ಹುಡುಗಿ ಅಂತಾ ಹೇಳಿಕೊಂಡು ಚಾಟಿಂಗ್ : ವಿಷಯ ತಿಳಿದ ಯುವತಿ ಅಣ್ಣನಿಂದ ಯುವಕನಿಗೆ ಚಾಕು ಇರಿತ..!

ಯುವತಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದ ಘಟನೆ ಮಾಸುವ ಮುನ್ನವೇ ನಗರದಲ್ಲಿ ಅಂಥಹದ್ದೇ ಮತ್ತೊಂದು ಘಟನೆ ನಡೆದಿದೆ. ನಕಲಿ ಖಾತೆ ಸೃಷ್ಟಿಸಿ ಯುವತಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆಯ ಸಹೋದರ ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ. ಸಿದ್ಧಾರ್ಥ್ ಚಾಕು ಇರಿತಕ್ಕೊಳಗಾದ ಯುವಕ.

Written by - VISHWANATH HARIHARA | Edited by - Krishna N K | Last Updated : Feb 8, 2023, 01:20 PM IST
  • ನಕಲಿ ಖಾತೆ ಸೃಷ್ಟಿಸಿ ಯುವತಿಗೆ ಮೆಸೇಜ್
  • ಯುವತಿಯ ಸಹೋದರನಿಂದ ಯುವಕನಿಗೆ ಚಾಕು ಇರಿತ
  • ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ.
ಹುಡುಗಿ ಅಂತಾ ಹೇಳಿಕೊಂಡು ಚಾಟಿಂಗ್ : ವಿಷಯ ತಿಳಿದ ಯುವತಿ ಅಣ್ಣನಿಂದ ಯುವಕನಿಗೆ ಚಾಕು ಇರಿತ..!

ಬೆಂಗಳೂರು ‌: ಯುವತಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದ ಘಟನೆ ಮಾಸುವ ಮುನ್ನವೇ ನಗರದಲ್ಲಿ ಅಂಥಹದ್ದೇ ಮತ್ತೊಂದು ಘಟನೆ ನಡೆದಿದೆ. ನಕಲಿ ಖಾತೆ ಸೃಷ್ಟಿಸಿ ಯುವತಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆಯ ಸಹೋದರ ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ. ಸಿದ್ಧಾರ್ಥ್ ಚಾಕು ಇರಿತಕ್ಕೊಳಗಾದ ಯುವಕ.

ಇನ್ಸ್ಟಾಗ್ರಾಂನಲ್ಲಿ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಸಿದ್ಧಾರ್ಥ್ ಒಂದು ವರ್ಷದಿಂದ ಯುವತಿಯೊಬ್ಬಳಿಗೆ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಮೆಸೇಜ್ ಮಾಡುತ್ತಿರುವುದು ಯುವತಿಯಲ್ಲ ಯುವಕ ಎಂಬ ಅಸಲಿ ವಿಷಯ ತಿಳಿದ ಆ ಯುವತಿ ತನ್ನ ಸಹೋದರ ಚೇತನ್ ಗೆ ವಿಚಾರ ತಿಳಿಸಿದ್ದಾಳೆ. ಸಿಟ್ಟಿಗೆದ್ದ ಚೇತನ್, ಸಿದ್ಧಾರ್ಥ್​ಗೆ ಕರೆ ಮಾಡಿ ನಿಂದಿಸಿ ಭೇಟಿಯಾಗುವಂತೆ ತಿಳಿಸಿದ್ದಾನೆ.

ಇದನ್ನೂ ಓದಿ: ದೇಣಿಗೆ ಸಂಗ್ರಹಿಸುತ್ತಿದ್ದ ವಿಶೇಷಚೇತನನ ಮೇಲೆ ಮಂಗಳಮುಖಿಯರಿಂದ ಹಲ್ಲೆ ಆರೋಪ, ಕೇಸ್ ದಾಖಲು

ಅದರಂತೆ ಜನವರಿ ಐದರಂದು ಸಿದ್ಧಾರ್ಥ್ ವಾಸವಿದ್ದ ಪಿಜಿ ಬಳಿ ತನ್ನ ಗೆಳೆಯರೊಂದಿಗೆ ಬಂದಿದ್ದ ಚೇತನ್, ಸಿದ್ದಾರ್ಥ್ ಬಳಿ ಜಗಳ ಆರಂಭಿಸಿದ್ದಾರೆ. ಚಾಕುವಿನಿಂದ ಸಿದ್ದಾರ್ಥ್ ಗೆ ಇರಿದು ಹಲ್ಲೆ ಮಾಡಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿರುವ ಸಿದ್ದಾರ್ಥ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದರಾಜನಗರ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News