Karnataka Budget 2022: ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಬಂಪರ್ ಕೊಡುಗೆ ನೀಡಿದ ಸಿಎಂ
ಬಿಬಿಎಂಪಿ ಚುನಾವಣೆ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ದಿಗೆ ಭರಪೂರ ಕೊಡುಗೆ ನೀಡಲಾಗಿದೆ. ನಗರದ ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ ಅನುದಾನವನ್ನು ಘೋಷಿಸಲಾಗಿದೆ.
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಬಜೆಟ್ ನಲ್ಲಿ ಬೆಂಗಳೂರು ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದೆ (Karnataka Budget 2022). ಬಿಬಿಎಂಪಿ ಚುನಾವಣೆ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ದಿಗೆ ಭರಪೂರ ಕೊಡುಗೆ ನೀಡಲಾಗಿದೆ. ನಗರದ ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ ಅನುದಾನವನ್ನು ಘೋಷಿಸಲಾಗಿದೆ.
ಬೆಂಗಳೂರಿಗೆ ಸಿಕ್ಕಿದ್ದೇನು ?
-ಬೆಂಗಳೂರು ಮೂಲಭೂತ ಸೌಕರ್ಯಕ್ಕೆ 6 ಸಾವಿರ ಕೋಟಿ ವೆಚ್ಚದಲ್ಲಿ ಅಮೃತ್ ನಗರೋತ್ಥಾನದಡಿ ರಸ್ತೆ ಅಭಿವೃದ್ಧಿ, ಗ್ರೇಡ್ ಸಪರೇಟರ್, ಕೆರೆ, ನೀರುಗಾಲುವೆ, ಪಾರ್ಕ್ , ತ್ಯಾಜ್ಯ ನಿರ್ವಹಣೆ, ಸ್ಲಂ ಅಭಿವೃದ್ಧಿ ಗಾಗಿ ಅನುದಾನವನ್ನು ಮೀಸಲಿಡಲಾಗಿದೆ (Budget 2022).
-2022-23 ನೇ ಸಾಲಿನಲ್ಲಿ 33 ಕಿ.ಮೀ ಮೆಟ್ರೋ ಮಾರ್ಗ . ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ 58.19 ಕಿ.ಮೀ ಮೆಟ್ರೋ ಕಾಮಗಾರಿ ಆರಂಭವಾಗಿದ್ದು 2025 ರೊಳಗೆ ಪೂರ್ಣಗೊಳ್ಳಲಿದೆ (Karnataka Budget 2022).
ಇದನ್ನೂ ಓದಿ : Karnataka Crime : ಸಕ್ಕರೆನಾಡು ಮಂಡ್ಯದಲ್ಲಿ ಯುವಕನ ಬರ್ಬರ ಹತ್ಯೆ!
- ಮೆಟ್ರೋ ಹಂತ್ರ-3 ಯೋಜನೆಯನ್ನು 11,250 ಕೋಟಿ ರೂ ವೆಚ್ಚದಲ್ಲಿ ಆರಂಭಿಸುವಂತೆ ಕೇಂದ್ರಕ್ಕೆ ಅನುಮೋದನೆ ಸಲ್ಲಿಕೆ (Karnataka Budget highlights). ಹೆಬ್ಬಾಳದಿಂದ - ಜೆಪಿ ನಗರದವರೆಗೆ 32 ಕಿ.ಮೀ ರಿಂಗ್ ರಸ್ತೆ ಮಾರ್ಗ ಹಾಗೂ ಹೊಸಹಳ್ಳಿಯಿಂದ-ಕಡಬಗೆರೆಗೆ 13 ಕಿ.ಮೀ ಮಾರ್ಗದ ಯೋಜನೆ
- 2022-23 ಸಾಲಿನಲ್ಲಿ 37 ಕಿ.ಮೀ ಉದ್ದದ ಸರ್ಜಾಪುರ, ಅಗರ, ಕೋರಮಂಗಲ, ಡೈರಿ ವೃತ್ತದ ಮೂಲಕ ಹೆಬ್ಬಾಳದವರೆಗೆ 15 ಸಾವಿರ ವೆಚ್ಚದಲ್ಲಿ 36 ಕಿ.ಮೀ ಹೊಸಮಾರ್ಗಕ್ಕೆ ಡಿಪಿಆರ್ ತಯಾರಿಸಲು ಕ್ರಮ
-ಬನಶಂಕರಿ ಜಂಕ್ಷನ್ ನಲ್ಲಿ 45 ಕೋಟಿ ವೆಚ್ಚದಲ್ಲಿ ಸ್ಕೈವಾಕ್ ನಿರ್ಮಾಣ
- ವೈಟ್ ಫೀಲ್ಡ್, ಕೆ.ಆರ್ ಪುರಂ, ಯಶವಂತಪುರ, ಜ್ಞಾನಭಾರತಿ, ಯಲಹಂಕ ನಿಲ್ದಾಣಗಳಲ್ಲಿ 55 ಕೋಟಿ ರೂ ವೆಚ್ಚದಲ್ಲಿ ರೈಲ್ವೆಯೊಂದಿಗೆ ಮೆಟ್ರೋ ನಿಲ್ದಾಣದ ಸಂಪರ್ಕದ ಕಾಮಗಾರಿ
(ಸಬ್ ಅರ್ಬನ್ ರೈಲ್ವೇ)
ಇದನ್ನೂ ಓದಿ : ರಾಜ್ಯದಲ್ಲಿರುವುದು ಹೇಡಿಗಳ ಸರ್ಕಾರ; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
-73 ಕಿ.ಮೀ ಉದ್ದದ ಫೆರಿಫೆರಲ್ ರಿಂಗ್ ರಸ್ತೆಗೆ ಭೂಸ್ವಾಧೀನ ವೆಚ್ಚ ಸೇರಿ 21,091 ಕೋಟಿ ರೂ ಈಗಾಗಲೇ ಅನುಮೋದನೆಯಾಗಿದ್ದು, DBFOT ಮಾದರಿಯಲ್ಲಿ, ಗುತ್ತಿಗೆದಾರರೇ ಭೂಸ್ವಾಧೀನ ಮತ್ತು ನಿರ್ಮಾಣ ವೆಚ್ಚ ಭರಿಸುವುದರೊಂದಿಗೆ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ
- ಗೊರಗುಂಟೆಪಾಳ್ಯ ಗ್ರೇಡ್ ಸಪರೇಟರ್ ಮೇಲ್ಸೇತುವೆ ನಿರ್ಮಾಣಜ್ಕೆ ಬಿಬಿಎಂಪಿ ಬಿಡಿಎ ಜಂಟಿ ಕಾಮಗಾರಿ
-ಬಿಡಿಎ ಕೆಂಪೇಗೌಡ ಬಡಾವಣೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ
-ಸರ್ ಎಂ ವಿಶ್ವೇಶ್ವರಯ್ಯ ಬಡಾವಣೆ ಬನಶಂಕರಿ ೬ ನೇ ಹಂತ ಅಂಜನಾಪುರ ಬಡಾವಣೆಯಲ್ಲಿ ರಸ್ತೆ, ಚರಂಡಿ ಕಾಮಗಾರಿ.
-ನಗರದ NGEF ನ 105 ಎಕರೆ ಪ್ರದೇಶದಲ್ಲಿ ಸಿಂಗಾಪುರ್ ಮಾದರಿಯ ಗ್ರೀನ್ ಎಕ್ಸ್ ಪೋ ನಿರ್ಮಾಣ
-ಆರು ಲಕ್ಷ "ಬಿ" ಖಾತಾಗಳನ್ನು ಎ ಗೆ ವರ್ಗಾಯಿಸಲು ಭೂಕಂದಾಯ ನಿಯಮದಡಿ ಪರಿಶೀಲಿಸಿ ಕಾನೂನು ಕ್ರಮ
-ಉಪನಗರ ರೈಲ್ವೇ ಯೋಜನೆಯನ್ನು 15,267 ಕೋಟಿ ರೂ ವೆಚ್ಚದಲಲ್ಲಿ 2026 ರ ವೇಳೆಗೆ ಪೂರ್ಣಗೊಳಿಸುವ ಗುರಿ.
-ನಗರಕ್ಕೆ 775 ದಶಲಕ್ಷ ಲೀಟರ್ ಕಾವೇರಿ ನೀರು ತರಲು 5,550 ಕೋಟಿ ರೂ ವೆಚ್ಚದಲ್ಲಿ ಕಾವೇರಿ 5 ನೇ ಹಂತ ಜಾರಿಯಲ್ಲಿದ್ದು, 2024-25 ರೊಳಗೆ ಪೂರ್ಣ
-ಹಳೇಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉನ್ನತೀಕರಣಕ್ಕೆ 1500 ಕೋಟಿ ರೂ. ವೆಚ್ಚ
- ಎತ್ತಿನಹೊಳೆಯಿಂದ 1.7 ಟಿ.ಎಂಸಿ ನೀರು ಬಳಸಿಕೊಳ್ಳಲು 312 ಕೋಟಿಯ ಟಿಜಿ ಹಳ್ಳಿ ಕಾಮಗಾರಿ 22-23 ರಲ್ಲಿ ಮುಕ್ತಾಯ
- ನಗರದ ರಾಜಕಾಲುವೆ ಅಭಿವೃದ್ಧಿಪಡಿಸಿ ನಾಗರಿಕರ ವಿಹಾರ ತಾಣವಾಗಿಸಲು 195 ಕೋಟಿ ರೂ ವೆಚ್ಚದಲ್ಲಿ ಕೋರಮಂಗಲ ರಾಜಕಾಲುವೆ ಅಭಿವೃದ್ಧಿ
-ನಗರದಲ್ಲಿ ಪ್ರವಾಹ ಪರಿಸ್ಥಿತಿ ತಡೆಯಲು ರಾಜಕಾಲುವೆ ಅಭಿವೃದ್ಧಿಗೆ 1,500 ಕೋಟಿ ರೂ ವೆಚ್ಚದಲ್ಲಿ ಯೋಜನೆ
-ನಗರದ 4 ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
- 20 ಶಾಲೆಗಳನ್ನು 'ಬೆಂಗಳೂರು ಪಬ್ಲಿಕ್ ಶಾಲೆಯಾಗಿ ಅಭಿವೃದ್ಧಿಪಡಿಸಲು 89 ಕೋಟಿ ಮೀಸಲು
--ಮಡಿವಾಳ ಕೆರೆ- ಎಲೆಮಲ್ಲಪ್ಪಶೆಟ್ಟಿ ಕೆರೆ ಅಭಿವೃದ್ಧಿಗೆ ಪಾಲಿಕೆಯಿಂದ ರೂಪುರೇಷೆ ಸಿದ್ಧತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ