ಬೆಂಗಳೂರು:ರಾಜ್ಯ ಪಾಲರ ಭಾಷಣ ಬಗ್ಗೆ ಪ್ರಸ್ತಾಪ ಮಾಡಿದ ವಿರೋಧಪಕ್ಷದ ನಾಯಕ ಹಾಗೂ ಸಚಿವ ಮಾಧುಸ್ವಾಮಿ ಮದ್ಯೆ ಸ್ವಾರಸ್ಯ ಚರ್ಚೆ ನಡೆಯಿತು ವಿಧಾನಸಭೆಯಲ್ಲಿ ತೌಡು ಕುಟ್ಟುವ  ಕುರಿತಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯಪಾಲರ ಭಾಷಣದ ಮೂಲಕ ತೌಡು ಕುಟ್ಟಿಸಿದ್ದಾರೆ ಎಂದು ಹೇಳಿದರು. ಮಧ್ಯಪ್ರವೇಶಿಸಿದ ಸಚಿವ ಮಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ ತೌಡು ಕುಟ್ಟಿದರೆ ತಪ್ಪೇನು..?ತೌಡು ಕುಟ್ಟಿದರೆ ಆಯಿಲ್ ಬರುತ್ತೆ.


COMMERCIAL BREAK
SCROLL TO CONTINUE READING

ತೌಡಿನಿಂದ ಆಯಿಲ್ ಸಂಸ್ಕರಣೆ ಮಾಡ್ತೀವಿ ಎಂದರು.ಸಿದ್ದರಾಮಯ್ಯ, ತೌಡು ಕುಟ್ಟಿದರೆ ಎಣ್ಣೆ ಬರಲ್ಲ, ಒನಕೆಯಿಂದ ತೌಡು ಕುಟ್ಟಿದರೆ ಎಣ್ಣೆ ಬರುತ್ತೇನ್ರೀ..?ತೌಡು ಕುಟ್ಟೋದು ಅನ್ನೋದು ಒಂದು ನಾಣ್ಣುಡಿ,ಒನಕೆಯಲ್ಲಿ ತೌಡು ಕುಟ್ಟಿದರೆ ಆಯಿಲ್ ಬರಲ್ಲ.ಅದರ ಬದಲು ಭತ್ತವನ್ನೇ ಕುಟ್ಟಿ ಅಂತ ಟಕ್ಕರ್ ಕೊಟ್ಟರು.


ಗೆದ್ದವನು ಸೋತ-ಸೋತವನು ಸತ್ತ


ಇದನ್ನೂ ಓದಿ:VISL ಕಾರ್ಖಾನೆ ಮುಚ್ಚುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ


ರಾಜ್ಯಪಾಲರ ಭಾಷಣಕ್ಕೆ ಬನ್ನಿ ಎಂದ ಮಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ,ಮಧುಸ್ವಾಮಿ ಬಗ್ಗೆ ನನಗೆ ಗೌರವವಿದೆ.ಬ್ಯಾಡ್ ಕೇಸ್ ಗುಡ್ ಲಾಯರ್.ನಾನು ವಕೀಲನಾಗಿದ್ದಾಗ ಒಬ್ಬರು ಸಿನಿಯರ್ ಇದ್ರು,ಯಾವುದೇ ಬ್ಯಾಡ್ ಕೇಸ್ ಬಂದ್ರು ಅವರ ಬಳಿ ಕಳಿಸ್ತಿದ್ರು.ಒಂದು ಇಪ್ಪತೈದು ಮಧ್ಯಂತರ ಅರ್ಜಿಗಳು ಹಾಕ್ತಿದ್ರು.ಜಡ್ಜ್ ವಾದ ಕೇಳಿ - ತೀರ್ಪು ಕೊಡಬೇಕು.ಇದು ಮುಗಿಯುವಷ್ಟೋತ್ತಿಗೆ 15 ರಿಂದ 20 ವರ್ಷ ಸಮಯ ತೆಗೆದುಕೊಳ್ಳುತ್ತಿತ್ತು.ಅರ್ಜಿ ಹಾಕಿದವನು ಸತ್ತ,ಮಕ್ಕಳು ಸತ್ರು,ಮೊಮ್ಮಕ್ಕಳ ಕಾಲಕ್ಕೆ ತೀರ್ಪು.ಹಾಗಾಗಿ ಗೆದ್ದವನು ಸೋತ - ಸೋತವನು ಸತ್ತ ಎಂದು ಹೇಳ್ತಿದ್ವಿ ಎಂದು ಹೇಳಿದರು .


ಇದನ್ನೂ ಓದಿ:ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠದ ಶ್ರೀಗಳಿಂದ ಸ್ಫೋಟಕ ಭವಿಷ್ಯ.!


ಇದೇ ಸಂದರ್ಭದಲ್ಲಿ ಸಿಟಿ ರವಿ ಪದೇ ಪದೇ ಮಧ್ಯಪ್ರವೇಶ ಮಾಡುತ್ತಿದ್ದೀದಕ್ಕೆ,ಚರ್ಚೆ ಸಂದರ್ಭದಲ್ಲಿ ಸಿಟಿ ರವಿ ಪದೇ ಪದೇ ನನ್ನ ಹೆಸರು ತೆಗೆದುಕೊಂಡಿದ್ದಾರೆ.ತುಂಬಾ ಧನ್ಯವಾದಗಳು..ಈಗ ಬಿಜೆಪಿ ಅವರು ಪ್ರತಿಯೊಬ್ಬರೂ ನನ್ನ ಹೆಸರು ತೆಗೆದುಕೊಳ್ತಾರೆ.ಹಾಗಾದ್ರೆ ನಾನು ಅಷ್ಟು ರಿಲವೆಂಟ್ ಇದೀನಿ ಅಂತ ಆಯಿತು ಎಂದು ಸಿದ್ದರಾಮಯ್ಯ ಹೇಳಿದರು.ಕರ್ನಾಟಕ ಪಾಲಿಟಿಕ್ಸ್ ಲ್ಲಿ ನಾನು ಯಾವಾಗಲೂ ರಿಲವೆಂಟ್ ಆಗಿ ಇರ್ತಿನಿ ಪಾಲಿಟಿಕ್ಸ್, ಎಂದು ಸಿದ್ದರಾಮಯ್ಯ ಗುಡುಗಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.