ಬೆಂಗಳೂರು : ಸಚಿವ ಸುಧಾಕರ್ ಒಬ್ಬ ಪೆದ್ದ. ಸಿಎಜಿ ರಿಪೋರ್ಟ್ ಓದೋಕೆ, ಅರ್ಥ ಮಾಡಿಕೊಳ್ಳೋಕೆ ಬರೋದಿಲ್ಲ. ನಿನ್ನೆ ಮೊನ್ನೆ ಬಿಜೆಪಿಗೆ ಹೋದ ಈ ಮನುಷ್ಯ ಅರ್ಜೆಂಟಾಗಿ  ಆರ್ ಎಸ್ಎಸ್ ನವರ ಪ್ರೀತಿ ಗಳಿಸಲು ಆರ್ ಎಸ್ಎಸ್ ನವರಿಗಿಂತ, ಮೂಲ ಬಿಜೆಪಿಯವರಿಗಿಂತ ಭಯಾನಕ ಸುಳ್ಳು ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.  


COMMERCIAL BREAK
SCROLL TO CONTINUE READING

ಸಿದ್ದರಾಮಯ್ಯ ವಿರುದ್ಧ ಮಾಡಿರುವ 35 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪಕ್ಕೆ  ದಾಖಲೆಗಳ ಸಮೇತ ಪತ್ರಿಕಾಗೋಷ್ಠಿ ನಡೆಸಿ, ಸಚಿವ ಸುಧಾಕರ್ ಆರೋಪಕ್ಕೂ- ಸಿಎಜಿ ವರದಿಯಲ್ಲಿ ಇರುವುದಕ್ಕೂ ಒಂದಕ್ಕೊಂದು ಸಂಬಧವೇ ಇಲ್ಲ ಎಂದು ಸಮರ್ಥನೆ ನೀಡಿದರು.


ಇದನ್ನೂ ಓದಿ : ಕಾಂಗ್ರೆಸ್ ಎಂದರೆ ಪ್ರೆಶರ್ ಕುಕ್ಕರ್ ಪಕ್ಷ: ಸಿಎಂ ಬೊಮ್ಮಾಯಿ


ಎಜಿಯವರು ಪ್ರತಿ ವರ್ಷ ರಾಜ್ಯದ ಹಣಕಾಸು ಸ್ಥಿತಿಗತಿಯ ಕುರಿತು ವರದಿಯನ್ನು ಸಿದ್ಧಪಡಿಸಿ ಕೊಡುತ್ತಾರೆ. 2016-17 ಸಾಲಿನ ವರದಿಯನ್ನು 2018 ರಲ್ಲಿ ಕೊಟ್ಟಿದ್ದಾರೆ. ಅದರಲ್ಲಿ ಪುಟ ಸಂಖ್ಯೆ XV ರಲ್ಲಿ ಹೀಗೆ ಹೇಳಿದ್ದಾರೆ. “Non reconciliation of expenditure was to the extent of 19 percent of total expenditure” ಎಂದು ಹೇಳಿದ್ದಾರೆ.ಈ ಹೇಳಿಕೆಯನ್ನು ಆಧರಿಸಿ “2016-17ನೇ ಸಾಲಿನ ಆರ್ಥಿಕ ವರ್ಷದ ಆಯವ್ಯಯದಲ್ಲಿ 1,86,052 ಕೋಟಿ ರೂಗಳಲ್ಲಿ 19%  ತಾಳೆಯಾಗುತ್ತಿಲ್ಲವೆಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ, ಎಂದು  ತಿಳಿಸಿದರು. 


ಸುಧಾಕರ್ ಎಂಬಿಬಿಎಸ್ ಡಾಕ್ಟರ್ ಅಂತ ಅಂದುಕೊಂಡಿದ್ದೇನೆ. ಅವರಿಗೆ ಎಜಿ ರಿಪೋರ್ಟ್ ಅರ್ಥ ಆಗಲ್ಲ.ರೀಕನ್ಸಿಲಿಯೇಷನ್ ರಿಪೋರ್ಟ್ ಅಂತ ಎಜಿ ರಿಪೋರ್ಟ್ ಅನ್ನು  ಕರಿತಾರೆ. ಅನುದಾನ ಖರ್ಚು ತಾಳೆ ಆಗುತ್ತಿದೆಯಾ ಇಲ್ಲವಾ ಎಂದು ನೋಡೋದು ಎಜಿ ರಿಪೋರ್ಟ್. ರೀಕನ್ಸಿಲಿಯೇಷನ್ ರಿಪೋರ್ಟ್ ನಲ್ಲಿ ಎಲ್ಲಾ ಕಾಲದಲ್ಲೂ ಕೂಡ ಕೆಲವು ಪರ್ಸೆಂಟೇಜ್ ತಾಳೆ ಆಗೋದಿಲ್ಲ.


ಇದನ್ನೂ ಓದಿ : ಪ್ರತಿ ಮತದಾರನಿಗೆ ಬಿಜೆಪಿ 6000 ರೂ. ಆಮಿಷ ಆರೋಪ : ದೂರು ದಾಖಲು


2008-09 ರಲ್ಲಿ ತಾಳೆಯಾಗದ ಅನುದಾನ 49% ಇತ್ತು ಯಾವ ಸರ್ಕಾರ ಇತ್ತು ಗೊತ್ತೇನಪ್ಪಾ ಸುಧಾಕರ? ಎಂದು ವ್ಯಂಗ್ಯವಾಡಿದ್ದಾರೆ. 2015-16 ರಲ್ಲಿ 16% ಮಾತ್ರ ತಾಳೆಯಾಗದ ಅನುದಾನ ಆಗಿತ್ತು. ಆಗ ನಮ್ಮ ಸರ್ಕಾರ ಇತ್ತು. ಈ ಮೂರ್ಖರಿಗೆ ಇದು ಅರ್ಥ ಆಗಬೇಕಾ ಬೇಡವಾ? ಬಿಜೆಪಿಯಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದರೆ ಅತಿ ದೊಡ್ಡ ಲೀಡರ್ ಆಗಬಹುದು ಎನ್ನುವುದು ಸುಧಾಕರ್ ಗೆ ಬಹಳ ಬೇಗ ಅರ್ಥ ಆಗಿದೆ ಎಂದು ಲೇವಡಿ ಮಾಡಿದರು.  


ಇದರ ಪ್ರಕಾರ ಬಿಜೆಪಿ ಸರ್ಕಾರದಲ್ಲಿ ಶೇ.50 ರಷ್ಟು ರೀಕನ್ಸಿಲಿಯೇಷನ್ ಆಗುತ್ತಿರಲಿಲ್ಲ. ಆದರೆ ನಾವು ತೆಗೆದುಕೊಂಡ ಕ್ರಮಗಳಿಂದ ಈ ಪ್ರಮಾಣ ಶೇ. 16, 18 ರಷ್ಟು ಮಾತ್ರ ಬಾಕಿ ಉಳಿಯುತ್ತಿತ್ತು. ಮೆಚ್ಚುಗೆ ಸೂಚಿಸಬೇಕಾದ್ದಕ್ಕೆ ಭ್ರಷ್ಟಾಚಾರ ಅಂತ ಕರೆದಿದೆ ಈ ಪೆದ್ದು ಎಂದಿದ್ದಾರೆ. ಭಷ್ಟಾಚಾರ ಎಂದರೆ ಯಾವುದು ಗೊತ್ತಾ ಸುಧಾಕರ್? ಕೊರೋನಾ ಸಮಯದಲ್ಲಿ ಹೆಣಗಳ ವಿಚಾರದಲ್ಲೂ ಲಂಚ ಹೊಡೆಯುವುದು ಭ್ರಷ್ಟಾಚಾರ ಎಂದು ಕಿಡಿ ಕಾರಿದ್ದಾರೆ. 


ಇದನ್ನೂ ಓದಿ : Bengaluru: 44 ಲಕ್ಷ ಮೌಲ್ಯದ 114 ಕೆಜಿ ಗಾಂಜಾ ವಶ; ಇಬ್ಬರ ಬಂಧನ!


ಬಿಜೆಪಿಯ ಆಲಿಬಾಬಾ ಮತ್ತು ಚಾಲಿಸ್ ಚೋರ್ ಗಳ  ದಂಡನಾಯಕ ಆಗುವ ಹಠಕ್ಕೆ ಬಿದ್ದ ಸುಧಾಕರ್ ನನ್ನು ಸಿಎಂ ಬೊಮ್ಮಾಯಿ ಬಫೂನ್ ಮಾಡುತ್ತಿದ್ದಾರೆ. ಬೇಕಂತಲೇ ಸುಧಾಕರ್ ಬಾಯಲ್ಲಿ ಸುಳ್ಳು ಹೇಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 


ಆಪರೇಷನ್ ಕಮಲಕ್ಕೆ ಜೆಡಿಎಸ್ ಕಾರಣ: 
ಜೆಡಿಎಸ್ ಅಧಿಕಾರ ಕೊಟ್ಟಿದ್ರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರ್ತಾ ಇರಲಿಲ್ಲ. ಅವರಿಗೆ ೨೦ ತಿಂಗಳ ಅಧಿಕಾರಕ್ಕೆ ಕೊಟ್ಟಿದ್ರೆ ಮುಗೀತ್ತಿತ್ತು . ಇವತ್ತು ಆಪರೇಷನ್ ಕಮಲ ಮಾಡಲು ಜೆಡಿಎಸ್ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.