ತುಮಕೂರು: ಕರ್ನಾಟಕಕ್ಕೆ ಲಾಕೋಸ್ಟ್ ಮಿಡತೆಯಿಂದ ಯಾವುದೇ ತೊಂದರೆಯಿಲ್ಲ. ಈಶಾನ್ಯ ಭಾಗದತ್ತ ಗಾಳಿಯ ದಿಕ್ಕು ಬದಲಾಗಿರುವುದರಿಂದ ಗಾಳಿಯನ್ನು ಅವಲಂಬಿಸಿರುವ ಮಿಡತೆಗಳು ಸಹ ಕರ್ನಾಟಕವನ್ನು ಪ್ರವೇಶಿಸಿಲ್ಲ ಎಂದು ಕೃಷಿ ಸಚಿವರಾದ ಬಿ.ಸಿ. ಪಾಟೀಲ್ (BC Patil) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೇರೆ ರಾಜ್ಯಗಳಲ್ಲಿ ಮಿಡತೆಯ ಹಾವಳಿ ಇವು ಎಲ್ಲಿ ನಮ್ಮ ರಾಜ್ಯವನ್ನುಪ್ರವೇಶಿಸುತ್ತವೆ ಎನ್ನುವ ಭಯ ನಮ್ಮನ್ನೂ ಆವರಿಸಿತ್ತು.ಇದಕ್ಕಾಗಿ ಸರ್ಕಾರ ಮತ್ತು ಇಲಾಖೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗಿತ್ತು. ಮಿಡತೆಯಿಂದ ರಾಜ್ಯದ ರೈತರಿಗೆ (Farmers) ಯಾವುದೇ ತೊಂದರೆಯಿಲ್ಲ. ರೈತರು ನಿಶ್ಚಿಂತರಾಗಿರಬೇಕೆಂದು ಅಭಯ ನೀಡಿದರು.


ಸೌಹಾರ್ದತೆಯಿಂದ ಆಪ್ತರು ನೆಂಟರು ಆತಿಥ್ಯ ನೀಡಿದರೆ ಅಲ್ಲಿಗೆ ಹೋದರೆ ಅದೇ ಸುದ್ದಿಯಾಗುತ್ತಿದೆ. ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಯಾವುದೇ ರೀತಿಯಲ್ಲಿ ಭಿನ್ನಮತಗಳಿಲ್ಲ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರುವಂತೆ ಸರ್ಕಾರದಲ್ಲಿ ಸಣ್ಣಪುಟ್ಟ ಆಂತರಿಕ ಭಿನ್ನಾಭಿಪ್ರಾಯ ಇರುವುದು ಸಹಜವೇ. ಹಾಗಂದ ಮಾತ್ರಕ್ಕೆ ಅಸಮಾಧಾನವಾಗಲೀ ತೊಂದರೆಯಾಗಲಿ ಇದೆ ಎಂದರ್ಥವಲ್ಲ. ನಾವೆಲ್ಲ ಬಂದ ಮೇಲೆ ಸರ್ಕಾರ ಸುಭದ್ರವಾಗಿದೆ. ಇನ್ನೂ ಮೂರುವರ್ಷ ಬಿಜೆಪಿ ಸರ್ಕಾರ ಸ್ಥಿರವಾಗಿರಲಿದೆ ಎಂದು ಬಿ.ಸಿ. ಪಾಟೀಲ್ ಭವಿಷ್ಯ ನುಡಿದರು.


ಲಾಕ್​ಡೌನ್ (Lockdown)  ನಿಂದ ನಷ್ಟವನ್ನು ಅನುಭವಿಸಿದ ಹಣ್ಣು, ಹೂವು, ತರಕಾರಿ ಬೆಳೆದ ರೈತರಿಗೆ ಸರ್ಕಾರ ಪರಿಹಾರ ಘೋಷಿಸಿದೆ. ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ರೈತರು ಯಾವುದೇ ಕಾರಣಕ್ಕೂ ಯಾವುದೇ ವಿಚಾರಕ್ಕೂ ಆತಂಕಕ್ಕೊಳಗಾಗುವುದು ಬೇಡ. ಸರ್ಕಾರ ಮತ್ತು ಇಲಾಖೆ ರೈತರೊಂದಿಗೆ ಸದಾ ಇರುತ್ತದೆ ಎಂದು ತಿಳಿಸಿದರು.