ಹಳ್ಳಕ್ಕೆ ಇಳಿದ ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್: 25 ಮಂದಿಗೆ ಗಾಯ

ದೀಪಾವಳಿ ಜಾತ್ರೆ ಮುಗಿಸಿಕೊಂಡು ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್ ಗುಂಡಿಯೊಂದಕ್ಕೆ ಇಳಿದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದ ಪರಿಣಾಮ 25 ಮಂದಿ ಗಾಯಗೊಂಡಿದ್ದಾರೆ. 

Written by - Yashaswini V | Last Updated : Oct 26, 2022, 01:16 PM IST
  • ದೀಪಾವಳಿ ಜಾತ್ರೆ ಮುಗಿಸಿಕೊಂಡು ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್
  • ಬಸ್ ಗುಂಡಿಯೊಂದಕ್ಕೆ ಇಳಿದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದ ಪರಿಣಾಮ 25 ಮಂದಿಗೆ ಗಾಯ
  • ಹನೂರು ತಾಲೂಕಿನ‌ ಮಲೆಮಹದೇಶ್ವರ ಬೆಟ್ಟದ ತಪ್ಪಲಾದ ತಾಳಬೆಟ್ಟದ ಸಮೀಪದಲ್ಲಿ ನಡೆದಿರುವ ಘಟನೆ
ಹಳ್ಳಕ್ಕೆ ಇಳಿದ ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್: 25 ಮಂದಿಗೆ ಗಾಯ  title=
Bus Accident

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಿಂದ ಭಕ್ತರನ್ನು ಹೊತ್ತು ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದಿದ್ದು 25 ಮಂದಿ ಗಾಯಗೊಂಡಿದ್ದಾರೆ. ಹನೂರು ತಾಲೂಕಿನ‌ ಮಲೆಮಹದೇಶ್ವರ ಬೆಟ್ಟದ ತಪ್ಪಲಾದ ತಾಳಬೆಟ್ಟದ ಸಮೀಪ ಈ ಘಟನೆ ನಡೆದಿದೆ.

ದೀಪಾವಳಿ ಜಾತ್ರೆ ಮುಗಿಸಿಕೊಂಡು ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್ ಗುಂಡಿಯೊಂದಕ್ಕೆ ಇಳಿದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದ ಪರಿಣಾಮ 25 ಮಂದಿ ಗಾಯಗೊಂಡಿದ್ದಾರೆ. 

ಇದನ್ನೂ ಓದಿ- ಹವಳ ಧರಿಸುವುದರಿಂದ ಜೀವನದಲ್ಲಿ ಅದ್ಭುತ ಬದಲಾವಣೆ, ಯಾರಿಗೆ ಲಾಭ ಗೊತ್ತಾ!

ಅಪಘಾತದಲ್ಲಿ ಚಾಲಕ ಚಂದ್ರಶೇಖರ್ ಅವರಿಗೆ ಕೈ ಮತ್ತು ಹೊಟ್ಟೆ ಭಾಗ, ಕಂಡಕ್ಟರ್ ಗೆ ಬೆನ್ಜು ಮತ್ತು ಹೊಟ್ಟೆ ಹಾಗೂ ಇಬ್ಬರು ಪ್ರಯಾಣಿಕರಿಗೆ ಹೆಚ್ಚು ಪೆಟ್ಟಾದ ಪರಿಣಾಮ ಮೈಸೂರಿಗೆ ರವಾನಿಸಲಾಗಿದೆ. ಗಾಯಗೊಂಡ ಇನ್ನುಳಿದ 21 ಮಂದಿಯನ್ನು ಕೊಳ್ಳೇಗಾಲ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ- ದೀಪಾವಳಿ‌ ಸಂಭ್ರಮ: ಮಾದಪ್ಪನ ಬೆಟ್ಟದಲ್ಲಿ ಹಾಲರವಿ ಉತ್ಸವದ ಸಡಗರ

KA:57 F:866 ಸಂಖ್ಯೆಯ ಈ ಬಸ್ ಮದ್ದೂರು ಘಟಕದ್ದಾಗಿದ್ದು ಈ ಘಟನೆ ವೇಳೆ ಬಸ್ಸಿನಲ್ಲಿ 51 ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News