Bridge Collapse: ಕಳೆದ 20 ವರ್ಷದಲ್ಲಿ ನಡೆದ ಸೇತುವೆ ಅಪಘಾತಗಳಿವು: ಭೀಕರ ದುರಂತಕ್ಕೆ ಕಾರಣ ಮಾತ್ರ ಒಂದೇ!

Deadliest Bridge Collapse in last 20 Years: ಗುಜರಾತ್‌ನ ಮೊರ್ಬಿಯಲ್ಲಿ 100 ವರ್ಷಗಳಷ್ಟು ಹಳೆಯದಾದ ತೂಗು ಸೇತುವೆ ಕುಸಿದು ಭಾನುವಾರ ಸುಮಾರು 132 ಜನರು ಸಾವನ್ನಪ್ಪಿದ್ದಾರೆ. ಮೋರ್ಬಿ ಸೇತುವೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಸುಮಾರು 500 ಮಂದಿ ಒಂದೇ ಬಾರಿಗೆ ಸೇತುವೆಗೆ ತೆರಳಿದ್ದಾರೆ. ಪರಿಣಾಮ ಕುಸಿದುಬಿದ್ದು ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Written by - Bhavishya Shetty | Last Updated : Oct 31, 2022, 08:31 AM IST
    • ಗುಜರಾತ್‌ನಲ್ಲಿ ಭಾನುವಾರ ಕುಸಿದುಬಿದ್ದ ತೂಗುಸೇತುವೆ
    • ಈ ಘಟನೆಯಲ್ಲಿ 132 ಮಂದಿ ಸಾವನ್ನಪ್ಪಿದ್ದು, 177 ಮಂದಿಯನ್ನು ರಕ್ಷಿಸಲಾಗಿದೆ
    • ಕಳೆದ 20 ವರ್ಷಗಳಲ್ಲಿ ನಡೆದ ಭೀಕರ ಸೇತುವೆ ದುರಂತಗಳ ಬಗ್ಗೆ ತಿಳಿಯೋಣ
Bridge Collapse: ಕಳೆದ 20 ವರ್ಷದಲ್ಲಿ ನಡೆದ ಸೇತುವೆ ಅಪಘಾತಗಳಿವು: ಭೀಕರ ದುರಂತಕ್ಕೆ ಕಾರಣ ಮಾತ್ರ ಒಂದೇ! title=
Bridge Collapse

Bridge Collapse: ಗುಜರಾತ್‌ನಲ್ಲಿ ಭಾನುವಾರ ತೂಗುಸೇತುವೆಯೊಂದು ಕುಸಿದುಬಿದ್ದು, ವರ್ಷಗಳಲ್ಲಿ ದೇಶವನ್ನು ತಲ್ಲಣಗೊಳಿಸಿದ ಅನೇಕ ರೀತಿಯ ದುರಂತಗಳಲ್ಲಿ ಇದೂ ಒಂದಾಗಿದೆ. ಈ ಘಟನೆಯಲ್ಲಿ 132 ಮಂದಿ ಸಾವನ್ನಪ್ಪಿದ್ದು, ಇದುವರೆಗೆ 177 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ಕಳೆದ 20 ವರ್ಷಗಳಲ್ಲಿ ನಡೆದ ಭೀಕರ ಸೇತುವೆ ದುರಂತಗಳ ಬಗ್ಗೆ ತಿಳಿಯೋಣ.

ಇದನ್ನೂ ಓದಿ: ಗುಜರಾತ್‌ನ ಮೊರ್ಬಿಯಲ್ಲಿ ಕೇಬಲ್ ಸೇತುವೆ ಕುಸಿದು 60 ಜನರು ಸಾವು

2022: ಗುಜರಾತ್‌ನಲ್ಲಿ 132 ಸಾವು

ಗುಜರಾತ್‌ನ ಮೊರ್ಬಿಯಲ್ಲಿ 100 ವರ್ಷಗಳಷ್ಟು ಹಳೆಯದಾದ ತೂಗು ಸೇತುವೆ ಕುಸಿದು ಭಾನುವಾರ ಸುಮಾರು 132 ಜನರು ಸಾವನ್ನಪ್ಪಿದ್ದಾರೆ. ಮೋರ್ಬಿ ಸೇತುವೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಸುಮಾರು 500 ಮಂದಿ ಒಂದೇ ಬಾರಿಗೆ ಸೇತುವೆಗೆ ತೆರಳಿದ್ದಾರೆ. ಪರಿಣಾಮ ಕುಸಿದುಬಿದ್ದು ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2021: ಮೆಕ್ಸಿಕೋ ನಗರದಲ್ಲಿ 26 ಸಾವು

ಮೆಕ್ಸಿಕೋ ಸಿಟಿ ಮೆಟ್ರೋ ವ್ಯವಸ್ಥೆಯಲ್ಲಿನ ಎತ್ತರದ ಭಾಗವು ಮೇ ತಿಂಗಳಲ್ಲಿ ಕುಸಿದು ಪ್ರಯಾಣಿಕರ ರೈಲು ಅಪಘಾತಕ್ಕೀಡಾಯಿತು, ಇದರಲ್ಲಿ 26 ಜನರು ಸಾವನ್ನಪ್ಪಿದರು ಮತ್ತು ಡಜನ್ಗಟ್ಟಲೆ ಮಂದಿ ಗಾಯಗೊಂಡರು.

2018: ಜಿನೋವಾದಲ್ಲಿ 43 ಸಾವು

ಇಟಲಿಯ ಜಿನೋವಾ ನಗರದಲ್ಲಿ ಸೇತುವೆ ಕುಸಿದು 43 ಜನರು ಸಾವನ್ನಪ್ಪಿದ್ದಾರೆ. ಫ್ರಾನ್ಸ್ ಮತ್ತು ಇಟಲಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ಭಾಗವಾಗಿರುವ ಮೊರಾಂಡಿ ಸೇತುವೆಯು ಆಗಸ್ಟ್‌ನಲ್ಲಿ ಧಾರಾಕಾರ ಮಳೆಗೆ ಕೊಚ್ಚಿಹೋಗಿತ್ತು. ಹತ್ತಾರು ವಾಹನಗಳು ಪ್ರಪಾತದಡಿ ಸಿಲುಕಿತ್ತು.

2016: ಕೋಲ್ಕತ್ತಾದಲ್ಲಿ 26 ಸಾವು

ಮಾರ್ಚ್‌ನಲ್ಲಿ ಕೋಲ್ಕತ್ತಾದ ಜನನಿಬಿಡ ರಸ್ತೆಯ ಮೇಲೆ ಫ್ಲೈಓವರ್ ಕುಸಿದು ಕನಿಷ್ಠ 26 ಜನರು ಸಾವನ್ನಪ್ಪಿದರು. ಬೃಹತ್ ಕಾಂಕ್ರೀಟ್ ಚಪ್ಪಡಿಗಳು ಮತ್ತು ಲೋಹದ ಅಡಿಯಲ್ಲಿ ಗಾಯಗೊಂಡ ಸುಮಾರು 100 ಜನರನ್ನು ರಕ್ಷಣಾ ಕಾರ್ಯಕರ್ತರು ಹೊರತೆಗೆದಿದ್ದಾರೆ.

2011: ಭಾರತದಲ್ಲಿ ದುರಂತಗಳು

ಅಕ್ಟೋಬರ್‌ನಲ್ಲಿ, ಡಾರ್ಜಿಲಿಂಗ್‌ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಈಶಾನ್ಯ ಭಾರತದಲ್ಲಿ ಉತ್ಸವದ ಜನಸಂದಣಿಯಿಂದ ತುಂಬಿದ ಸೇತುವೆ ಕುಸಿದು ಕನಿಷ್ಠ 32 ಜನರು ಸಾವನ್ನಪ್ಪಿದರು. ಒಂದು ವಾರದ ನಂತರ ಅರುಣಾಚಲ ಪ್ರದೇಶದಲ್ಲಿ ನದಿಯ ಮೇಲಿನ ಕಾಲುಸಂಕ ಕುಸಿದು ಸುಮಾರು 30 ಜನರು ಸಾವನ್ನಪ್ಪಿದರು.

2007: ನೇಪಾಳ ಮತ್ತು ಚೀನಾ

ಚೀನಾದಲ್ಲಿ ಆಗಸ್ಟ್‌ನಲ್ಲಿ ಕೇಂದ್ರ ಹುನಾನ್ ಪ್ರಾಂತ್ಯದ ನದಿ ಸೇತುವೆಯೊಂದು ಅದರ ನಿರ್ಮಾಣವನ್ನು ಪೂರ್ಣಗೊಳಿಸುತ್ತಿರುವಾಗ ಕುಸಿದು ಬಿದ್ದು ಕನಿಷ್ಠ 64 ಕಾರ್ಮಿಕರು ಸಾವನ್ನಪ್ಪಿದರು. ನೇಪಾಳದಲ್ಲಿ ಡಿಸೆಂಬರ್‌ನಲ್ಲಿ ದೇಶದ ಪಶ್ಚಿಮದಲ್ಲಿ ಯಾತ್ರಾರ್ಥಿಗಳಿಂದ ತುಂಬಿದ್ದ ಸೇತುವೆ ಕುಸಿದು ಕನಿಷ್ಠ 16 ಜನರು ಸಾವನ್ನಪ್ಪಿದರು ಮತ್ತು 25 ಮಂದಿ ಕಾಣೆಯಾಗಿದ್ದಾರೆ.

2006: ಪಾಕಿಸ್ತಾನ ಮತ್ತು ಭಾರತ

ಪಾಕಿಸ್ತಾನದಲ್ಲಿ ಆಗಸ್ಟ್‌ನಲ್ಲಿ ಮಾನ್ಸೂನ್ ಮಳೆಯಿಂದಾಗಿ ದೇಶದ ವಾಯುವ್ಯದಲ್ಲಿರುವ ಪೇಶಾವರದಿಂದ 50 ಕಿಲೋಮೀಟರ್ ದೂರದಲ್ಲಿರುವ ಮರ್ದಾನ್‌ನಲ್ಲಿ ಸೇತುವೆ ಕೊಚ್ಚಿಹೋಗಿದ್ದರಿಂದ ಕನಿಷ್ಠ 40 ಜನರು ಸಾವನ್ನಪ್ಪಿದರು. ಡಿಸೆಂಬರ್‌ನಲ್ಲಿ ಬಿಹಾರದ ರೈಲ್ವೇ ನಿಲ್ದಾಣದಲ್ಲಿ 150 ವರ್ಷಗಳಷ್ಟು ಹಳೆಯದಾದ ಸೇತುವೆಯು ಪ್ಯಾಸೆಂಜರ್ ರೈಲಿನ ಮೇಲೆ ಕುಸಿದು ಕನಿಷ್ಠ 34 ಜನರು ಸಾವನ್ನಪ್ಪಿದರು.

ಇದನ್ನೂ ಓದಿ: Viral Video: ಟೀಚರ್ ಬಳಿ ಹೋಗಿ ಅಮ್ಮನ ಬಗ್ಗೆ ದೂರು ನೀಡಿದ ಪುಟಾಣಿ ಕಂದಮ್ಮ ಹೇಳಿದ್ದೇನು ನೀವೇ ಕೇಳಿ?

2003: ಭಾರತ ಮತ್ತು ಬೊಲಿವಿಯಾ

ಭಾರತದಲ್ಲಿ ಆಗಸ್ಟ್‌ನಲ್ಲಿ ಮುಂಬೈ ಬಳಿ ಸೇತುವೆಯೊಂದು ಕುಸಿದು, ಶಾಲಾ ಬಸ್ ಮತ್ತು ಇತರ ನಾಲ್ಕು ವಾಹನಗಳು ನದಿಗೆ ಬಿದ್ದಾಗ 19 ಮಕ್ಕಳು ಸೇರಿದಂತೆ 20 ಜನರು ಸಾವನ್ನಪ್ಪಿದರು. ಡಿಸೆಂಬರ್‌ನಲ್ಲಿ ಬೊಲಿವಿಯಾದಲ್ಲಿ ಬಸ್‌ ಸೇತುವೆಯನ್ನು ದಾಟುತ್ತಿರುವಾಗ ಪ್ರವಾಹಕ್ಕೆ ಸಿಲುಕಿ ಕನಿಷ್ಠ 29 ಜನರು ಸಾವನ್ನಪ್ಪಿದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News