'ರೆವಿನ್ಯೂ ಸೈಟ್‌' ನೋಂದಣಿಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ‌..!

ಭೂ ಬಳಕೆ ಪರಿವರ್ತನೆ ಹಾಗೂ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ಇ-ಸ್ವತ್ತು ಖಾತಾ ಹೊಂದಿರದ ಎಲ್ಲಾ ನಿವೇಶನಗಳ ನೋಂದಣಿಯನ್ನು ಸ್ಥಗಿತಗೊಳಿಸಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ಯಾವುದೇ ಪಂಚಾಯತಿ ಹಾಗೂ ಕಂದಾಯ ನಿವೇಶನಗಳೂ ನೋಂದಣಿಯಾಗೋದಿಲ್ಲ

Last Updated : Dec 14, 2020, 12:35 PM IST
  • ರಾಜ್ಯದೆಲ್ಲೆಡೆ ಕಂದಾಯ ನಿವೇಶನಗಳ ನೋಂದಣಿಗೆ ಸರ್ಕಾರ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ 'ರೆವಿನ್ಯೂ ಸೈಟ್'‌ ಪಡೆದುಕೊಂಡಿರುವವರು ಈಗ ಮಾರಲು ಸಾಧ್ಯವಾಗದ ಪರಿಸ್ಥಿತಿ
  • ಭೂ ಬಳಕೆ ಪರಿವರ್ತನೆ ಹಾಗೂ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ಇ-ಸ್ವತ್ತು ಖಾತಾ ಹೊಂದಿರದ ಎಲ್ಲಾ ನಿವೇಶನಗಳ ನೋಂದಣಿಯನ್ನು ಸ್ಥಗಿತಗೊಳಿಸಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ಯಾವುದೇ ಪಂಚಾಯತಿ ಹಾಗೂ ಕಂದಾಯ ನಿವೇಶನಗಳೂ ನೋಂದಣಿಯಾಗೋದಿಲ್ಲ
  • ಕೃಷಿ ಬಳಕೆಯಿಂದ ಭೂ ಪರಿವರ್ತನೆ (ಡಿ.ಸಿ. ಕನ್ವರ್ಷನ್‌), ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಿವೇಶನಗಳು ಇ-ಸ್ವತ್ತು (ಇ-ಖಾತಾ) ಅಡಿ ನೋಂದಣಿಯಾಗಿದ್ದರೆ ಮಾತ್ರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಲಾಗುತ್ತದೆ.
'ರೆವಿನ್ಯೂ ಸೈಟ್‌' ನೋಂದಣಿಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ‌..! title=

ಬೆಂಗಳೂರು: ರಾಜ್ಯದೆಲ್ಲೆಡೆ ಕಂದಾಯ ನಿವೇಶನಗಳ ನೋಂದಣಿಗೆ ಸರ್ಕಾರ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ 'ರೆವಿನ್ಯೂ ಸೈಟ್'‌ ಪಡೆದುಕೊಂಡಿರುವವರು ಈಗ ಮಾರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಭೂ ಬಳಕೆ ಪರಿವರ್ತನೆ ಹಾಗೂ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ಇ-ಸ್ವತ್ತು ಖಾತಾ ಹೊಂದಿರದ ಎಲ್ಲಾ ನಿವೇಶನಗಳ ನೋಂದಣಿಯನ್ನು ಸ್ಥಗಿತಗೊಳಿಸಿರುವ ಹಿನ್ನಲೆಯಲ್ಲಿ ಇನ್ನು ಮುಂದೆ ಯಾವುದೇ ಪಂಚಾಯತಿ ಹಾಗೂ ಕಂದಾಯ ನಿವೇಶನಗಳೂ ನೋಂದಣಿಯಾಗೋದಿಲ್ಲ ಎನ್ನಲಾಗಿದೆ.

ಕೃಷಿ ಬಳಕೆಯಿಂದ ಭೂ ಪರಿವರ್ತನೆ (ಡಿ.ಸಿ. ಕನ್ವರ್ಷನ್‌), ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಿವೇಶನಗಳು ಇ-ಸ್ವತ್ತು (ಇ-ಖಾತಾ) ಅಡಿ ನೋಂದಣಿ(Registration)ಯಾಗಿದ್ದರೆ ಮಾತ್ರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಲಾಗುತ್ತದೆ. ಇದಲ್ಲದೇ ಕಂದಾಯ ನಿವೇಶನಗಳನ್ನು ಮಾರಾಟ ಮಾಡಲು ಅಥವಾ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಅಂತ ಹೇಳಲಾಗಿದೆ.

ನಾಲ್ಕನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಎಸ್ಮಾ‌ ಜಾರಿ ಬಗ್ಗೆ ಇಂದು ನಿರ್ಧಾರ

ರೆವಿನ್ಯೂ ಸೈಟ್‌: ಕೃಷಿಯೇತರ ಬಳಕೆಗೆ ಎಂದು ಕನ್ವರ್ಷನ್‌ ಆಗದ ಭೂಮಿ. ಕನ್ವರ್ಷನ್‌ ಆಗದೆ ಇದ್ದರೆ ಮನೆ ನಿರ್ಮಾಣ, ವಾಣಿಜ್ಯ ಬಳಕೆಗೆ ಅವಕಾಶವಿಲ್ಲ. ಮಾರಾಟವೂ ಕಷ್ಟ. ಸೈಟ್‌ ಮಾಡುವ ವೇಳೆಯಲ್ಲಿ ಅಯಾ ಜಿಲ್ಲೆ/ತಾಲೂಕಿನಲ್ಲಿರುವ ಭೂ ಬಳಕೆ ಪರಿವರ್ತನೆ ಹಾಗೂ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದು ಸೈಟುಗಳನ್ನು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ. ರೆವಿನ್ಯೂ ಸೈಟ್‌ಗಳಿಗೆ ಬ್ಯಾಂಕ್‌ಗಳು ಸಾಲವನ್ನು ಕೂಡ ನಿಡೋದಿಲ್ಲ, ಇದಲ್ಲದೇ ಬೇಕಾದ ಸಮಯದಲ್ಲಿ ಇಂತಹ ಸೈಟ್‌ಗಳನ್ನು ಮಾರಾಟ ಮಾಡಲು ಕೂಡ ಆಗೋದಿಲ್ಲ. ಕೆಲವು ಮಂದಿ ಲೇಔಟ್‌ ಮಾಡುವ ವೇಳೆಯಲ್ಲಿ ಭೂ ಬಳಕೆ ಪರಿವರ್ತನೆ ಹಾಗೂ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಲೇಔಟ್‌ ಮಾಡಿ ಬಿಡುತ್ತಿದ್ದರು, ಅಂತಹ ಸೈಟ್‌ಗಳನ್ನು ಪಡೆದುಕೊಂಡಿರುವವರು ಈಗ ಸಮಸ್ಯೆಗೆ ಸಿಲುಕಿಕೊಂಡಿದ್ದು, ಮಾರಾಟ ಮಾಡಲು ಸಾಧ್ಯವಾಗದ ಸನ್ನಿವೇಶ ನಿರ್ಮಾಣವಾಗಿದೆ.

ರಾಜ್ಯದ ಜನರೇ ಎಚ್ಚರ! ಇನ್ನೂ ಒಂದು ತಿಂಗಳು ರಾಜ್ಯದಲ್ಲಿ ಮೈ ಕೊರೆಯುವ ಚಳಿ!

 

Trending News