ಊರಲ್ಲಿ ಮನೆಯೇ ದೇಗುಲ ಆಗಿರೋ ಅಚ್ಚರಿ ಕಥನ ಇಲ್ಲಿದೆ...!

ಅದು ಕಳೆದ ಹದಿನೈದು ದಿನಗಳ ಹಿಂದೆ ಎಂದಿನಂತೆ ಇದ್ದ ಮನೆ..ಇಂದು ಆ ಮನೆ ದೇವಸ್ಥಾನವಾಗಿದೆ..ಜನ ಮರಳೋ ಜಾತ್ರೆ ಮರಳೋ ಅನ್ನೋವಂತೆ ಜನ ಅಲ್ಲಿಗೆ ಬಂದು ಪೂಜೆ ಮಾಡ್ತೀದಾರೆ.ಸರತಿ ಸಾಲಿನಲ್ಲಿ ನಿಂತು ಆ ಮನೆಯೊಳಗೆ ಕೈ ಮುಗಿದು ಹೋಗ್ತೀದಾರೆ..ಮನೆಯೊಂದು ದೇವಸ್ಥಾನ ಆಗಿರೋದು ಎಲ್ಲಿ,ಜನ ಯಾಕೆ ಅಲ್ಲಿಗೆ ಬಂದು ಕೈ ಮುಗೀತಿದಾರೆ.ಅಲ್ಲಿ ಸೃಷ್ಟಿಯಾದ ಪವಾಡವೇನು ಅಂತೀರಾ ಈ ಸ್ಟೋರಿ ನೋಡಿ...

Written by - Zee Kannada News Desk | Last Updated : Nov 6, 2022, 05:56 PM IST
  • ಒಟ್ಟನಲ್ಲಿ ಜನ ಮರಳೋ ಜಾತ್ರೆ ಮರಳೋ ಅನ್ನೋ ತರಹ,ಮನೆ ಇದೀಗ ದೇವಸ್ಥಾನವಾಗಿದೆ.ಮನೆಯಲ್ಲಿ ಏಕಾಏಕಿ ದೇವಿ ಮೂರ್ತಿ ಉದ್ಭವವಾಗಿರೋದ ಹಲವು ಅನುಮಾನಕ್ಕೆ ಕಾರಣವಾಗಿದೆ.
  • ಜನರನ್ನ ತನ್ನತ್ತ ಸೆಳೆಯಲು ಬಸವರಾಜ್ ನೆ ಉದ್ಭವ ಮೂರ್ತಿ ಬಂದಿದೆ ಎಂದು ಹಬ್ಬಿಸಿರೋ ಅನುಮಾನವೂ ಇದೆ.
  • ಆದ್ರೆ ಜನ ಮಾತ್ರ ದೇವಿ ಪವಾಡ ಎಂದು ಕೈ ಮುಗಿದು ಹೋಗ್ತೀದಾರೆ‌.
 ಊರಲ್ಲಿ ಮನೆಯೇ ದೇಗುಲ ಆಗಿರೋ ಅಚ್ಚರಿ ಕಥನ ಇಲ್ಲಿದೆ...! title=

ಧಾರವಾಡ: ಅದು ಕಳೆದ ಹದಿನೈದು ದಿನಗಳ ಹಿಂದೆ ಎಂದಿನಂತೆ ಇದ್ದ ಮನೆ..ಇಂದು ಆ ಮನೆ ದೇವಸ್ಥಾನವಾಗಿದೆ..ಜನ ಮರಳೋ ಜಾತ್ರೆ ಮರಳೋ ಅನ್ನೋವಂತೆ ಜನ ಅಲ್ಲಿಗೆ ಬಂದು ಪೂಜೆ ಮಾಡ್ತೀದಾರೆ.ಸರತಿ ಸಾಲಿನಲ್ಲಿ ನಿಂತು ಆ ಮನೆಯೊಳಗೆ ಕೈ ಮುಗಿದು ಹೋಗ್ತೀದಾರೆ..ಮನೆಯೊಂದು ದೇವಸ್ಥಾನ ಆಗಿರೋದು ಎಲ್ಲಿ,ಜನ ಯಾಕೆ ಅಲ್ಲಿಗೆ ಬಂದು ಕೈ ಮುಗೀತಿದಾರೆ.ಅಲ್ಲಿ ಸೃಷ್ಟಿಯಾದ ಪವಾಡವೇನು ಅಂತೀರಾ ಈ ಸ್ಟೋರಿ ನೋಡಿ...

ಇದನ್ನೂ ಓದಿ: Ind vs Zim : ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ-ಜಿಂಬಾಬ್ವೆ ಮುಖಾಮುಖಿ!              

ಒಂದು ಕಡೆ ಮನೆಯಲ್ಲಿ ಸೃಷ್ಟಿಯಾದ ಉದ್ಭವ ಮೂರ್ತಿ..ಇನ್ನೊಂದು ಕಡೆ ಸರತಿ ಸಾಲಿನಲ್ಲಿ ನಿಂತು ಕೈ ಮುಗಿತೀರೋ ಜನ...ಮತ್ತೊಂದು ಕಡೆ ಅಲಂಕಾರಗೊಂಡ ದ್ಯಾಮಮ್ಮನ ಉದ್ಭವ ಮೂರ್ತಿ.... ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುರಶೆಟ್ಟಿ ಕೊಪ್ಪ ಗ್ರಾಮದಲ್ಲಿ ಪವಾಡವೊಂದು ಸೃಷ್ಟಿಯಾಗಿದೆ.ಎಸ್ ಮನೆಯಲ್ಲಿ ಏಕಾಏಕಿ ದ್ಯಾಮಮ್ಮನ ಉದ್ಭವ ಮೂರ್ತಿಯೊಂದು ಸೃಷ್ಟಿಯಾಗಿದೆ..ಗ್ರಾಮದ ಬಸವರಾಜ್ ಕಲಭಾವಿ ಅವರ ಮನೆಯಲ್ಲಿ ದ್ಯಾಮಮ್ಮನ ಉದ್ಭವ ಮೂರ್ತಿ ಸೃಷ್ಟಿಯಾಗಿದೆ..ಕಲಭಾವಿ ಅವರ ಮನೆಯ ಕೋಣೆಯೊಂದರ ಮೂಲೆಯಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ದ್ಯಾಮಮ್ಮನ ಉದ್ಭವ ಮೂರ್ತಿ ಸೃಷ್ಟಿಯಾಗಿದೆ. ಇದೀಗ ಮನೆಯವರು ದ್ಯಾಮಮ್ಮನಿಗೆ ಅಲಂಕಾರ ಮಾಡಿ ಪೂಜೆ ಮಾಡ್ತೀದಾರೆ..ಉದ್ಭವ ಮೂರ್ತಿಗೆ ಹೂವಿನ ಅಲಂಕಾರ ಮಾಡಿದ್ದು,ಗ್ರಾಮದ ಜನರು ಪವಾಡ ಕಂಡು ಕೈ ಮುಗಿದು ಹೋಗುತ್ತಿದ್ದಾರೆ..ಬಸವರಾಜ್ ಗೆ ಕಳೆದ ಒಂದು ವರ್ಷದಿಂದ ಮೈಮೇಲೆ ದೇವಿ ಬರ್ತಿದ್ದಾಳಂತೆ,ನಾನು ನಿಮ್ಮ ಮನೆಯಲ್ಲಿ ಉದ್ಭವ ಮೂರ್ತಿಯಾಗ್ತೀನಿ ಎಂದು ದೇವಿ ಮೊದಲೇ ಹೇಳಿದ್ಲಂತೆ..ಮೊದಲೇ ದೇವಿ ನಾನು ಇಲ್ಲಿ ಉದ್ಭವ ಮೂರ್ತಿ ಯಾಗ್ತೀನಿ ಎಂದು ದೇವಿ ಬಸವರಾಜ್ ಗೆ ತಿಳಸಿದ್ಲಂತೆ.ಮೊದಲು ದೇವಿ ನಾನು ಹೇಳೋವರೆಗೂ ಕೋಣೆ ತೆರೆಯಬೇಡಿ ಎಂದು ಹೇಳಿದ್ರಂತೆ,ನಂತ್ರ ಮತ್ತೆ ಬಸವರಾಜ್ ಗೆ ಕೋಣೆ ತೆರೆಯರಿ ಎಂದು ಹೇಳಿದಾಗ ಅಲ್ಲಿ ಮೂರ್ತಿ ಉದ್ಭವವಾಗಿತ್ತಂತೆ,ಹೀಗಾಗಿ ಬಸವರಾಜ್ ಅವರು ಲಡ್ಡು ಮುತ್ಯಾ ಅಜ್ಜರನ್ನ ಕರೆದು ಪೂಜೆ ಮಾಡಿಸಿದ್ದಾರೆ.

ಇದನ್ನೂ ಓದಿ: T20 World Cup 2022ರಲ್ಲಿ ವಿರಾಟ್ ಕಾರುಬಾರು: ಅಬ್ಬಬ್ಬಾ.. ಕೊಹ್ಲಿ ಹೆಸರಲ್ಲಿದೆ ಇಷ್ಟೊಂದು ದಾಖಲೆಗಳು!

ಇನ್ನು ಮನೆಯಲ್ಲಿ ಮೂರ್ತಿ ಉದ್ಭವ ವಾಗಿದ್ದು ದೇವಿ ಪವಾಡ ಎಂದು ಗ್ರಾಮದ ಜನ ಹೇಳುತ್ತಿದ್ದಾರೆ.ಲಡ್ಡು ಮುತ್ಯಾ ಸ್ವಾಮೀಜಿ ಬಂದು ಪೂಜೆ ಮಾಡಿದ ಬಳಿಕ,ಇದೀಗ ಗ್ರಾಮದ ಸುತ್ತ ಮುತ್ತಲಿನ ಜನ ಬಂದು ದೇವಿಗೆ ನಮಸ್ಕಾರ ಮಾಡಿ ಹೋಗ್ತೀದಾರೆ...ಪವಾಡವೋ,ಅಥವಾ ಕಲ್ಲಿಗೆ ಆ ರೀತಿ ಅಲಂಕಾರ ಮಾಡಿ ಅದೇ ಉದ್ಭವ ಮೂರ್ತಿ ಎಂದು‌ ಜನರಿಗೆ ಮರಳು ಮಾಡಲಾಗಿದೆಯಾ ಅನ್ನೋ ಪ್ರಶ್ನೆಯೂ ಕಾಡ್ತಿದೆ.ಯಾಕಂದ್ರೆ ದೇವಿ ಮೈಮೇಲೆ ಬಂದು ಉದ್ಭವ ವಾಗ್ತಿನಿ ಅಂತಾ ಹೇಳಿದ್ದು ಕೇಳಿದ್ರೆ ಅನುಮಾನ ಸೃಷ್ಟಿಯಾಗ್ತಿದೆ.ಆದ್ರೆ ಗ್ರಾಮದ ಜನ ಮಾತ್ರ ಇದೊಂದು ಪವಾಡ ಎಂದು ಪೂಜೆ ಮಾಡ್ತೀದಾರೆ. ಮಹಿಳೆಯರು ಕುಂಬ ಹೊತ್ತು ದ್ಯಾಮಮ್ಮನಿಗೆ ಪೂಜೆ ಸಲ್ಲಿಸ್ತೀದಾರೆ..ನಾವು ಮೊದಲು ನಂಬಿದ್ದಿಲ್ಲ,ನಾವು ಅಜ್ಜರನ್ನ ಕರೆಸಿ ನಾವು ಕೋಲೆ ತಗೆದಿದ್ದೇವೆ,ನಮಗೆ ಬಹಳ ಆಶ್ಚರ್ಯವಾಗಿದೆ ಅನ್ನೋದು ಸ್ಥಳೀಯರ ಮಾತು..ದೇವಿ ಪವಾಡವೋ ಏನೋ ಮನೆಯಲ್ಲಿ ಏಕಾ ಏಕಿ ದೇವಿ ಉದ್ಭವ ಮೂರ್ತಿ ಸೃಷ್ಟಿಯಾಗಿದ್ದು,ಜನರು ಇದೀಗ ಬಸವರಾಜ್ ಕಲಭಾವಿ ಅವರ ಮನೆಯತ್ತ ಓಡೋಡಿ ಬರ್ತೀದಾರೆ..

ಒಟ್ಟನಲ್ಲಿ ಜನ ಮರಳೋ ಜಾತ್ರೆ ಮರಳೋ ಅನ್ನೋ ತರಹ,ಮನೆ ಇದೀಗ ದೇವಸ್ಥಾನವಾಗಿದೆ.ಮನೆಯಲ್ಲಿ ಏಕಾಏಕಿ ದೇವಿ ಮೂರ್ತಿ ಉದ್ಭವವಾಗಿರೋದ ಹಲವು ಅನುಮಾನಕ್ಕೆ ಕಾರಣವಾಗಿದೆ..ಜನರನ್ನ ತನ್ನತ್ತ ಸೆಳೆಯಲು ಬಸವರಾಜ್ ನೆ ಉದ್ಭವ ಮೂರ್ತಿ ಬಂದಿದೆ ಎಂದು ಹಬ್ಬಿಸಿರೋ ಅನುಮಾನವೂ ಇದೆ.ಆದ್ರೆ ಜನ ಮಾತ್ರ ದೇವಿ ಪವಾಡ ಎಂದು ಕೈ ಮುಗಿದು ಹೋಗ್ತೀದಾರೆ‌.

-ಕಲ್ಮೇಶ ಮಂಡ್ಯಾಳ ಜೀ ನ್ಯೂಸ್ ಕನ್ನಡ ಹುಬ್ಬಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News