Fake News: ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಅತಿ ಹೆಚ್ಚು ಸಾಲ ಮಾಡಿ ‘ಬಿಟ್ಟಿ ಭಾಗ್ಯಗಳನ್ನು’ ನೀಡಿದ್ದಾರೆ ಎಂಬ ಫೇಕ್‌ ನ್ಯೂಸ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.  


COMMERCIAL BREAK
SCROLL TO CONTINUE READING

ಫೇಸ್‌ಬುಕ್‌ ಮತ್ತು ವಾಟ್ಸಾಪ್‌ಗಳಲ್ಲಿ ಪೋಸ್ಟ್‌ ಮಾಡಿದ ಆರೋಪದ ಮೇಲೆ ಹೊಸದುರ್ಗ ತಾಲೂಕಿನ ಕಾನುಬೇನಹಳ್ಳಿಯ ಶಿಕ್ಷಕ ಎಂ ಜಿ ಶಾಂತಮೂರ್ತಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌ ಜಯಪ್ಪ ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.


ಇದನ್ನೂ ಓದಿ- ತಂದೆಯ ಸರಳತೆಯ ಹಾದಿಯಲ್ಲಿ ಮಗ ದರ್ಶನ್ ಪುಟ್ಟಣ್ಣಯ್ಯ!


ಸಿದ್ದರಾಮಯ್ಯ ಅವರು ನೂತನ ಮುಖ್ಯಮಂತ್ರಿಯಾಗಿದ್ದು, “ಎಸ್ ಎಂ ಕೃಷ್ಣ ಅವಧಿಯಲ್ಲಿ ₹3,590 ಕೋಟಿ, ಧರ್ಮಸಿಂಗ್ ₹15,635 ಕೋಟಿ, ಎಚ್ ಡಿ ಕುಮಾರಸ್ವಾಮಿ ₹3,545 ಕೋಟಿ, ಬಿ ಎಸ್‌ ಯಡಿಯೂರಪ್ಪ ₹25,653 ಕೋಟಿ, ಸದಾನಂದಗೌಡ ₹9,464 ಕೋಟಿ, ಜಗದೀಶ್‌ ಶೆಟ್ಟರ್ ₹13,464 ಕೋಟಿ, ಸಿದ್ದರಾಮಯ್ಯ ₹2,42,000 ಕೋಟಿ ಸಾಲ ಮಾಡಿದ್ದರು. ಎಸ್ಎಂ ಕೃಷ್ಣ ಅವಧಿಯಿಂದ ಶೆಟ್ಟರ್‌ವರೆಗೆ ಮಾಡಿದ ಒಟ್ಟು ಸಾಲ ₹71,331 ಕೋಟಿ, ಸಿದ್ದರಾಮಯ್ಯ ಅವರು ಮಾಡಿದ ‌ಸಾಲ ₹2,42,000 ಕೋಟಿ. ಹೀಗಿರುವಾಗ ‘ಬಿಟ್ಟಿ ಭಾಗ್ಯ’ ಕೊಡದೆ ಇನ್ನೇನು” ಎಂಬ ಬರಹವನ್ನು ಫೇಸ್‌ಬುಕ್‌ನಲ್ಲಿ ಶಿಕ್ಷಕ ಶಾಂತಮೂರ್ತಿ ಹಂಚಿಕೊಂಡಿದ್ದರು. ಈ ಮಾಹಿತಿಯನ್ನು ವಾಟ್ಸಾಪ್‌ ಗ್ರೂಪ್‌ಗಳಿಗೂ ಶೇರ್‌ ಮಾಡಿದ್ದರು. 


ಇದನ್ನೂ ಓದಿ- ಪೂನಾ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೀಗ ವ್ಹಿಲಿಂಗ್ ಪುಂಡರ್ ಹಾವಳಿ


ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮ 1996 ಮತ್ತು 2021ರ ಉಲ್ಲಂಘನೆ ಆರೋಪದಲ್ಲಿ ಶಿಕ್ಷಕ ಶಾಂತಮೂರ್ತಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.