ಬೆಂಗಳೂರು : ಟೈಲ್ಸ್ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ರಸ್ತೆಯಲ್ಲೆ ಪಲ್ಟಿಯಾದ ಘಟನೆ ತಡರಾತ್ರಿ ಮತ್ತಿಕೆರೆಯ ಬಿಇಎಲ್ ಸರ್ಕಲ್ ನಲ್ಲಿ ನಡೆದಿದೆ. ಹೆಬ್ಬಾಳದಿಂದ ಗೊರಗುಂಟೆಪಾಳ್ಯ ಮಾರ್ಗವಾಗಿ ಬರುತ್ತಿದ್ದ ಟಾಟಾ ಏಸ್ ಚಾಲಕ ರಸ್ತೆ ಹಂಪ್ ನಲ್ಲಿ ದಿಢೀರನೇ ಬ್ರೇಕ್ ಹಾಕಿರುವ ಪರಿಣಾಮ ನಿಯಂತ್ರಣಕ್ಕೆ ಸಿಗದೇ ಅವಘಡ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಘಟನೆಯಲ್ಲಿ ಚಾಲಕ ಸೇರಿ ಟಾಟಾ ಏಸ್ ನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮತ್ತಿಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಪರಿಣಾಮ ಕೆಲಕಾಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಜಾಲಹಳ್ಳಿ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.


ಇದನ್ನೂ ಓದಿ- ಮತಾಂತರ ಅಲ್ಲ ಮನಸಾಂತರ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಡರಾತ್ರಿ ಪ್ರೊಟೆಸ್ಟ್


ರಸ್ತೆ ಅಪಘಾತಕ್ಕೆ ಇವೇ ಪ್ರಮುಖ ಕಾರಣಗಳು:
>> ಓವರ್ ಸ್ಪೀಡಿಂಗ್.
>> ಕುಡಿದು ವಾಹನ ಚಾಲನೆ.
>> ಚಾಲಕನಿಗೆ ಡ್ರೈವಿಂಗ್ ಬಗೆಗಿನ ಗೊಂದಲ.
>> ರೆಡ್ ಲೈಟ್ ಜಂಪಿಂಗ್.
>> ಸೀಟ್ ಬೆಲ್ಟ್‌ಗಳು ಮತ್ತು ಹೆಲ್ಮೆಟ್‌ಗಳಂತಹ ಸುರಕ್ಷತಾ ನಿಯಮಗಳನ್ನು ಅನುಸರಿಸದೇ ಇರುವುದು.
>> ಲೇನ್ ಡ್ರೈವಿಂಗ್ ಅನ್ನು ಅನುಸರಿಸದಿರುವುದು 
>> ಓವರ್‌ಟೇಕ್ ಮಾಡುವ ಹುಚ್ಚಾಟ.


ಇದನ್ನೂ ಓದಿ- ರಸ್ತೆಗುಂಡಿಗೆ ಯೋಧ ಬಲಿ: ಪ್ರತಿಭಟನೆ ನಡೆಸಿದ ಎಎಪಿ ಮುಖಂಡರ ಬಂಧನ


ಅಪಘಾತಗಳನ್ನು ತಪ್ಪಿಸುವ ಪ್ರಮುಖ ಮಾರ್ಗಗಳು:
* ಅತಿಯಾದ ವೇಗದ ಚಾಲನೆ ರೋಮಾಂಚನಕಾರಿ ಆಗಿರಬಹುದು, ಆದರೆ ಅದು ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ವಿವಿಧ ರಸ್ತೆಗಳಲ್ಲಿ ನಿಗದಿತ ವೇಗದ ಮಿತಿಗಳಲ್ಲಿ ಚಾಲನೆ ಮಾಡಿ. 
* ಬೈಸಿಕಲ್/ ಮೋಟಾರ್ ಸೈಕಲ್/ವಾಹನವನ್ನು ಚಾಲನೆ ಮಾಡುವ ಮೊದಲು ಯಾವಾಗಲೂ ಹೆಲ್ಮೆಟ್, ಸೀಟ್ ಬೆಲ್ಟ್ ಮತ್ತು ಇತರ ಸುರಕ್ಷತಾ ಸಾಧನಗಳನ್ನು ಬಳಸಿ, ರಸ್ತೆ ಸಂಚಾರ ನಿಯಮಗಳನ್ನು ತಪ್ಪದೇ ಅನುಸರಿಸಿ.
* ಕುಡಿದು ವಾಹನ ಚಲಾಯಿಸಬೇಡಿ 
* ಚಾಲನೆ ಮಾಡುವಾಗ ಮೊಬೈಲ್ ಫೋನ್ ಅಥವಾ ಇಯರ್ ಫೋನ್ ಅನ್ನು ಎಂದಿಗೂ ಬಳಸಬೇಡಿ.
* ನೀವು ರಸ್ತೆಗೆ ಬರುವ ಮೊದಲು ಟ್ರಾಫಿಕ್ ಚಿಹ್ನೆಗಳು, ಸಿಗ್ನಲ್‌ಗಳು, ದೀಪಗಳು ಮತ್ತು ಸಂಚಾರ ಸುರಕ್ಷತೆ ನಿಯಮಗಳನ್ನು ತಿಳಿದುಕೊಳ್ಳಿ. 
* ರಸ್ತೆ ಸುರಕ್ಷತಾ ನಿಯಮಗಳು ಅಪಘಾತಗಳನ್ನು ತಪ್ಪಿಸಲು ಉತ್ತಮ ಸಾಧನಗಳಾಗಿವೆ ಎಂದು ಯಾವಾಗಲೂ ನೆನಪಿಡಿ .
* ಸತತವಾಗಿ ಹೆಚ್ಚು ಗಂಟೆಗಳ ಕಾಲ ವಾಹನ ಚಲಾಯಿಸಬೇಡಿ. ಪ್ರತಿ 2 ಗಂಟೆಗಳ ನಿರಂತರ ಚಾಲನೆಯ ನಂತರ ಒಂದು ಸಣ್ಣ ಬ್ರೇಕ್ ತೆಗೆದುಕೊಳ್ಳಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.