King Cobra Video : ಮನೆಯ ಬಾತ್ ರೂಂನಲ್ಲಿತ್ತು ಭಯಾನಕ ಹಾವು! ಬಾಗಿಲು ತೆರೆದಾಗ ಬೆಚ್ಚಿ ಬಿದ್ದ ಮನೆ ಮಂದಿ

ವೀಡಿಯೊದಲ್ಲಿ, ಮನೆಯ ಸ್ನಾನಗೃಹದಲ್ಲಿ ನಾಗರಹಾವೊಂದನ್ನು  ಕಾಣಬಹುದು. ಮನೆಯವರು ಬಾತ್ ರೂಮ್ ಗೆ ಹೋಗುವ ಸಲುವಾಗಿ ಬಾಗಿಲು ತೆರೆದಾಗ ಈ ವಿಷಯ ಗಮನಕ್ಕೆ ಬಂದಿದೆ. 

Written by - Ranjitha R K | Last Updated : Apr 1, 2022, 11:17 AM IST
  • ಹಾವನ್ನು ಕಂಡರೆ ಎಂಥವರು ಎದೆ ಕೂಡಾ ನಡುಗುತ್ತದೆ.
  • ಹಾವು ಅಂದ ಕೂಡಲೇ ಜನ ಹೌಹಾರಿ ಬಿಡುತ್ತಾರೆ.
  • ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
King Cobra Video : ಮನೆಯ ಬಾತ್ ರೂಂನಲ್ಲಿತ್ತು ಭಯಾನಕ ಹಾವು! ಬಾಗಿಲು ತೆರೆದಾಗ ಬೆಚ್ಚಿ ಬಿದ್ದ ಮನೆ ಮಂದಿ  title=
King Cobra Video (photo instagram)

ಬೆಂಗಳೂರು : ಹಾವನ್ನು ಕಂಡರೆ ಎಂಥವರು ಎದೆ ಕೂಡಾ  ನಡುಗುತ್ತದೆ. ಹಾವು ಕಂಡರೆ ಎಲ್ಲರೂ ಕಿರುಚಿಕೊಂಡು ಓಡಿ ಹೋಗುತ್ತಾರೆ (Snake video). ಅದು ಯಾವ ಹಾವಾದರೂ ಸರಿ. ಹಾವು ಅಂದ ಕೂಡಲೇ ಜನ ಹೌಹಾರಿ ಬಿಡುತ್ತಾರೆ. ಅಂಥದರಲ್ಲಿ ನಾಗರಹಾವು ಎದುರಾದರೆ?  ಚಿಕ್ಕ ಹಾವುಗಳನ್ನು ಕಂಡರೂ ಜನರ ಕೈ ಕಾಲು ನಡುಗಿ ಬಿಡುತ್ತದೆ. ಹೀಗಿರುವಾಗ ಏಕಾಏಕಿ ಮನೆಗೆ ನಾಗರ ಹಾವು ನುಗ್ಗಿ, ಅದರ ಅರಿವು ಮನೆಯವರಿಗೆ ಇಲ್ಲದೇ ಹೋದಾಗ ಸ್ಥಿತಿ ಹೇಗಿರುತ್ತದೆ? (Snake viral video)

ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ಹರಿದಾಡುತ್ತಿದೆ. ವೀಡಿಯೊದಲ್ಲಿ, ಮನೆಯ ಸ್ನಾನಗೃಹದಲ್ಲಿ ನಾಗರಹಾವೊಂದನ್ನು ಕಾಣಬಹುದು. ಮನೆಯವರು ಬಾತ್ ರೂಮ್ ಗೆ ಹೋಗುವ ಸಲುವಾಗಿ ಬಾಗಿಲು ತೆರೆದಾಗ ಈ ವಿಷಯ ಗಮನಕ್ಕೆ ಬಂದಿದೆ (snake in bathroom). ಬಾತ್ ರೂಮ್ ನಲ್ಲಿ ನಾಗರ ಕಂಡ ಕೂಡಲೇ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ.  

ಇದನ್ನೂ ಓದಿ : Viral video : ಚಿರತೆ ಶಿಕಾರಿಗೆಂದು ಮರವೇರಿದ ಕರಿ ಚಿರತೆ, ಮರದ ತುತ್ತ ತುದಿಯಲ್ಲಿ ಇಬ್ಬರ ನಡುವೆ ನಡೆದಿದ್ದೇನು ?

ಹೀಗೆ ಬಾತ್ ರೂಂ ಪ್ರವೇಶಿಸಿದ ಹಾವು ಅಲ್ಲಿಂದ ಹೊರಬರಲು ದಾರಿ ಹುಡುಕುವುದನ್ನು ಕಾಣಬಹುದು. ಬಾತ್ ರೂಂನಲ್ಲಿ ನಾಗರ ಹಾವನ್ನು ನೋಡಿದ ಮನೆಯವರು ಮೊದಲು ಬೆಚ್ಚಿ ಬಿದ್ದರೂ, ನಂತರ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ (Animal Video). 

 

ಇದನ್ನೂ ಓದಿ : GIRL FUNNY VIDEO: Reels ಮಾಡುವ ತವಕದಲ್ಲಿ ನೀರಿಗೆ ಬಿದ್ದ ಮೊಬೈಲ್, ಮುಂದೇನಾಯ್ತು ನೀವೇ ನೋಡಿ

ನಾಗರಹಾವಿನ ಈ ವೀಡಿಯೋ ನೋಡಿದ ತಕ್ಷಣ, ನಮ್ಮ ಮನೆಯಲ್ಲಿ ಇಂಥದ್ದೇನಾದರೂ ನಡೆದರೆ ಏನು ಮಾಡಬೇಕು ಎಂಬ ಗೊಂದಲ ಎಲ್ಲರನ್ನೂ ಕಾಡುತ್ತದೆ. ಈ ವೀಡಿಯೊವನ್ನು snake_unity ಎಂಬ Instagram ಖಾತೆಗೆ ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊವನ್ನು ಇಲ್ಲಿಯವರೆಗೆ 50,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News