ಇದು ರೈತರ ಹೋರಾಟವಲ್ಲ, ದೇಶದ್ರೋಹಿಗಳ ಹೋರಾಟ: ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ
ನೀವು ಸಿಎಂ ಆಗ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ‘ಸಿಎಂ ಬಿಡಿ.. ನಾನು ಮಂತ್ರಿನೂ ಆಗ್ಲಿಲ್ಲ ಏನ್ಮಾಡೋದು ಅಂತಾ ಹೇಳಿದ್ದಾರೆ.
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಕೃಷಿ ಕಾಯ್ದೆಗಳ ವಿರುದ್ಧ ಭಾರತ್ ಬಂದ್(Bharat Bandh)ಗೆ ಕರೆ ನೀಡಿ ಹೋರಾಟ ನಡೆಸುತ್ತಿರುವ ರೈತರ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್(Basanagouda Patil Yatnal)ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸೋಮವಾರ ಮಾತನಾಡಿರುವ ಅವರು, ‘ಇದು ರೈತರ ಹೋರಾಟವಲ್ಲ, ದೇಶದ್ರೋಹಿಗಳ ಹೋರಾಟ’ ಅಂತಾ ಹೇಳಿ ವಿವಾದ ಸೃಷ್ಟಿಸಿದ್ದಾರೆ.
ಪ್ರಧಾನಿ ಮೋದಿ(Narendra Modi) ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಯತ್ನಾಳ್, ‘ಮೋದಿ ಅವರೇನು ತಮ್ಮ ಸಂಸಾರಕ್ಕಾಗಿ ಒಯ್ತಾರಾ? ಅವರು ಯಾವುದರಲ್ಲೂ ಸ್ವಾರ್ಥತೆ ಮಾಡಿಲ್ಲ. ಅವರ ಅಣ್ಣನ ಸೋಸೆ ರಾಜಕೋಟ್ ನಲ್ಲಿ ಕಾರ್ಪೊರೇಷನ್ ಟಿಕೆಟ್ ಬೇಡಿದರೂ ಕೊಟ್ಟಿಲ್ಲ. ಮೋದಿ ಅವರು ತಮ್ಮ ಕುಟುಂಬದಿಂದಲೇ ದೂರ ಇದ್ದಾರೆ. ಅವರು ಯಾವತ್ತು ಸ್ವಾರ್ಥ ಬಯಸುವುದಿಲ್ಲ’ವೆಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ದುರಂತ: 3 ಅಂತಸ್ತಿನ ಬಹುಮಹಡಿ ಕಟ್ಟಡ ಕುಸಿತ
ಸಿಎಂ ಬಿಡಿ.. ನಾನು ಮಂತ್ರಿನೂ ಆಗ್ಲಿಲ್ಲ!
ನೀವು ಸಿಎಂ ಆಗ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ‘ಸಿಎಂ ಬಿಡಿ.. ನಾನು ಮಂತ್ರಿನೂ ಆಗ್ಲಿಲ್ಲ ಏನ್ಮಾಡೋದು. ನಾನು ಸಮಾಜದ ಹೋರಾಟವನ್ನು ಮಂತ್ರಿ, ಮುಖ್ಯಮಂತ್ರಿ ಆಗಲು ದುರುಪಯೋಗಪಡಿಸಿಕೊಳ್ಳಲ್ಲ’ ಅಂತಾ ಹೇಳಿದ್ದಾರೆ. ಎಷ್ಟೋ ಮಂದಿ ಯೋಗ್ಯರು ಹಾಗೆಯೇ ಸತ್ತು ಹೋಗಿದ್ದಾರೆ. ಅದೇ ರೀತಿ ನಾನು ಒಬ್ಬನೆಂದು ತಿಳಿದುಕೊಳ್ಳಿ. ನಾನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಮಂತ್ರಿಯಾದವನು. ನಾನು ಮಂತ್ರಿ ಆಗಲೇಬೇಕೆಂಬುದೇನು ಇಲ್ಲ. ನಾನು ಮಂತ್ರಿಯಾಗಲು ಯೋಗ್ಯ ಮತ್ತು ಸಮರ್ಥನಿದ್ದರೆ ಮಾಡುತ್ತಾರೆ, ಇಲ್ಲವಾದರೆ ಬಿಡುತ್ತಾರೆ. ನಾನು ಎಲ್ಲ ಸಮುದಾಯಗಳ ಧ್ವನಿಯಾಗಿದ್ದೇನೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಅವರ ಮೇಲೆ ವಿಶ್ವಾಸವಿದೆ ಎಂದು ಹೇಳಿದರು.
ವಿಜಯಾನಂದ ಕಾಶಪ್ಪನವರ ಮತ್ತು ಕೂಡಲ ಸಂಗಮ ಶ್ರೀಗಳ ಪಂಚಮಸಾಲಿ 2A ಮೀಸಲಾತಿ ಹೋರಾಟ ವ್ಯರ್ಥವಾಗುವುದಿಲ್ಲ. ಇದು ಇಡೀ ಕರ್ನಾಟಕದಲ್ಲಿ ಎಲ್ಲಾ ಸಮುದಾಯಗಳಿಗೆ ಮುಂದಿನ ಭವಿಷ್ಯವನ್ನು ತಿಳಿಸುವ ಹೋರಾಟವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯರು ಹಿಟ್ಲರ್ ವಂಶಸ್ತರು ಇದ್ದಾರೆ, ಅವರು ತಾಲಿಬಾನಿಗಳು. ಪ್ರಧಾನಿ ಮೋದಿ ದೇಶವನ್ನು ಮಾರುತ್ತಾರೆಂಬ ಸಿದ್ದರಾಮಯ್ಯ(Siddaramaiah)ನವರ ಹೇಳಿಕೆಗೆ ಇದೇ ವೇಳೆ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Karnataka Rains Forecast: ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ
‘ಸಿದ್ದರಾಮಯ್ಯನವರೇ ಟಿಪ್ಪು ಸುಲ್ತಾನ್ ವಂಶಸ್ಥರು, ಅವರಿಗೆ ಧರ್ಮ, ದೇಶ, ಸಂಸ್ಕೃತಿ ಬಗ್ಗೆ ಗೊತ್ತಿಲ್ಲ. ಅವರದ್ದು ಕೇವಲ ಸ್ವಾರ್ಥ ಮತ್ತು ವೋಟ್ ಬ್ಯಾಂಕ್ ರಾಜಕಾರಣ. ಕೇವಲ ಒಂದು ಸಮುದಾಯವನ್ನು ಸಂತೃಪ್ತಿಗೊಳಿಸಲು ಅತ್ಯಂತ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ತಾಲಿಬಾನಿಗಳು ಏನಿದ್ದರೂ ಕಾಂಗ್ರೆಸ್ ನಲ್ಲಿದ್ದಾರೆ. ಕಾಂಗ್ರೆಸ್ ಒಂದು ತಾಲಿಬಾನಿಗಳ ಪ್ರತಿರೂಪ. ಕಾಂಗ್ರೆಸ್ ಇಂದು ಪಾಕಿಸ್ತಾನದ ಪಾರ್ಟಿಯಾಗಿ ಪರಿವರ್ತನೆಯಾಗಿದೆ. ಕಾಂಗ್ರೆಸ್ ನಾಯಕರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ರೀತಿ ಮಾತನಾಡುತ್ತಿದ್ದಾರೆ. ಇವರೆಲ್ಲ ನಮ್ಮ ದೇಶದಲ್ಲಿರುವ ಚೋಟಾ ಇಮ್ರಾನ್ ಖಾನ್ ಗಳು ಅಂತಾ ಕಿಡಿಕಾರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.