15 ವರ್ಷದಿಂದ ಕಗ್ಗತ್ತಲಿನಲ್ಲಿಯೇ ಇದೆ ಈ ಕಾಲೋನಿ..!
ಆ ಜನ ಕೃಷ್ಣಾ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿದ್ದರು. ಸರ್ಕಾರ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿತ್ತು ಆದ್ರೆ ಮೂಲಭೂತ ಸೌಕರ್ಯ ಮಾತ್ರ ನೀಡಲಿಲ್ಲ ಕಳೆದ 15 ವರ್ಷಗಳಿಂದಲು ಕತ್ತಲಲ್ಲೆ ಆ ಜನ ಜೀವನ ನಡೆಸ್ತಾ ಇದಾರೆ.. ಜನ ಪ್ರತಿನಿಧಿಗಳು ಅಧಿಕಾರಿಗಳು ಕಂಡು ಕಾನದಂತೆ ಸುಮ್ಮನಿದ್ದಾರೆ.
ಬೆಳಗಾವಿ: ಆ ಜನ ಕೃಷ್ಣಾ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿದ್ದರು. ಸರ್ಕಾರ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿತ್ತು ಆದ್ರೆ ಮೂಲಭೂತ ಸೌಕರ್ಯ ಮಾತ್ರ ನೀಡಲಿಲ್ಲ ಕಳೆದ 15 ವರ್ಷಗಳಿಂದಲು ಕತ್ತಲಲ್ಲೆ ಆ ಜನ ಜೀವನ ನಡೆಸ್ತಾ ಇದಾರೆ.. ಜನ ಪ್ರತಿನಿಧಿಗಳು ಅಧಿಕಾರಿಗಳು ಕಂಡು ಕಾನದಂತೆ ಸುಮ್ಮನಿದ್ದಾರೆ.
ಹೌದು ಒಂದೆಡೆ ಕೇಂದ್ರ ಸರ್ಕಾರ ಇಡಿ ದೇಶದ ಪ್ರತಿ ಹಳ್ಳಿಗೂ ಕರೆಂಟ್ ಕೊಡುವುದರ ಮೂಲಕ ಕತ್ತಲೆ ಮುಕ್ತ ದೇಶ ಕಟ್ಟಲು ಮುಂದಾಗಿದೆ ಆದ್ರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭಿರಡಿ ಗ್ರಾಮದ ಪಕ್ಕದಲ್ಲೆ ಇರುವ ನಿರಾಶ್ರಿತರ ಕಾಲೋನಿ ಮಾತ್ರ ವಿಧ್ಯುತ್ ಭಾಗ್ಯದಿಂದ ವಂಚಿತವಾಗಿದೆ.. ಕಳೆದ 2005 ರಲ್ಲಿ ಕೃಷ್ಣಾ ನದಿಯಲ್ಲಿ ಬಂದಂತಹ ಪ್ರವಾಹಕ್ಕೆ ನದಿ ತೀರದ ನೂರಾರು ಮನೆಗಳು ಪ್ರವಾಹಕ್ಕೆ ತುತ್ತಾಗಿದ್ದವು. ಅಂದಿನ ಸರ್ಕಾರ ಪ್ರವಾಹ ಪೀಡಿತರಿಗೆ ಸರ್ಕಾರದಿಂದಲೆ ಮನೆಗಳನ್ನ ನಿರ್ಮಾಣ ಮಾಡಿ ಅಲ್ಲಿ ಇರುವ ವ್ಯವಸ್ಥೆಯನ್ನ ಕಲ್ಪಿಸಿದ ಬಳಿಕ ಇತ್ತ ತಿರಿಗಿಯೂ ನೋಡಿಲ್ಲ ಕೆಲ ಕುಟುಂಬಗಳು ಮೂಲಭೂತ ಸೌಕರ್ಯ ಕೊರತೆಯಿಂದ ಮನೆಗಳನ್ನ ಖಾಲಿ ಮಾಡಿ ಗ್ರಾಮದಲ್ಲಿ ಉಳಿದು ಕೊಂಡಿದ್ದಾರೆ. ಆದ್ರೆ ಇನ್ನುಳಿದ ಜನ ಮಾತ್ರ ಪರ್ಯಾಯ ವ್ಯವಸ್ಥೆಯಿಲ್ಲದೆ ಕತ್ತಲಲ್ಲೆ ಜೀವನ ನಡೆಸುತ್ತಿದ್ದಾರೆ.. ಇನ್ನು ಇಲ್ಲಿ ವಾಸಿಸುತ್ತಿರು ಜನ ಕರೆಂಟ್ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರು ಅಧಿಕಾರಿಗಳು ಕ್ಯಾರೆ ಎಂದಿಲ್ಲಾ. ಇದರಿಂದ ಬೇಸತ್ತ ಸಂತ್ರಸ್ತರು ರೋಸಿಹೋಗಿದ್ದಾರೆ. 2005 ರಲ್ಲಿ ಬಿದ್ದ ಮನೆಗಳ ವಾಸಿಸುವ ಜನರಿಗೆ ಹಕ್ಕು ಪತ್ರಗಳನ್ನು ನೀಡಿಲ್ಲಾ ಎಂದು ಇಲ್ಲಿನ ಜನ ಆರೋಪಿಸಿದ್ದಾರೆ.
ಇದನ್ನೂ ಓದಿ: B.Sriramulu : 'ಸಿದ್ದರಾಮಯ್ಯ ಪರದೇಶಿ ಗಿರಾಕಿ ತರ ಕ್ಷೇತ್ರ ಹುಡುಕಿಕೊಂಡು ಹೋಗ್ತಿದ್ದಾರೆ'
ಇನ್ನು ಚುನಾವಣೆ ಬಂದಾಗ ಮಾತ್ರ ಇಲ್ಲಿನ ಜನಪ್ರತಿನಿಧಿಗಳಿಗೆ ಸಮಸ್ಯೆ ಅರಿವಾಗುತ್ತದೆ ವೋಟ್ ಕೆಳಲು ಬಂದಾಗ ಮಾತ್ರ ನನಗೆ ಮತ ಹಾಕಿ ನಿಮ್ಮ ಸಮಸ್ಯೆಯನ್ನ ಬಗೆಹರಿಸುತ್ತೆನೆಂದು ಹೇಳಿ ಬಳಿಕ ಇತ್ತ ಸುಳಿಯೋದು ಇಲ್ಲ. ಇನ್ನು ಈ ಕಾಲೋನಿಯಲ್ಲಿ ನೂರಾರು ವಿಧ್ಯಾರ್ಥಿಗಳು ಸಹ ಇದ್ದು ವಿಧ್ಯಾರ್ಥಿಗಳ ವಿಧ್ಯಾಭ್ಯಾಸಕ್ಕು ತೊಂದರೆ ಯಾಗುತ್ತಿದೆ. ಬ್ಯಾಟರಿ ಟಾರ್ಚ ಅಥವಾ ದೀಪದಲ್ಲೆ ವಿಧ್ಯಾಭ್ಯಾಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಇಲ್ಲಿನ ರಸ್ತೆಗಳನ್ನ ನೋಡಿದ್ರೆ ಇದು ರಸ್ತೆನಾ ಇಲ್ಲಾ ಗದ್ದೆ ಅನ್ನುವಂತಾಗಿದೆ ಇನ್ನು ಮಳೆ ಬಂದ್ರೆ ಸಾಕು ಇಡಿ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಾಡುತ್ತವೆ.
ಇದನ್ನೂ ಓದಿ: "ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು"?
ಒಟ್ಟಿನಲ್ಲಿ ದಶಕಗಳೆ ಕಳೆದರು ಇಲ್ಲಿನ ಜನ ಮಾತ್ರ ಮೂಲಭೂತ ಸೌಕರ್ಯಕ್ಕು ಪರದಾಡುವಂತಾಗಿದೆ. ಇನ್ನೋದೆಡೆ ಸರ್ಕಾರವೆ ನಿರಾಶ್ರಿತರ ಕಾಲೋನಿ ಮಾಡಿ ಸರ್ಕಾರಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಫಲವಾಗಿದೆ ಇನ್ನಾದರು ತಾಲೂಕಾಡಳಿತ ಎಚ್ಚೆತ್ತುಕೊಂಡು ಇಲ್ಲಿನ ಜನರಿಗೆ ನ್ಯಾಯ ಕೊಡಿಸಬೇಕಾಗಿದೆ.
-ಶಿವರಾಜ್ ನೇಸರಗಿ ಜೀ ಕನ್ನಡ ನ್ಯೂಸ್ ಚಿಕ್ಕೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.