ಚಾಮರಾಜನಗರ: ವ್ಯಾಘ್ರನ ಕೊಂದು ಕೆರೆಯಲ್ಲಿ ಬಿಸಾಡಿದ ಹುಲಿ ಹಂತಕರು...!
ಹುಲಿಯ ಕಾಲಿಗೆ ತಂತಿಯಿಂದ ಕಲ್ಲು ಕಟ್ಟಿ ಕೆರೆಗೆ ಎಸೆದಿರುವುದು ಮೇಲ್ನೋಟಕ್ಕೆ ಖಚಿತವಾಗಿದ್ದು ಬೇರೆ ಸ್ಥಳದಲ್ಲಿ ಮೃತಪಟ್ಟಿರುವ ಹುಲಿಯನ್ನು ಕೆರೆಗೆ ತಂದು ಬಿಸಾಡಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರ ವಲಯದ ವ್ಯಾಪ್ತಿಗೆ ಒಳಪಡುವ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರದ ಕೆರೆಯಲ್ಲಿ ಸಿಕ್ಕ ಹುಲಿ ಕಳೇಬರ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಸಾಮಾನ್ಯವಾಗಿ ಕಾಡುಪ್ರಾಣಿಗಳು ತೀರಾ ದಣಿದು ನೀರು ಕುಡಿಯುವ ವೇಳೆ ಹೃದಯಾಘಾತದಿಂದ ಮೃತಪಡುತ್ತವೆ. ಕೆರೆಯಲ್ಲಿ ಹುಲಿಯನ್ನು ಕಂಡಾಗ ಮೇಲ್ನೋಟಕ್ಕೆ ಇದೇ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಬುಧವಾರ ಹುಲಿ ಕಳೇಬರವನ್ನು ಮೇಲಕ್ಕೆತ್ತಿದ ವೇಳೆ, ಅದರ ಕೊರಳಲ್ಲಿ ಮತ್ತು ಕಾಲುಗಳಲ್ಲಿ ತಂತಿ ಸಿಕ್ಕಿಹಾಕಿಕೊಂಡಿರುವುದು ಕಂಡು ಬಂದಿದ್ದು ಇದು ಹುಲಿ ಹಂತಕರ ಕೃತ್ಯವಿರಬಹುದು ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ- ಆಟೋಗೆ ಕಾರ್ ಟಚ್ ಆಗಿದ್ದಕ್ಕೆ ಕಾರು ಚಾಲಕನಿಗೆ ಥಳಿಸಿದ ರಿಕ್ಷಾ ಡ್ರೈವರ್.. ವಿಡಿಯೋ ವೈರಲ್..!
ಹುಲಿಯ ಕಾಲಿಗೆ ತಂತಿಯಿಂದ ಕಲ್ಲು ಕಟ್ಟಿ ಕೆರೆಗೆ ಎಸೆದಿರುವುದು ಮೇಲ್ನೋಟಕ್ಕೆ ಖಚಿತವಾಗಿದ್ದು ಬೇರೆ ಸ್ಥಳದಲ್ಲಿ ಮೃತಪಟ್ಟಿರುವ ಹುಲಿಯನ್ನು ಕೆರೆಗೆ ತಂದು ಬಿಸಾಡಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಉರುಳಿನಿಂದ ಮೃತಪಟ್ಟಿಲ್ಲ ಎಂಬುದನ್ನು ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ಧೃಡಪಡಿಸಿದ್ದಾರೆ. ಇನ್ಯಾವ ರೀತಿಯಲ್ಲಿ ಈ ವ್ಯಾಘ್ರನನ್ನು ಕೊಂದಿರಬಹುದು ಎಂಬ ಜಿಜ್ಞಾಸೆ ಅಧಿಕಾರಿಗಳದ್ದಾಗಿದೆ.
ಎರಡು ಮೂರು ದಿನಗಳಿಂದ ಕೆರೆ ನೀರಿನಲ್ಲಿ ಹುಲಿಯ ದೇಹ ಕೊಳೆತದ್ದರಿಂದ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರವಾದ ಕಾರಣ ಕಂಡು ಹಿಡಿಯಲು ಆಗಿಲ್ಲ. ಹುಲಿಯ ಅಂಗಾಂಗಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವನ್ಯಪ್ರಾಣಿ ವೈದ್ಯ ವಾಸೀಂ ಮೀರ್ಜಾ ಮಾಹಿತಿ ಕೊಟ್ಟಿದ್ದಾರೆ.
ಇದನ್ನೂ ಓದಿ- ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆ ಜಾರಿಗೆ : ಆಮ್ ಆದ್ಮಿ ಪಾರ್ಟಿ
ಹುಲಿಯ ಸಾವಿನ ಬಗ್ಗೆ ಖಚಿತ ಮಾಹಿತಿ ಪಡೆಯಲು ಮತ್ತು ಆರೋಪಿಗಳ ಬಂಧನಕ್ಕಾಗಿ ತಂಡವನ್ನು ರಚಿಸಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.
ಮೃತಪಟ್ಟಿರುವ ಹುಲಿ ಗಂಡಾಗಿದ್ದು 5 ವರ್ಷ ಬರಬಹುದು ಎಂದು ಅಂದಾಜು ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಎನ್ಟಿಸಿಎ ನಿರ್ದೇಶನದಂತೆ ಕಳೇಬರ ಸುಡಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.