Snake Video: ಸ್ನಾನದ ಮನೆಯಲ್ಲಿ ಅಡಗಿ ಕೂತಿದ್ದ ಕಾಳಿಂಗ ಸರ್ಪ!
Snake Video: ತುಂಬಾ ವೈಲ್ಡ್ ಆಗಿದ್ದ ಕಾಳಿಂಗ ಸರ್ಪವನ್ನು ಹಿಡಿಯಲು ಹರಸಾಹಸ.
Snake Video: ವ್ಯಕ್ತಿ ಎಷ್ಟೇ ಶಕ್ತಿಶಾಲಿ ಆಗಿದ್ದರೂ ಅವರಿಗೆ ಪ್ರಾಣಿಗಳ ಬಗ್ಗೆ ಎಷ್ಟೇ ಪ್ರೀತಿಯಿದ್ದರೂ ಸಹ ಹಾವು ಎಂಬ ಹೆಸರು ಕೇಳಿದೊಡನೆಯೇ ಒಂದು ಕ್ಷಣವಾದರೂ ಎದೆ ನಡುಗುತ್ತದೆ. ಹಾವುಗಳಲ್ಲೇ ಕಾಳಿಂಗ ಸರ್ಪವನ್ನು ಅತ್ಯಂತ ವಿಷಕಾರಿ ಸರ್ಪ ಎಂದು ಹೇಳಲಾಗುತ್ತದೆ. ಅಂತಹ ಸರ್ಪ ಮನೆಗೆ ಬಂದಾಗ, ಅದರಲ್ಲೂ ಸ್ನಾನದ ಮನೆಯಲ್ಲಿ ಅಡಗಿ ಕೂತಾಗ ಹೇಗಿರುತ್ತೇ...! ಅಬ್ಬಬ್ಬಾ... ಅದನ್ನು ನೆನೆಸಿಕೊಂಡರೂ ಕೂಡ ಎದೆ ಝಲ್ ಎಂದೆನಿಸುತ್ತದೆ. ಅಂತಹದ್ದೇ ಒಂದು ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಸ್ನಾನದ ಮನೆಯಲ್ಲಿ ಅಡಗಿ ಕೂತಿದ್ದ ಕಾಳಿಂಗ ಸರ್ಪ:
ವಾಸ್ತವವಾಗಿ, ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ತ್ಯಾನಂದೂರು ಗ್ರಾಮದಲ್ಲಿ ಅನಂತ ನಾಯ್ಕ್ ಎಂಬುವರ ಮನೆಯ ಸ್ನಾನದಮನೆಯಲ್ಲಿ ಸುಮಾರು 11 ಅಡಿ ಉದ್ದದ 8 ಕೆಜಿ ತೂಕದ ಕಾಳಿಂಗ ಸರ್ಪವೊಂದು ಅಡಗಿ ಕುಳಿತಿತ್ತು ಎನ್ನಲಾಗಿದೆ. ಇದನ್ನು ಕಂಡ ಮನೆಯವರು ದಂಗಾಗಿದ್ದಾರೆ.
ಇದನ್ನೂ ಓದಿ- Child With Snake Video: ಪುಟ್ಟ ಬಾಲಕಿಯ ಮುಂದೆ ದೈತ್ಯ ಹಾವು, ಮುಂದೇನಾಯ್ತು... ಈ ವಿಡಿಯೋ ನೋಡಿ...
ವಿಷಯ ತಿಳಿಯುತ್ತಿದ್ದಂತೆ ಹಾವು ಹಿಡಿಯಲು ಶಿವಮೊಗ್ಗದ ಸ್ನೇಕ್ ಕಿರಣ್ ಎಂಬುವವರನ್ನು ಕರೆಸಲಾಗಿದೆ. ಈ ಕಾಳಿಂಗ ಸರ್ಪ ಎಷ್ಟು ವೈಲ್ಡ್ ಆಗಿತ್ತೆಂದರೆ ಹಾವು ಹಿಡಿಯಲು ಸ್ನೇಕ್ ಕಿರಣ್ ಅವರು ಹರಸಾಹಸ ಪಡಬೇಕಾಯಿತು. ಈ ವೇಳೆ ಹಾವು ಹಲವು ಬಾರ್ ಬುಸ್ ಎಂದು ಸ್ನೇಕ್ ಕಿರಣ್ ಅವರನ್ನು ಎದುರಿಸಿದ್ದೂ ಉಂಟು. ಆದಾಗ್ಯೂ, ತುಂಬಾ ವೈಲ್ಡ್ ಆಗಿದ್ದ ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಡಲಾಗಿದೆ.
ಇದನ್ನೂ ಓದಿ- Snake Birth Video: ಹಾವಿನ ಜನನದ ವಿಡಿಯೋ..! ಅಬ್ಬಬ್ಬಾ, ಇದನ್ನೊಮ್ಮೆ ನೋಡಿ...
ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯುವ ಈ ಸಾಹಸಮಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ನೀವೂ ಒಮ್ಮೆ ನೋಡಿ...
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.