ಸಾಕಪ್ಪ ಸಾಕು ಬೆಂಗಳೂರು.! ಲಾಕ್ ಡೌನ್ ಗೆ ಹೆದರಿ ಊರಿಗೆ ದೌಡಾಯಿಸುತ್ತಿರುವ ಜನ

ಲಾಕ್ ಡೌನ್  ಘೋಷಣೆಯಾಗುತ್ತಿದ್ದಂತೆ ಜನರಲ್ಲಿ ಆತಂಕ ಆವರಿಸಿದೆ. ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ  ಧಾವಿಸಿದ್ದ ಜನರು ಈಗ ಬೆಂಗಳೂರು ಸಹವಾಸ ಬೇಡಪ್ಪಾ ಎಂದು ತಮ್ಮ ಊರಿಗೆ ದೌಡಾಯಿಸುತ್ತಿದ್ದಾರೆ. ಸಿಕ್ಕ ಸಿಕ್ಕ ಬಸ್ಸು ವಾಹನ ಹತ್ತಿ ಪರಿವಾರ ಸಹಿತ ಊರಿಗೆ ಧಾವಿಸುತ್ತಿದ್ದಾರೆ.

Written by - Ranjitha R K | Last Updated : Apr 27, 2021, 11:23 AM IST
  • ಲಾಕ್ ಡೌನ್ ಕಾರಣಕ್ಕೆ ಹೆದರಿ ಸಹಸ್ರಾರು ಮಂದಿ ಬೆಂಗಳೂರು ತೊರೆಯುತ್ತಿದ್ದಾರೆ.
  • ಬಸ್ ನಿಲ್ದಾಣಗಳಲ್ಲಿ ವಿಪರೀತ ರಶ್ ಉಂಟಾಗಿದೆ, ಟಿಕೆಟ್ ಬೆಲೆ ಕೂಡಾ ಏರಿದೆ
  • ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಕರೋನಾ ಹೆಚ್ಚುವ ಭೀತಿ ಸೃಷ್ಟಿಯಾಗಿದೆ.
ಸಾಕಪ್ಪ ಸಾಕು ಬೆಂಗಳೂರು.! ಲಾಕ್ ಡೌನ್ ಗೆ ಹೆದರಿ ಊರಿಗೆ ದೌಡಾಯಿಸುತ್ತಿರುವ ಜನ title=
ಲಾಕ್ ಡೌನ್ ಕಾರಣಕ್ಕೆ ಹೆದರಿ ಸಹಸ್ರಾರು ಮಂದಿ ಬೆಂಗಳೂರು ತೊರೆಯುತ್ತಿದ್ದಾರೆ (file photo)

ಬೆಂಗಳೂರು : ದೇಶದಲ್ಲಿ ಕರೋನಾಸುರನ ಆರ್ಭಟದ ಹಿನ್ನೆಲೆಯಲ್ಲಿ ಕರ್ನಾಟಕ ಕೂಡಾ ತಲ್ಲಣ ಗೊಂಡಿದೆ. ಕೊವಿಡ್ (COVID-19) ಕೇಸ್ ಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯ ಕಾರಣ ರಾಜ್ಯದಲ್ಲೂ ಯಡಿಯೂರಪ್ಪ (BS Yediyurapa) ಸರ್ಕಾರ 14 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದೆ. ಇಂದು ರಾತ್ರಿ 9 ಗಂಟೆಯಿಂದ ಲಾಕ್ ಡೌನ್ (Lockdown) ಜಾರಿಗೆ ಬರಲಿದೆ. ಕೇವಲಜೀವನಾವಶ್ಯಕ ವಸ್ತುಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ಇದೆ. 

ಬೆಂಗಳೂರು ತೊರೆಯುತ್ತಿರುವ ಜನ :
ಲಾಕ್ ಡೌನ್ (Lockdown) ಘೋಷಣೆಯಾಗುತ್ತಿದ್ದಂತೆ ಜನರಲ್ಲಿ ಆತಂಕ ಆವರಿಸಿದೆ. ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ (Bengaluru) ಧಾವಿಸಿದ್ದ ಜನರು ಈಗ ಬೆಂಗಳೂರು ಸಹವಾಸ ಬೇಡಪ್ಪಾ ಎಂದು ತಮ್ಮ ಊರಿಗೆ ದೌಡಾಯಿಸುತ್ತಿದ್ದಾರೆ. ಸಿಕ್ಕ ಸಿಕ್ಕ ಬಸ್ಸು ವಾಹನ ಹತ್ತಿ ಪರಿವಾರ ಸಹಿತ ಊರಿಗೆ ಧಾವಿಸುತ್ತಿದ್ದಾರೆ. ಕಳೆದ ವರ್ಷದ ಲಾಕ್ ಡೌನ್ ಅನುಭವದ ಹಿನ್ನೆಲೆಯಲ್ಲಿ ಜನರು ಬೆಂಗಳೂರು ಬಿಡುವ ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ : Karnataka Lockdown: ರಾಜ್ಯದಲ್ಲಿ ಲಾಕ್‌ಡೌನ್ : ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್..!

ಬಸ್ ನಿಲ್ದಾಣಗಳಲ್ಲಿ ಭಾರೀ ರಶ್.!
ಲಾಕ್ ಡೌನ್ ನಿರ್ಧಾರ ಘೋಷಣೆಯಾಗುತ್ತಿರುವಂತೆಯೇ ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಲ್ಲಿ (Bus station) ಭಾರೀ ರಶ್ ಕಾಣಿಸಿಕೊಂಡಿದೆ. ಟಿಕೆಟ್ ಗಾಗಿ ನೂಕು ನುಗ್ಗಲು ಸಹ ಉಂಟಾಗಿದೆ. ಇವತ್ತು ಸಂಜೆ ವರೆಗೆ ಜನ ಊರಿಗೆ ಧಾವಿಸೋ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿಯೇ ಕೆಎಸ್ ಆರ್ ಟಿಸಿ 500 ಹೆಚ್ಚುವರಿ ಬಸ್ ಗಳನ್ನು (Bus) ಬಿಟ್ಟಿದೆ.  ಜನರು ಸ್ವಂತ ಊರಿಗೆ ಹೋಗಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ರಾಜ್ಯದ ಮೂರು ಸಾರಿಗೆ ನಿಗಮಗಳು ಸುಮಾರು 12 ಸಾವಿರ ಬಸ್ ಗಳ ವ್ಯವಸ್ಥೆ ಮಾಡಿವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ (Laxman Savadi) ಹೇಳಿದ್ದಾರೆ. ಜೊತೆಗೆ ಪ್ರಯಾಣ ಮಾಡುವಾಗ ಕೋವಿಡ್ (Coronavirus) ಮಾರ್ಗಸೂಚಿ ಪಾಲಿಸಿ ಎಂದು ಅವರು ಮನವಿ ಮಾಡಿದ್ದಾರೆ.

ಟಿಕೆಟ್ ದರ 5  ಪಟ್ಟು ಏರಿಕೆ:
ಸಾರಿಗೆ ನಿಗಮದ ಬಸ್ ಗಳು ಅಲ್ಲದೆ ಖಾಸಗೀ ಬಸ್ ಗಳಲ್ಲೂ ಜನರು ಊರಿಗೆ ಧಾವಿಸುತ್ತಿದ್ದಾರೆ. ಏಕಾ ಏಕಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಟಿಕೆಟ್ ಬೆಲೆ ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ.  ಸಾವಿರಾರು ರೂಪಾಯಿ ತೆತ್ತು ಊರಿಗೆ ಪಯಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಖಾಸಗೀ ಬಸ್ ನವರು ಕರೋನಾ (COVID-19) ಕಾಲದಲ್ಲೂ ಜನರ ಲೂಟಿಯಲ್ಲಿ ತೊಡಗಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಇದನ್ನೂ ಓದಿ : Karnataka Govt: ರಾಜ್ಯ ಸರ್ಕಾರದಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ 'ಉಚಿತ ಕೊರೋನಾ ಲಸಿಕೆ'..!

ಹಳ್ಳಿ ಹಳ್ಳಿಗೂ ಕರೋನಾ ಹಬ್ಬುವ ಭೀತಿ :
ಬೆಂಗಳೂರಿನ ಜನರು ಊರಿಗೆ ವಲಸೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (Bengaluru) ವ್ಯಾಪಕವಾಗಿದ್ದ ಕರೋನಾ ಈಗ ಕರ್ನಾಟಕದ ಮೂಲೆ ಮೂಲೆಯೂ ಮುಟ್ಟುವಅಪಾಯ ಅಧಿಕವಾಗಿದೆ. ಲಾಕ್ ಡೌನ್ ಘೋಷಣೆಯಿಂದಾಗಿ ಇದುವರೆಗೆ ಸುರಕ್ಷಿತವಾಗಿದ್ದ ಗ್ರಾಮೀಣ ಪ್ರದೇಶಗಳು ಎಲ್ಲಿ ಮತ್ತೆ ಕರೋನಾ ಕಪಿ ಮುಷ್ಟಿಗೆ ಸಿಗಲಿದೆಯೋ ಎಂಬ ಆತಂಕ ಇದೀಗ ದಟ್ಟವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News