ಬೆಂಗಳೂರು: ಡಬಲ್ ಇಂಜಿನ್ ಸರ್ಕಾರ ಇದ್ದಾಗಲೂ ಕೇಂದ್ರದಿಂದ ರಾಜ್ಯಕ್ಕೆ ಸಮರ್ಪಕವಾಗಿ ಅನುದಾನ ನೀಡಲಿಲ್ಲ. ಇದೀಗ ರಾಜ್ಯದ ಜನತೆ ಬಿಜೆಪಿಗೆ ಅಧಿಕಾರ ನೀಡಲಿಲ್ಲವೆಂದು ಕೇಂದ್ರದ ಅನುದಾನವನ್ನೇ ಸ್ಥಗಿತಗೊಳಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.


COMMERCIAL BREAK
SCROLL TO CONTINUE READING

ಚುನಾವಣೆಯ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಜೆ.ಪಿ ನಡ್ಡಾ ಅವರು ರಾಜ್ಯದ ಜನರು ಬಿಜೆಪಿಗೆ ಮತ ನೀಡದಿದ್ದರೆ ''ಕರ್ನಾಟಕಕ್ಕೆ ಮೋದಿಯವರ ಆಶೀರ್ವಾದ ದೊರಕುವುದಿಲ್ಲ'' ಎಂದು ಹೇಳಿದ್ದರು. ಅಂದು ಹೇಳಿದ್ದನ್ನೇ ಈಗ ಮಾಡಿ ತೋರಿಸುವ ಮೂಲಕ ಕರ್ನಾಟಕಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.


2022-23ರ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ನರೇಗಾ ಯೋಜನೆಗೆ 2,595.52 ಕೋಟಿ, ಗ್ರಾಮ ಸಡಕ್ ಯೋಜನೆಗೆ 720.47 ಕೋಟಿ, ಸ್ವಚ್ ಭಾರತ್ ಯೋಜನೆಗೆ 155.84 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೂ ನಯಾಪೈಸೆ ಬಿಡುಗಡೆ ಮಾಡದಿರುವುದು ಖಂಡನೀಯ.


ಇದನ್ನೂ ಓದಿ-ನಿರ್ಜೀವವಾಗಿ ಉದುರುತ್ತಿರುವ ತಲೆ ಕೂದಲುಗಳಿಗೆ ಈ ಗಿಡಮೂಲಿಕೆ ಎಣ್ಣೆ ರಾಮಬಾಣ ಉಪಾಯ!


ಬಿಜೆಪಿಯ 26 ಸಂಸದರು ರಾಜ್ಯಕ್ಕೆ ಕೇಂದ್ರ ಸರ್ಕಾರ ಎಸಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತಿ ರಾಜ್ಯದ ಅನುದಾನ ಒದಗಿಸಲು ನಮ್ಮೊಂದಿಗೆ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ರಾಜ್ಯದಲ್ಲಿ ಸರ್ಕಾರ ಉರುಳಿಸಬಲ್ಲೆವು ಎಂದು ಬೀಗುವ ಬಿಜೆಪಿ ನಾಯಕರು, ಅವರದ್ದೇ ಪಕ್ಷದ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನ ತರಲು ಒತ್ತಾಯಿಸಬೇಕಿದೆ. ಪಕ್ಷದ ಪರವಹಿಸೋದು ಬಿಟ್ಟು ರಾಜ್ಯದ ಪರ ವಹಿಸಿದ್ದರೆ BJP Karnataka ಇಂದು ಈ ಗತಿ ತಲುಪುತ್ತಿರಲಿಲ್ಲ. ಇನ್ನು ಮುಂದಾದರೂ ರಾಜ್ಯ ಬಿಜೆಪಿ ನಾಯಕರು ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತಾಗಿ ರಾಜ್ಯದ ಪರ ನಿಲ್ಲಲಿ ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ