ಭೀಕರ ಅಪಘಾತ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಇಲ್ಲಿನ ಮಂಚಿಕೊಪ್ಪ ಬಳಿ ಕಾರು ಮತ್ತು ಬೈಕ್​ ನಡುವೆ ಡಿಕ್ಕಿಯಾಗಿದ ಪರಿಣಾಮ ಒಂದು ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಘಟನೆ ಸಂದರ್ಭದಲ್ಲಿ ಬೈಕ್​ನಲ್ಲಿ ಮಗು ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಮಂಚಿಕೊಪ್ಪದ ಬಳಿ ಸ್ಪೀಡಾಗಿ ಬರುತ್ತಿದ್ದ ಕಾರು​ ಹಾಗೂ ಎದುರಿನಿಂದ ಬರುತ್ತಿದ್ದ ಬೈಕ್​ ಡಿಕ್ಕಿಯಾಗಿದೆ. ಘಟನೆಯಲ್ಲಿ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಉಳಿದವರನ್ನು ತಕ್ಷಣವೇ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ,  ಇನ್ನಿಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 


ಇದನ್ನೂ ಓದಿ- "ಖರ್ಗೆಯವರು ನೀಡಿರುವ ಎಚ್ಚರಿಕೆ ಮಾತುಗಳಂತೆ ನಾವು ನಡೆದುಕೊಳ್ತೇವೆ"


ನಿನ್ನೆ ಸಂಜೆ ಅಂದರೆ 6 ನವೆಂಬರ್ 2022ರ ಭಾನುವಾರದಂದು ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ. ಮಂಚಿಕೊಪ್ಪ- ಮುತ್ತಿಗಿ ಗ್ರಾಮಗಳ ಮಧ್ಯೆ ಇರುವ ಅಕೇಶಿಯಾ ಪ್ಲಾಂಟೇಶನ್ ಹತ್ತಿರ ಅಪಘಾತ ಸಂಭವಿಸಿದೆ. ಹಿರೇಕೆರೂರು- ಶಿರಾಳಕೊಪ್ಪ ರಸ್ತೆಯಲ್ಲಿ ಬೈಕ್​ ಸವಾರ ಮಲ್ಲಿಕಾರ್ಜುನ ಬರುತ್ತಿದ್ದಾಗ, ಮುತ್ತಿಗೆ ಕಡೆಯಿಂದ ಶಿರಾಳಕೊಪ್ಪ ಕಡೆಗೆ ಬರುತ್ತಿದ್ದ K A -18m7941 ನೋಂದಣಿಯ ಸಂಖ್ಯೆಯ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಸೌಜನ್ಯ ಎಂಬ ನಾಲ್ಕು ವರ್ಷದ ಮಗು ಸಾವನ್ನಪ್ಪಿದೆ. 


ಇದನ್ನೂ ಓದಿ- "ಬಿಜೆಪಿ ಅವರಿಂದ ನಾವು ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಕಲಿಯುವ ಅಗತ್ಯವಿಲ್ಲ."


ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಲ್ಲಿಕಾರ್ಜುನ್​, ಜ್ಯೋತಿ ಹಾಗೂ ಗಂಗಮ್ಮರನ್ನ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಹುಲಿಗಿನಕೊಪ್ಪ ನಿವಾಸಿ 50 ವರ್ಷದ ಗಂಗಮ್ಮ ನಿಧನರಾಗಿದ್ಧಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಹಿರೆಕರೂರು ನಿವಾಸಿ ಜ್ಯೋತಿ ಸಹ ಸಾವನ್ನಪ್ಪಿದ್ದಾರೆ. ಜ್ಯೋತಿ ಅವರನ್ನು ಸೌಜನ್ಯ ಅವರ ತಾಯಿ ಎಂದು ಗುರುತಿಸಲಾಗಿದೆ. ಗಂಗಮ್ಮ ಜ್ಯೋತಿಯವರ ತಾಯಿ ಎಂದು ತಿಳಿದುಬಂದಿದೆ. ಮೂವರು ಸಾವನ್ನಪ್ಪಿರುವುದು ಕುಟುಂಬದಲ್ಲಿ ಧುಗುಡ ಮಡುಗಟ್ಟಿದೆ.  ಮೃತರೆಲ್ಲರೂ ಹಾವೇರಿ ಜಿಲ್ಲೆಯವರಾಗಿದ್ದು, ಹಿರೇಕರೂರ ತಾಲ್ಲೂಕಿನ ಬರುಡಿಕಟ್ಟೆಯವರು ಎಂದು ತಿಳಿದುಬಂದಿದೆ.


ಸದ್ಯ ಮಲ್ಲಿಕಾರ್ಜುನ್​ರನ್ನ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ರವೀಂದ್ರ ನಗರ ಮೂಲದ ಕುಮಾರ್ ಎಂಬಾತ ಕಾರು ಚಲಾಯಿಸುತ್ತಿದ್ದು, ಆತನ ವಿರುದ್ಧ ಎಫ್​ಐಆರ್​ ದಾಖಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.