ಬೆಂಗಳೂರು: ಹೆಬ್ಬುಟ್ಟು ಗಿರಾಕಿ ಪ್ರಧಾನಿ ನರೇಂದ್ರ ಮೋದಿ(Narendra Modi)ಯಿಂದ ಇಡೀ ದೇಶವೇ ನರಳುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂದು ಪೆಟ್ರೋಲ್ 66 ರೂ., ಡೀಸೆಲ್ 55 ರೂ. ದೊರಕುತ್ತಿತ್ತು ಎಂದು ಹೇಳಿದೆ. 


COMMERCIAL BREAK
SCROLL TO CONTINUE READING

ಜನರನ್ನು ದೋಚಿ, ಉದ್ಯಮಿಗಳ ಹೊಟ್ಟೆ ತುಂಬಿಸುವ ಯೋಜನೆ ಹೊಂದಿರುವ ಬಿಜಪಿ ಸರ್ಕಾರ(BJP Government)ದ ತೆರಿಗೆ ಭಯೋತ್ಪಾದನೆಯಿಂದ ಎಲ್ಲಾ ಅಗತ್ಯ ವಸ್ತುಗಳು ದುಬಾರಿಯಾಗಿವೆ. ಜನರ ಕಷ್ಟಗಳನ್ನು ತಿಳಿಯದ #ಹೆಬ್ಬೆಟ್‌ಗಿರಾಕಿಮೋದಿಯಿಂದ ದೇಶ ನಲುಗುತ್ತಿದೆ’ ಎಂದು ಟೀಕಿಸಿದೆ. 


[[{"fid":"220032","view_mode":"default","fields":{"format":"default","field_file_image_alt_text[und][0][value]":"Politics.jpg","field_file_image_title_text[und][0][value]":"Politics.jpg"},"type":"media","field_deltas":{"1":{"format":"default","field_file_image_alt_text[und][0][value]":"Politics.jpg","field_file_image_title_text[und][0][value]":"Politics.jpg"}},"link_text":false,"attributes":{"alt":"Politics.jpg","title":"Politics.jpg","class":"media-element file-default","data-delta":"1"}}]]


ಇದನ್ನೂ ಓದಿ: ನೈತಿಕ ಪೊಲೀಸ್‌ಗಿರಿ ಸಮರ್ಥನೆ: ಸಿಎಂ ಬೊಮ್ಮಾಯಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ


‘ವಾಸ್ತವಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ಹೆಸರನ್ನು ‘ಮೌನೇಂದ್ರ ಮೋದಿ’ ಎಂದು ಬದಲಿಸಿಕೊಳ್ಳಲಿ. ಬೆಲೆ ಏರಿಕೆಯ ಬಗ್ಗೆ ಮೌನ, ಕಾಶ್ಮೀರದ ದಳ್ಳುರಿಗೆ ಮೌನ, ಚೀನಾ ಅತಿಕ್ರಮಣಕ್ಕೆ ಮೌನ, ರೈತರ ಹತ್ಯೆಗೆ ಮೌನ, ಅದಾನಿ ಡ್ರಗ್ಸ್ ದಂಧೆಯ ಬಗ್ಗೆ ಮೌನ, ನಿರುದ್ಯೋಗದ ಬಗ್ಗೆ ಮೌನ ಹಾಗೂ ಪತ್ರಿಕಾಗೋಷ್ಠಿಗೂ ಪ್ರಧಾನಿ ಮೌನವಾಗಿರುತ್ತಾರೆ’ ಎಂದು ಕಾಂಗ್ರೆಸ್(Congress) ಟ್ವೀಟ್ ಮಾಡಿದೆ.


[[{"fid":"220035","view_mode":"default","fields":{"format":"default","field_file_image_alt_text[und][0][value]":"Politics-3.jpg","field_file_image_title_text[und][0][value]":"Politics-3.jpg"},"type":"media","field_deltas":{"2":{"format":"default","field_file_image_alt_text[und][0][value]":"Politics-3.jpg","field_file_image_title_text[und][0][value]":"Politics-3.jpg"}},"link_text":false,"attributes":{"alt":"Politics-3.jpg","title":"Politics-3.jpg","class":"media-element file-default","data-delta":"2"}}]]


‘ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ ಪ್ರಧಾನಿ ಮೋದಿ(Narendra Modi) ಓದಲಿಲ್ಲ, ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ, ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಬಿಕ್ಷುಕರನ್ನಾಗಿಸಿದ್ದಾರೆ. #ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ’ ಅಂತಾ ಕಾಂಗ್ರೆಸ್ ಕುಟುಕಿದೆ.


ಇದನ್ನೂ ಓದಿ: ‘ಬುರುಡೆ ರಾಮಯ್ಯನಿಗೆ ಗ್ರಾಮೀಣ ಸಂಸ್ಕೃತಿಯ ಅರಿವೇ ಇಲ್ಲ’


[[{"fid":"220036","view_mode":"default","fields":{"format":"default","field_file_image_alt_text[und][0][value]":"Politics-2.jpg","field_file_image_title_text[und][0][value]":"Politics-2.jpg"},"type":"media","field_deltas":{"3":{"format":"default","field_file_image_alt_text[und][0][value]":"Politics-2.jpg","field_file_image_title_text[und][0][value]":"Politics-2.jpg"}},"link_text":false,"attributes":{"alt":"Politics-2.jpg","title":"Politics-2.jpg","class":"media-element file-default","data-delta":"3"}}]]


‘ಅದೇನು ಮಾಯವೋ! ಅತ್ಯಾಚಾರಿ ಬಾಬಾಗಳು, ಡ್ರಗ್ಸ್ ದಂಧೆಕೋರರು, ವಂಚಕರು ಎಲ್ಲರಿಗೂ ಮೋದಿಯೊಂದಿಗೆ ನಂಟಿರುತ್ತದೆ. ಅವರೆಲ್ಲರ ಹಗರಣದಲ್ಲಿ #ಹೆಬ್ಬೆಟ್‌ಗಿರಾಕಿಮೋದಿಯ ಪಾಲೆಷ್ಟು? ಅದಾನಿ ಪೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ಮೋದಿಗೆ ಸಿಕ್ಕ ಕಿಕ್ ಬ್ಯಾಕ್ ಎಷ್ಟು? ಬಸ್ ಡ್ರೈವರ್ ಉಮೇಶನ ಲೂಟಿಯಲ್ಲಿ ಬಿಜೆಪಿ ನಾಯಕರಿಗಾದ ಹಂಚಿಕೆ ಎಷ್ಟು?’ ಎಂದು ಬಿಜೆಪಿ(BJP) ಟ್ವೀಟ್ ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ