ಬೆಂಗಳೂರು: ಅಗತ್ಯ ವಸ್ತುಗಳ(Essential Commodities)ಬೆಲೆಗಳು ಗಗನಕ್ಕೆ ಮುಟ್ಟಿವೆ, ಬಡವರ ಮನೆಯ ಒಲೆಗಳು ಆರಿವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಿಡಿಕಾರಿದೆ. #Worstಸರ್ಕಾರCostlyಸಂಸಾರ ಹ್ಯಾಶ್ ಟ್ಯಾಗ್ ಬಳಿಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
‘ಇಂಧನ ತೈಲಗಳ ಬೆಲೆ 7 ದಿನಗಳಿಂದ ನಿರಂತರ ಏರಿಕೆ ಕಂಡಿದೆ, ರಾಜ್ಯದಲ್ಲೂ ಡೀಸೆಲ್ ದರ(Diesel Price) 100 ರೂ.ಗಳ ಗಡಿ ದಾಟಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಮುಟ್ಟಿವೆ, ಬಡವರ ಮನೆಯ ಒಲೆಗಳು ಆರಿವೆ. ವಿರೋಧ ಪಕ್ಷವಾಗಿದ್ದಾಗ ಹೊರಳಾಡುತ್ತಿದ್ದ ಬಿಜೆಪಿಗರ ಕೈಯಲ್ಲೇ ಅಧಿಕಾರವಿದೆ, ಈಗೇಕೆ ಈ ಮೌನ ಬಿಜೆಪಿ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇಂಧನ ತೈಲಗಳ ಬೆಲೆ 7 ದಿನಗಳಿಂದ ನಿರಂತರ ಏರಿಕೆ ಕಂಡಿದೆ, ರಾಜ್ಯದಲ್ಲೂ ಡೀಸೆಲ್ ದರ 100 ರೂಪಾಯಿಗಳ ಗಡಿ ದಾಟಿದೆ,
ಅಗತ್ಯ ವಸ್ತುಗಳ ಬೆಲೆಗಳೂ ಗಗನಕ್ಕೆ ಮುಟ್ಟಿವೆ, ಬಡವರ ಮನೆಯ ಒಲೆಗಳು ಆರಿವೆ.
ವಿರೋಧ ಪಕ್ಷವಾಗಿದ್ದಾಗ ಹೊರಳಾಡುತ್ತಿದ್ದ ಬಿಜೆಪಿಗರ ಕೈಯಲ್ಲೇ ಅಧಿಕಾರವಿದೆ, ಈಗೇಕೆ ಈ ಮೌನ @BJP4Karnataka?#Worstಸರ್ಕಾರCostlyಸಂಸಾರ
— Karnataka Congress (@INCKarnataka) October 11, 2021
ಇದನ್ನೂ ಓದಿ: ಅಯ್ಯೋ.. ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ: ಹಿಂದಿ ಹೇರಿಕೆ ವಿರುದ್ಧ ಎಚ್ಡಿಕೆ ಆಕ್ರೋಶ
‘ನವರಾತ್ರಿ ಹಬ್ಬಕ್ಕೆ ಬಿಜೆಪಿ(BJP)ಜನತೆಗೆ ನೀಡಿರುವ ಕೊಡುಗೆ ಬೆಲೆ ಏರಿಕೆ. ಎಲ್ಲಾ ವಸ್ತುಗಳ ನಂತರ ಈಗ ತರಕಾರಿಗಳ ಬೆಲೆ ಏರಿಕೆಯ ಸರದಿ. ಚೀಲದಲ್ಲಿ ತರಲು ಚೀಲದಲ್ಲಿಯೇ ಹಣ ಕೊಂಡೊಯ್ಯಬೇಕಾದ ಸ್ಥಿತಿ ಇದೆ! ಜನರಿಗೆ ಈರುಳ್ಳಿ ಕಣ್ಣೀರು ತರಿಸುತ್ತಿದೆ, ಟೊಮ್ಯಾಟೋ ಅಪ್ಪಚ್ಚಿ ಮಾಡುತ್ತಿದೆ, ಸರ್ಕಾರ ಕುರುಡಾಗಿದೆ!’ ಎಂದು ಕಾಂಗ್ರೆಸ್ ಕುಟುಕಿದೆ.
ನವರಾತ್ರಿ ಹಬ್ಬಕ್ಕೆ ಬಿಜೆಪಿ ಜನತೆಗೆ ನೀಡಿರುವ ಕೊಡುಗೆ ಬೆಲೆ ಏರಿಕೆ.
ಎಲ್ಲಾ ವಸ್ತುಗಳ ನಂತರ ಈಗ ತರಕಾರಿಗಳ ಬೆಲೆ ಏರಿಕೆಯ ಸರದಿ.ಚೀಲದಲ್ಲಿ ತರಲು ಚೀಲದಲ್ಲಿಯೇ ಹಣ ಕೊಂಡೊಯ್ಯಬೇಕಾದ ಸ್ಥಿತಿ ಇದೆ!
ಜನರಿಗೆ ಈರುಳ್ಳಿ ಕಣ್ಣೀರು ತರಿಸುತ್ತಿದೆ, ಟೊಮ್ಯಾಟೋ ಅಪ್ಪಚ್ಚಿ ಮಾಡುತ್ತಿದೆ,
ಸರ್ಕಾರ ಕುರುಡಾಗಿದೆ!#Worstಸರ್ಕಾರCostlyಸಂಸಾರ— Karnataka Congress (@INCKarnataka) October 11, 2021
‘ಬಿಜೆಪಿಯಲ್ಲಿ ಬಗೆಬಗೆಯ ಯುದ್ಧ ನಡೆಯುತ್ತಿದೆ. ಸೋಮಣ್ಣ vs ಅಶೋಕಣ್ಣನ ಜಂಗೀಕುಸ್ತಿ, ಬೊಮ್ಮಾಯಿ vs ಕಟೀಲ್ ನಡುವೆ ದೃಷ್ಟಿಯುದ್ದ, BSY vs BJP ನಡುವೆ ಮುಷ್ಠಿಯುದ್ಧ, ಯತ್ನಾಳ್ vs ವಿಜಯೇಂದ್ರ ನಡುವೆ ಮಲ್ಲಯುದ್ಧ. ಬಿಜೆಪಿ ಸ್ಥಿತಿ ಮಾನ ಮುಚ್ಚಿಕೊಳ್ಳಲಾಗದ ಹರಿದ ಬನಿಯನ್ಗಿಂತಲೂ ಕಡೆಯಾಗಿರುವಾಗ ಕಂಡವರ ಮನೆಯ ಕಿಟಕಿ ಇಣುಕುವ ಚಟವೇಕೆ!?’ ಎಂದು ಮತ್ತೊಂದು ಟ್ವೀಟ್ ನಲ್ಲಿ ಕಾಂಗ್ರೆಸ್(Congress) ಪ್ರಶ್ನಿಸಿದೆ.
ಇಂಧನ ತೈಲಗಳ ಬೆಲೆ 7 ದಿನಗಳಿಂದ ನಿರಂತರ ಏರಿಕೆ ಕಂಡಿದೆ, ರಾಜ್ಯದಲ್ಲೂ ಡೀಸೆಲ್ ದರ 100 ರೂಪಾಯಿಗಳ ಗಡಿ ದಾಟಿದೆ,
ಅಗತ್ಯ ವಸ್ತುಗಳ ಬೆಲೆಗಳೂ ಗಗನಕ್ಕೆ ಮುಟ್ಟಿವೆ, ಬಡವರ ಮನೆಯ ಒಲೆಗಳು ಆರಿವೆ.
ವಿರೋಧ ಪಕ್ಷವಾಗಿದ್ದಾಗ ಹೊರಳಾಡುತ್ತಿದ್ದ ಬಿಜೆಪಿಗರ ಕೈಯಲ್ಲೇ ಅಧಿಕಾರವಿದೆ, ಈಗೇಕೆ ಈ ಮೌನ @BJP4Karnataka?#Worstಸರ್ಕಾರCostlyಸಂಸಾರ
— Karnataka Congress (@INCKarnataka) October 11, 2021
ಇದನ್ನೂ ಓದಿ: ಸಂಪೂರ್ಣವಾಗಿ ಬಿಎಸ್ವೈ ಮುಗಿಸಲು ಬಿಜೆಪಿಯಿಂದ ‘ಟಾರ್ಗೆಟ್ BSY’ ಯೋಜನೆ: ಕಾಂಗ್ರೆಸ್
‘ಬಿ.ಎಸ್.ಯಡಿಯೂರಪ್ಪ(BS Yediyurappa)ನವರ ಕಣ್ಣಲ್ಲಿ ಹಲವಾರು ಬಾರಿ 'ಅಸಲಿ ಕಣ್ಣೀರು' ತರಿಸಿದ ಬಿಜೆಪಿ ಈಗ ಅವರಿಗೆ ತೋರಿಸಿದ 'ಸ್ಥಾನ' ಯಾವುದು, ಕೊಡುತ್ತಿರುವ 'ಮಾನ' ಯಾವುದು, ಮಾಡಿದ 'ಅವಮಾನ' ಏನು ಎಂಬುದು ರಾಜ್ಯಕ್ಕೆ ತಿಳಿದಿದೆ. ಅವಧಿ ಪೂರೈಸಲು ಬಿಡದೆ ಏಕಾಏಕಿ ಪದಚ್ಯುತಿಗೊಳಿಸಿದ್ದೇಕೆ ಎಂಬುದು ಇನ್ನೂ ನಿಗೂಢ. ತಾಕತ್ತಿದ್ದರೆ ಬಿಜೆಪಿ ಇದಕ್ಕೆ ಉತ್ತರಿಸಲಿ’ ಎಂದು ಕಾಂಗ್ರೆಸ್ ಕುಟುಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ