ಬೆಂಗಳೂರು: ಸಾರಿಗೆ ನೌಕರರು ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮುಷ್ಕರ ಕೊನೆಗೂ ಅಂತ್ಯ ಕಂಡಿದ್ದು, ರಾಜ್ಯದೆಲ್ಲೆಡೆ ಬಸ್​ ಸಂಚಾರ ಆರಂಭಗೊಂಡಿದೆ.


COMMERCIAL BREAK
SCROLL TO CONTINUE READING

ಸಾರಿಗೆ ಮುಷ್ಕರ ಹಿಂಪಡೆದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಒದೊಂದೇ ಬಸ್(Bus)​ಗಳು ಆಗಮಿಸುತ್ತಿವೆ. ಗಂಟೆಗಟ್ಟಲೇ ಬಸ್​ಗಳಿಗೆ ಕಾದು ಹೈರಾಣಗಿದ್ದ ಪ್ರಯಾಣಿಕರಲ್ಲಿ ಮಂದಹಾಸ ಮೂಡಿದೆ.


'ಮಧು ಬಂಗಾರಪ್ಪ ಬಿಜೆಪಿಗೆ ಸೇರಿ ಶಕ್ತಿ ತುಂಬಿಕೊಳ್ಳುವುದಾದರೇ ತುಂಬಿಕೊಳ್ಳಲಿ'


ಕ್ಷಣಕ್ಕೊಂದು ತಿರುವು, ಹಲವು ನಾಟಕೀಯ ಬೆಳವಣಿಗೆಗಳ ನಡುವೆ ಸಾರಿಗೆ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿತ್ತು. ಭಾನುವಾರ ನಡೆದ ಸಂಧಾನ ಮಾತುಕತೆಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಸರ್ಕಾರ ಸಾರಿ ಹೇಳಿದರೆ, ನಮ್ಮ ಬೇಡಿಕೆ ಈಡೇರದ ಹೊರತು ಬಸ್ ಸಂಚಾರ ಆರಂಭಿಸುವುದಿಲ್ಲ ಎಂದು ನೌಕರರು ಪಟ್ಟುಹಿಡಿದು ಧರಣಿ ಮುಂದುವರಿಸಿದ್ದರು.


ದಿಢೀರ್ ಕೋಡಿಹಳ್ಳಿ ಚಂದ್ರಶೇಖರ್ ಗೆ ಪೋನ್ ಮಾಡಿದ ಲಕ್ಷ್ಮಣ್ ಸವದಿ!


ಇನ್ನು ಎಸ್ಮಾ ಜಾರಿ ಎಚ್ಚರಿಕೆ ನೀಡುವ ಮೂಲಕ ಹೋರಾಟದ ತೀವ್ರತೆ ತಗ್ಗಿಸಲು ಗೃಹಸಚಿವರು ಭಾನುವಾರವೇ ಸುಳಿಕೊಟ್ಟಿದ್ದರು. ಅಲ್ಲದೆ ಪರ್ಯಾಯವಾಗಿ ಖಾಸಗಿ ಬಸ್​ಗಳು, ಇತರ ವಾಹನಗಳ ಬಳಸಿಕೊಳ್ಳುವ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದರು.


ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದೂ 'ನಾಯಿ ಮೊಲೆಯ ಹಾಲಿದ್ದಂತೆ'


ಇನ್ನು ಎಸ್ಮಾ ಜಾರಿ ಎಚ್ಚರಿಕೆ ನೀಡುವ ಮೂಲಕ ಹೋರಾಟದ ತೀವ್ರತೆ ತಗ್ಗಿಸಲು ಗೃಹ ಸಚಿವರು ಭಾನುವಾರವೇ ಸುಳಿಕೊಟ್ಟಿದ್ದರು. ಅಲ್ಲದೆ ಪರ್ಯಾಯವಾಗಿ ಖಾಸಗಿ ಬಸ್​ಗಳು, ಇತರ ವಾಹನಗಳ ಬಳಸಿಕೊಳ್ಳುವ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದರು. ಇದಕ್ಕೂ ಬಗ್ಗದ ಹೋರಾಟಗಾರರೂ ಸೋಮವಾರವೂ ಮುಷ್ಕರ ಮುಂದುವರಿಸಿದ್ದರು. ತೀವ್ರ ತೊಂದರೆಗೊಳಗಾಗಿದ್ದ ಪ್ರಯಾಣಿಕರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಮುಷ್ಕರ ನಡೆಸುತ್ತಿದ್ದ ವಿವಿಧ ಸಂಘಟನೆಗಳವರು ಕೋಡಿಹಳ್ಳಿ ಮತ್ತು ಗ್ಯಾಂಗ್​ನಿಂದ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡತೊಡಗಿತ್ತು.


ಪ್ರತಿಭಟನಾ ನಿರತ ಸಾರಿಗೆ ನೌಕರರಿಗೆ ಕೊನೆಗೂ 'ಗುಡ್ ನ್ಯೂಸ್' ನೀಡಿದ ರಾಜ್ಯ ಸರ್ಕಾರ..!


ಅಷ್ಟರಲ್ಲಿ ಸಾರಿಗೆ ನೌಕರರ ಹೋರಾಟವನ್ನು ಕೈ ಬಿಡ್ತೀವಿ, ಲಿಖಿತವಾಗಿ ಭರವಸೆ ಪ್ರತವನ್ನು ಸರ್ಕಾರದ ಪ್ರತಿನಿಧಿ ಮೂಲಕ ಕಳುಹಿಸಿ ಎಂದು ಮುಖಂಡರು ಹೇಳಿದ್ದರು. ಹೀಗಾಗಿ ನಂದೀಶ್ ರೆಡ್ಡಿ ಮೂಲಕ ಫ್ರೀಡಂ ಪಾರ್ಕ್ ಬಳಿಗೆ ಸರ್ಕಾರದ ಭರವಸೆ ಪತ್ರವನ್ನು ಕಳುಹಿಸಲಾಗಿತ್ತು.


ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಎಚ್.ಡಿ. ಕುಮಾರಸ್ವಾಮಿ ನಿರ್ಧಾರ


ಆದರೆ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆಯಿಂದ ಹಿಂದೆ ಸರಿಯಲ್ಲ ಎಂದು ಎಚ್ಚರಿಸಿದ ಪ್ರತಿಭಟನಾನಿರತರು, 2021ರ ಜನವರಿಯಿಂದಲೇ 6ನೇ ವೇತನ ಆಯೋಗ ಅನ್ವಯ ಆಗಬೇಕು ಎಂದು ಪಟ್ಟು ಹಿಡಿದರು. ಅದಕ್ಕೆ ಅಸ್ತು ಅನ್ನುವ ಮೂಲಕ ರಾಜ್ಯ ಸರ್ಕಾರವು ನೌಕರರ ಮುಷ್ಕರಕ್ಕೆ ಇತಿಶ್ರೀ ಹಾಡಿತು. ಬೇಡಿಕೆ ಈಡೇರಿರಲು ಸರ್ಕಾರಕ್ಕೆ 3 ತಿಂಗಳ ಗಡುವು ನೀಡುವ ಮೂಲಕ ಸಾರಿಗೆ ನೌಕರರೂ ಮುಷ್ಕರ ಕೈಬಿಟ್ಟರು.


'ರೆವಿನ್ಯೂ ಸೈಟ್‌' ನೋಂದಣಿಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ‌..!