ಶೃಂಗೇರಿ: ಇಡೀ ಜಗತ್ತಿಗೇ ಕಂಟಕವಾಗಿರುವ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ  ಜಾರಿಗೆ ತರಲಾಗಿದ್ದ ಲಾಕ್‌ಡೌನ್ (Lockdown)   ನಿಂದಾಗಿ ಬಂದ್ ಆಗಿದ್ದ ಶೃಂಗೇರಿ (Sringeri) ಶಾರದಾಂಬೆ ದೇವಾಲಯ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ಆದರೆ ದೇವಾಲಯಕ್ಕೆ ತೆರಳುವವರಿಗಾಗಿ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಭಕ್ತರು ಶೃಂಗೇರಿಗೆ ತೆರಳುವ ಮುನ್ನ ಇವುಗಳನ್ನು ತಪ್ಪದೇ ತಿಳಿಯಿರಿ...


COMMERCIAL BREAK
SCROLL TO CONTINUE READING

* ಸಮಯ:


  • ಬೆಳಿಗ್ಗೆ 06:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆವರೆಗೆ 

  • ಸಂಜೆ  05:00 ಗಂಟೆಯಿಂದ ರಾತ್ರಿ 08:00 ಗಂಟೆವರೆಗೆ ದರ್ಶನಕ್ಕೆ ಅವಕಾಶ


* ಶಾರದಾಂಬೆ ದರ್ಶನಕ್ಕೆ ತೆರಳುವ ಭಕ್ತಾಧಿಗಳು ಮಾಸ್ಕ್ (Mask) ಧರಿಸುವುದು ಕಡ್ಡಾಯವಾಗಿದೆ.
* ಮಂದಿರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.
* ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ (Aadhaar Card) ಸೇರಿದಂತೆ ಯಾವುದಾದರೊಂದು ಗುರುತಿನ ಚೀಟಿಯನ್ನು ಕೊಂಡೊಯ್ಯಬೇಕಾಗಿದೆ.
* ಭಕ್ತಾಧಿಗಳು ತಮಗಾದ ದಾನ ಮಾಡಬಹುದು. ಆದರೆ ಕುಂಕುಮ ಪ್ರಸಾದವಷ್ಟೇ ಲಭ್ಯವಿರುತ್ತದೆ. ಮುಂದಿನ ಆದೇಶದವರೆಗೆ ಯಾವುದೇ ಬೇರೆ ಪ್ರಸಾದ (ತೀರ್ಥ, ಪ್ರಸಾದ) ನೀಡಲಾಗುವುದಿಲ್ಲ.


ಭಕ್ತಾಧಿಗಳಿಗೆ ಇಂದಿನಿಂದ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ, ಇಲ್ಲಿದೆ ಟಿಟಿಡಿ ಮಾರ್ಗಸೂಚಿ


* ಮುಂದಿನ ಆದೇಶದವರೆಗೆ ಮಠದಲ್ಲಿ ಭೋಜನ ಕೊಠಡಿಯನ್ನು ಮುಚ್ಚಲಾಗುವುದು ಹಾಗೂ ಅನ್ನದಾನ ಮಾಡಲಾಗುವುದಿಲ್ಲ.
* ಶೃಂಗೇರಿಗೆ ತೆರಳುವ ಭಕ್ತಾಧಿಗಳಿಗೆ ಕೇವಲ ಒಂದು ದಿನ ಮಾತ್ರ ಉಳಿದುಕೊಳ್ಳಲು ಅವಕಾಶವಿದ್ದು ಒಂದು ರೂಂನಲ್ಲಿ ಇಬ್ಬರಿಗೆ ಮಾತ್ರ ಉಳಿಯಲು ಅವಕಾಶ ದೊರೆಯಲಿದೆ.
* ಡಾರ್ಮಿಟರಿ ವ್ಯವಸ್ಥೆ ಲಭ್ಯವಿರುವುದಿಲ್ಲ.
* ಇವೆಲ್ಲದರ ಜೊತೆಗೆ ದೇವಾಲಯದ ಪ್ರಾಂಗಣದಲ್ಲಾಗಲಿ ಅಥವಾ ಸುತ್ತಮುತ್ತ ಎಲ್ಲಿಯಾದರೂ ಉಗುಳುವುದನ್ನು ನಿಷೇಧಿಸಲಾಗಿದೆ.