ಕೊಪ್ಪಳ: ಎನ್.ಹೆಚ್-50 ಹಿಟ್ನಾಳ್ ಟೋಲ್‌ಬೂತ್ ಬಳಿಯ ಕುಷ್ಟಗಿ ರಸ್ತೆಯ ಪಕದಲ್ಲಿ ಒಂದು ಮೋಟಾರ್ ಸೈಕಲ್ ಸವಾರನು ಹಿಂಬದಿ ಸವಾರನನ್ನು ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಅತೀವೇಗದಿಂದ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದ ಕಾರಣ ಅಪಘಾತದಲ್ಲಿ ಪೆಟ್ಟಾದ ಹಿಂಬದಿ ಸವಾರನನ್ನು ಅಲ್ಲೆ ಬಿಟ್ಟು ಹೋಗಿದ್ದು, ಈ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ :ಸೋನಿಯಾ ಗಾಂಧಿ ಭೇಟಿ ಅಂತ್ಯ: ರಾಷ್ಟ್ರ ರಾಜಕೀಯಕ್ಕೆ ಹೋಗಲ್ಲವೆಂದ ಸಿದ್ದರಾಮಯ್ಯ


ಇತ್ತೀಚೆಗೆಎನ್.ಹೆಚ್-50 ಹಿಟ್ನಾಳ್ ಟೋಲ್ ಗೇಟ್ ಹತ್ತಿರ ಕುಷ್ಟಗಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಖಾಲಿ ಜಾಗದಲ್ಲಿ ಹಾಕಿರುವ ಹೊಲದ ಮೆಕ್ಕೆಜೋಳ ರಾಶಿಯನ್ನು ಕಾಯುತ್ತಿರುವಾಗ ಮಧ್ಯರಾತ್ರಿ 12-30 ಗಂಟೆಯ ಸುಮಾರಿಗೆ ಪರ‍್ಯಾದುದಾರ ರೈತನು ಎಚ್ಚರವಾಗಿದ್ದಾಗ ಅದೇ ಸಮಯಕ್ಕೆ ಎನ್.ಹೆಚ್-50 ರಸ್ತೆಯ ಕುಷ್ಟಗಿ ಕಡೆಗೆ ಹೋಗುವ ರಸ್ತೆಯ ಪಕದಲ್ಲಿ ಹಿಟ್ನಾಳ್ ಟೋಲ್‌ಬೂತ್ ದಾಟಿ ಬರುವ ರಸ್ತೆಯಲ್ಲಿ ಒಂದು ಮೋಟಾರ್ ಸೈಕಲ್ ಸವಾರನು ಹಿಂಬದಿ ಸವಾರನನ್ನು ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಲಕ್ಷದಿಂದ ಚಲಾಯಿಸಕೊಂಡು ಬಂದವನೇ ವೇಗ ನಿಯಂತ್ರಣ ಮಾಡದೇ ರಸ್ತೆಯ ಪಕ್ಕದ ಫುಟ್‌ಪಾತ್‌ಗೆ ಡಿಕ್ಕಿಪಡಿಸಿ ಮೋಟಾರ್ ಸೈಕಲ್ ಸಮೇತ ಬಿದ್ದಿದ್ದರಿಂದ ಹಿಂಬದಿ ಸವಾರನಿಗೆ ತೀವ್ರ ಸ್ವರೂಪದ ಗಾಯ ಪೆಟ್ಟುಗಳಾಗಿರುತ್ತದೆ.


ಹಾಗೂ ಮೋಟಾರ್ ಸೈಕಲ್ ಸವಾರನು ಅಪಘಾತವಾದ ನಂತರ ಗಾಯಗೊಂಡ ಹಿಂಬದಿ ಸವಾರನನ್ನು ಅಲ್ಲಿಯೇ ಬಿಟ್ಟು ತನ್ನ ಮೋಟಾರ್ ಸೈಕಲ್ ಸಮೇತ ಹೋಗಿರುತ್ತಾನೆ.ಈ ಅಪಘಾತಕ್ಕೆ ಕಾರಣನಾದ ಮೋಟಾರ್ ಸೈಕಲ್ ಸವಾರನ ಪತ್ತೆ ಮಾಡಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿರುತ್ತದೆ.ಈ ಗಾಯಾಳು ಹಾಗೂ ಮೋಟಾರ್ ಸೈಕಲ್ ನಂಬರ್ ಹಾಗೂ ಮೋಟಾರ್ ಸೈಕಲ್ ಸವಾರನ ಹೆಸರು ವಿಳಾಸ ಗೊತ್ತಿರುವುದಿಲ್ಲ ಈ ಅಪಘಾತದ ಘಟನೆಯ ಬಗ್ಗೆ ಇದುವರೆಗೂ ಯಾರೂ ದೂರು ನೀಡದ ಕಾರಣ ಮೆಕ್ಕೆಜೋಳ ರಾಶಿ ಕಾಯುತ್ತಿದ್ದ ವ್ಯಕ್ತಿ ದೂರು ನೀಡಿದ್ದಾರೆ.ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: ಸಾಕಪ್ಪ ಸಾಕು ಬೆಂಗಳೂರು.! ಲಾಕ್ ಡೌನ್ ಗೆ ಹೆದರಿ ಊರಿಗೆ ದೌಡಾಯಿಸುತ್ತಿರುವ ಜನ


ಈ ಅಪಘಾತವಾದ ನಂತರ ಮೋಟಾರ್ ಸೈಕಲ್ ಸಮೇತ ಹೊರಟು ಹೋದ ಮೋಟಾರ್ ಸೈಕಲ್ ಸವಾರನ ಬಗ್ಗೆ ಹಾಗೂ ಮೋಟಾರ್ ಸೈಕಲ್ ಬಗ್ಗೆ ಯಾರಿಗಾದರು ಮಾಹಿತಿ ತಿಳಿದುಬಂದಲ್ಲಿ ಕೂಡಲೇ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ 08539-230111, ಡಿ.ಎಸ್.ಪಿ ಕೊಪ್ಪಳ 08539-230432, 9480803720, ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತ 08539-222433, 9480803731 ಹಾಗೂ ಪಿ.ಎಸ್.ಐ. ಮುನಿರಾಬಾದ್ ಠಾಣೆ 08539-270333, 9480803748, ಈ ವಿಳಾಸಕ್ಕೆ ಮಾಹಿತಿ ನೀಡಬಹುದಾಗಿದೆ ಎಂದು ಮುನಿರಾಬಾದ್ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ&ಸು) ಪ್ರಕಟಣೆಯ ಮೂಲಕ ಕೋರಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.