ್ಳಲು ಡಿಕೆಶಿ ಪಾದಯಾತ್ರೆ ಸಂಘಟಿಸಿದ್ದಾರೆ. ಇದು ಸಿದ್ದರಾಮಯ್ಯರ ಆಪ್ತ ಶಾಸಕರಿಗೆ ಸಹ್ಯವೆನಿಸಿಲ್ಲ. ಹಳೇ ಮೈಸೂರು ಭಾಗವನ್ನು ಗಮನದಲ್ಲಿಟ್ಟುಕೊಂಡು ಡಿಕೆಶಿ ಪಾದಯಾತ್ರೆಗೆ ವೇಳಾಪಟ್ಟಿ ಸಿದ್ಧಪಡಿಸಿ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ್ದಾರೆ. ಇದರಲ್ಲಿ ಸಿದ್ದರಾಮಯ್ಯರ ಆಪ್ತ ಶಾಸಕರು ತಮ್ಮನ್ನು ಪರಿಗಣಿಸುತ್ತಿಲ್ಲವೆಂದು ದೂರು ನೀಡಿದ್ದರು. ಇದೇ ವಿಚಾರವಾಗಿ ಡಿಕೆಶಿಗೆ ಇರಿಸುಮುರಿಸುವಾಗುವಂತೆ ಎಲ್ಲರೆದುರೇ ಸಿದ್ದರಾಮಯ್ಯ ಬಿಸಿಮುಟ್ಟಿಸಿದ್ದಾರೆ.


Jog Falls: ಕೊರೊನಾ ಆತಂಕದ ನಡುವೆ 'ಜೋಗ' ಜಲಪಾತಕ್ಕೆ ಪ್ರವಾಸಿಗರ ದಂಡು


ತಮ್ಮ ಜಿಲ್ಲೆಗಳಲ್ಲಿ ತಮ್ಮ ಗಮನಕ್ಕೆ ತರದೆ ಸಭೆ ನಡೆಸುವಂತಿಲ್ಲವೆಂದು ಸಿದ್ದರಾಮಯ್ಯ ಡಿಕೆಶಿ(DK Shivakumar)ಗೆ ತಾಕೀತು ಮಾಡಿದ್ದಾರಂತೆ. ಸಿದ್ದರಾಮಯ್ಯರನ್ನು ಮೀರಿ ಬೆಳೆಯುವ ಡಿಕೆಶಿ ಪ್ರಯತ್ನದ ವಿರುದ್ಧ ಕೆಲ ಶಾಸಕರು ಹೈಕಮಾಂಡ್ ಮಟ್ಟದಲ್ಲಿ ದೂರು ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ನಲ್ಲಿ ಸದ್ಯ ಚುನಾವಣಾ ನಾಯಕತ್ವದ ವಿಚಾರವಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಮತ ಶುರುವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.