ಬೆಂಗಳೂರಿಗರ ಗಮನಕ್ಕೆ : 4 ದಿನ ಮೆಟ್ರೋ ಸೇವೆಯಲ್ಲಿ ವತ್ಯಯ..!

ರಾಜಧಾನಿ ನಿವಾಸಿಗಳ ಜೀವನಾಡಿಯಾಗಿರೋ ನಮ್ಮ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಕೆಂಗೇರಿ ಟು ಚಲ್ಲಘಟ್ಟ ಮೆಟ್ರೋ ವಿಸ್ತರಣೆ ಹಿನ್ನೆಲೆಯಲ್ಲಿ ಜನವರಿ 27 ರಿಂದ ಜನವರಿ 30 ರ ವರೆಗೆ ನಾಲ್ಕು ದಿನ ಮೆಟ್ರೋ ಸ್ಥಗಿತವಾಗಲಿದೆ. 

Written by - Krishna N K | Last Updated : Jan 25, 2023, 01:03 PM IST
  • ನಮ್ಮ ಮೆಟ್ರೋ ಸೇವೆಯಲ್ಲಿ ವ್ಯತ್ಯಯ.
  • ಜ. 27 ರಿಂದ 30ರ ವರೆಗೆ 4 ದಿನ ಮೆಟ್ರೋ ಸ್ಥಗಿತ.
  • ಸಹಕರಿಸುವಂತೆ ಮನವಿ ಮಾಡಿದ ಬಿಎಂಆರ್‌ಸಿಎಲ್.
ಬೆಂಗಳೂರಿಗರ ಗಮನಕ್ಕೆ : 4 ದಿನ ಮೆಟ್ರೋ ಸೇವೆಯಲ್ಲಿ ವತ್ಯಯ..! title=

ಬೆಂಗಳೂರು : ರಾಜಧಾನಿ ನಿವಾಸಿಗಳ ಜೀವನಾಡಿಯಾಗಿರೋ ನಮ್ಮ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಕೆಂಗೇರಿ ಟು ಚಲ್ಲಘಟ್ಟ ಮೆಟ್ರೋ ವಿಸ್ತರಣೆ ಹಿನ್ನೆಲೆಯಲ್ಲಿ ಜನವರಿ 27 ರಿಂದ ಜನವರಿ 30 ರ ವರೆಗೆ ನಾಲ್ಕು ದಿನ ಮೆಟ್ರೋ ಸ್ಥಗಿತವಾಗಲಿದೆ. 

ಮೈಸೂರು ರಸ್ತೆಯಿಂದ ಕೆಂಗೇರಿ ವರೆಗೆ ನಾಲ್ಕುದಿನ ಮೆಟ್ರೋ ಸಂಚಾರ ಸ್ಥಗಿತವಾಗಲಿದ್ದು, ಹೊಸ ಮಾರ್ಗದ ತಾಂತ್ರಿಕ ಕಾರಣಕ್ಕಾಗಿ ಮೆಟ್ರೋ ಸಂಚಾರ ರದ್ದು ಮಾಡಲಾಗ್ತಿದೆ. ಇನ್ನು ಮೈಸೂರು ರಸ್ತೆ ನಿಲ್ದಾಣದಿಂದ ಬೈಯ್ಯಪ್ಪನಹಳ್ಳಿವರೆಗಿನ ಸಂಚಾರ ಎಂದಿನಂತೆ ಇರಲಿದೆ. ಈ ಮಾರ್ಗದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ. ಇನ್ನು ಈ ಸಂಬಂಧ ಮೆಟ್ರೋ ಪ್ರಾಣಿಕರು ಸಹಕರಿಸಬೇಕಾಗಿ ನಮ್ಮ ಮೆಟ್ರೋ ನಿಗಮ ಮನವಿ ಮಾಡಿದೆ.

ಇದನ್ನೂ ಓದಿ: ದಾಸರಹಳ್ಳಿ ವಲಯ: ವಿವಿಧ ಸ್ಥಳಗಳ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಈ ಕುರಿತು ಸಾರ್ವಜನಿಕ ಪ್ರಟಕಣೆ ಹೊರಡಿಸಿದ ಬಿಎಂಆರ್‌ಸಿಎಲ್‌ ಸಂಸ್ಥೆ, ಜ, 27 ರಿಂದ 30 ರ ವರೆಗೆ 4 ದಿನ ಕಂಗೇರಿಯಿಂದ ಚಲ್ಲಘಟ್ಟದವರೆಗಿನ ವಿಸ್ತರಣಾ ಮಾರ್ಗದ ಕಾರ್ಯಾರಂಭಕ್ಕೆ ಸಂಬಂಧಿಸಿದ ನಿಯೋಜಿತ ಕಾಮಗಾರಿಗಳಿಗಾಗಿ, ಮೈಸೂರು ರಸ್ತೆ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ನೇರಳ ಮಾರ್ಗದ ಮೆಟ್ರೋ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News