ಬೆಂಗಳೂರು: ರಾಜ್ಯದಲ್ಲಿ ಹೇಡಿಗಳ ಸರ್ಕಾರ ಇದೆ. 25 ಮಂದಿ ಸಂಸದರಿದ್ದಾರೆ ಆದರೂ ಮೇಕೆದಾಟು ಯೋಜನೆ(Mekedatu Project)ಗೆ ಪರಿಸರ ಅನುಮತಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆದ ಕಾಂಗ್ರೆಸ್ ಪಾದಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕೇಂದ್ರ ಸರ್ಕಾರ(BJP Government)ವು ಮತಕ್ಕಾಗಿ ತಮಿಳುನಾಡಿಗೆ ಬೆಂಬಲ ನೀಡುತ್ತಿದೆ. 25 ಮಂದಿ ಸಂಸದರಿದ್ದಾರೆ ಆದರೂ ಪರಿಸರ ಅನುಮತಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇದು ಹೇಡಿಗಳ ಸರ್ಕಾರ. ನಮ್ಮ ರಾಜ್ಯದ ಸಂಸದರಿಗೆ ಪ್ರಧಾನಿ ಮೋದಿ(PM Modi) ಹತ್ತಿರ ನಿಂತು ಕೇಳಲು ದಮ್ಮಿಲ್ಲ. ಇವರಿಂದ ರಾಜ್ಯದ ಜನರಿಗೆ ನ್ಯಾಯ ಸಿಗುವುದಿಲ್ಲವೆಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Karnataka Budget 2022 : ನಾಳೆ ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ; ನಿರೀಕ್ಷೆಗಳೇನು?
ಬೆಂಗಳೂರು ನಗರದ ಜನರಿಗೆ ಸಮರ್ಪಕ ಕುಡಿಯುವ ನೀರು ಸಿಗಬೇಕೆಂದರೆ ಮೇಕೆದಾಟು ಯೋಜನೆ ಜಾರಿಯಾಗಬೇಕು. ಅದಕ್ಕಾಗಿ ಈ ಹೋರಾಟ ನಡೆಸಿದ್ದೇವೆ. ಇದು ಜನಪರ ಹೋರಾಟವೇ ಹೊರತು ರಾಜಕೀಯ ಹೋರಾಟವಲ್ಲ. ಮೇಕೆದಾಟು ಯೋಜನೆ ಅನುಷ್ಠಾನವಾಗಬೇಕೆಂದು ಜ.9ರಂದು ಪಾದಯಾತ್ರೆ ಪ್ರಾರಂಭವಾಯಿತು. ಕೊರೊನಾ(CoronaVirus) 3ನೇ ಅಲೆಯ ಕಾರಣ ನ್ಯಾಯಾಲಯಕ್ಕೆ ಗೌರವ ಕೊಡುವ ನಿಟ್ಟಿನಲ್ಲಿ ಪಾದಯಾತ್ರೆ ಸ್ಥಗಿತಗೊಳಿಸಿದ್ದೆವು. ಈಗ ರಾಜ್ಯ ಬಜೆಟ್ ಕಾರಣಕ್ಕೆ 2ನೇ ಹಂತದ ಪಾದಯಾತ್ರೆಯನ್ನು 2 ದಿನ ಕಡಿತಗೊಳಿಸಿದ್ದೇವೆ ಎಂದು ಹೇಳಿದರು.
ಮೇಕೆದಾಟು ಪಾದಯಾತ್ರೆ(Mekedatu Padayatre)ಯಲ್ಲಿ ಜನರು ಬಹಳ ಉತ್ಸಾಹದಿಂದ ಭಾಗಿಯಾಗಿದ್ದಾರೆ. ದಾರಿಯುದ್ದಕ್ಕೂ ಜನರು ಊಟ, ನೀರು, ತಿಂಡಿ ನೀಡಿದ್ದಾರೆ. ಪ್ರೀತಿ ಅಭಿಮಾನದಿಂದ ನೋಡಿಕೊಂಡಿದ್ದಾರೆ. ಸಹಾಯ ಮಾಡಿದ ಎಲ್ಲ ಜನರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಅಂತಾ ಹೇಳಿದರು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಿಂದ ಉಂಟಾದ ಟ್ರಾಫಿಕ್ ಸಮಸ್ಯೆಗೆ ಕ್ಷಮೆ ಕೋರಿದ ಕಾಂಗ್ರೆಸ್
ಬೆಂಗಳೂರು ನಗರದಲ್ಲೂ ಜನರು ಸ್ವಯಂಪ್ರೇರಿತರಾಗಿ ಪಾದಯಾತ್ರೆ(Congress Padayatre)ಯಲ್ಲಿ ಭಾಗವಹಿಸಿದ್ದರು. ಶಿವರಾತ್ರಿ ಹಬ್ಬದ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಈ ಹೋರಾಟದ ಮಹತ್ವ ರಾಜ್ಯದ ಜನರಿಗೆ ಅರ್ಥ ಆಗಿದೆ.ಈ ಕಾರಣಕ್ಕಾಗಿ ಇದೊಂದು ಐತಿಹಾಸಿಕ ಪಾದಯಾತ್ರೆ ಅಂತಾ ಹೇಳಿದರು.
ಪಾದಯಾತ್ರೆಯ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್(BJP and JDS)ನವರು ಲಘುವಾಗಿ ಮಾತನಾಡಿದ್ದಾರೆ. ತೂಕ ಇಳಿಸಲು, ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ನವರು ವಿಳಂಬ ದ್ರೋಹ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಸುಳ್ಳಿನ ಫ್ಯಾಕ್ಟರಿ. ಇವರಿಗೆ ಸತ್ಯ ಹೇಳಲು ಗೊತ್ತಿಲ್ಲ. ಸಿದ್ದರಾಮಯ್ಯರ ಸರ್ಕಾರ 5 ವರ್ಷದಲ್ಲಿ ಏನೂ ಮಾಡಿಲ್ಲ, ಇವಾಗ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಅವರು ಬರೀ ಸುಳ್ಳೇ ಹೇಳಿದ್ದಾರೆ ಅಂತಾ ಸಿದ್ದರಾಮಯ್ಯ(Siddaramaiah) ತಿರುಗೇಟು ನೀಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.