ಪ್ರಧಾನಿ ಮೋದಿ ತಮ್ಮ ಧಣಿಗಳ ಆದೇಶ ಪಾಲಿಸುತ್ತಿದ್ದಾರೆ: ಕಾಂಗ್ರೆಸ್ ವ್ಯಂಗ್ಯ

ಕೃಷಿ ಕಾಯ್ದೆಗಳು ಅನುಕೂಲಕರವೇ ಆಗಿದ್ದರೆ 10 ತಿಂಗಳಿಂದ ರೈತರಿಗೆ ಮನವರಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಏಕೆ ಸಾಧ್ಯವಾಗಿಲ್ಲವೆಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - ZH Kannada Desk | Last Updated : Sep 27, 2021, 02:33 PM IST
  • ಉದ್ಯಮಿಗಳು ಕಾಯ್ದೆಗಳ ಲಾಭ ಪಡೆದು ರೈತರನ್ನು ಮುಗಿಸಲು ಶುರು ಮಾಡಿದ್ದಾರೆ
  • ರೈತರು ಕೃಷಿ ಕಾಯ್ದೆಗಳನ್ನು ಅರ್ಥ ಮಾಡಿಕೊಂಡಿಲ್ಲ ಎಂಬ ಸುಳ್ಳನ್ನು ಬಿಜೆಪಿ ಬಿತ್ತುತ್ತಿದೆ
  • ಅನ್ನದಾತರ ಪ್ರತಿಭಟನೆಗೆ ಅನುಮತಿ ನೀಡದೆ ಬಿಜೆಪಿ ಸರ್ಕಾರ ತನ್ನ ರೈತ ವಿರೋಧಿ ನಿಲುವನ್ನು ಸಾಬೀತು ಮಾಡಿದೆ
ಪ್ರಧಾನಿ ಮೋದಿ ತಮ್ಮ ಧಣಿಗಳ ಆದೇಶ ಪಾಲಿಸುತ್ತಿದ್ದಾರೆ: ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆ ವಿಚಾರವಾಗಿ ಪ್ರಧಾನಿ ಮೋದಿ(Narendra Modi) ತಮ್ಮ ಧಣಿಗಳ ಆದೇಶ ಪಾಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಸೋಮವಾರ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್, ಕೇಂದ್ರ ಸರ್ಕಾರದ ರೈತವಿರೋಧಿ ಧೋರಣೆ ವಿರುದ್ಧ ಕಿಡಿಕಾರಿದೆ.

‘ರೈತರಿಗೆ ಬೇಡವಾದ ಕೃಷಿ ಕಾಯ್ದೆ(Farm laws)ಗಳ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಹಠಮಾರಿ ಧೋರಣೆ ಏಕೆ? ಸಂಸತ್ತು ಹಾಗೂ ರೈತರಲ್ಲಿ ಕಾಯ್ದೆಗಳ ಚರ್ಚೆಗೆ ಸರ್ಕಾರದ ಹಿಂದೇಟೇಕೆ? ರೈತರ ಪ್ರತಿಭಟನೆಗೆ ವರ್ಷ ಕಳೆಯುತ್ತಾ ಬಂದರೂ ಪ್ರಧಾನಿ ಕಣ್ಣು ಕಿವಿ ಮುಚ್ಚಿಕೊಂಡಿರುವುದೇಕೆ? ಏಕೆಂದರೆ ಪ್ರಧಾನಿ ತಮ್ಮ ಧಣಿಗಳ ಆದೇಶ ಪಾಲಿಸುತ್ತಿದ್ದಾರೆ!’ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ‘ಅತಿಥಿ ಸಿಎಂ’ನಂತಾಗಿದ್ದಾರೆ: ಕಾಂಗ್ರೆಸ್ ಟೀಕೆ

#ಅನ್ನದಾತನಿಗೆಅನ್ಯಾಯ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್(Congress), ‘ರೈತ ವಿರೋಧಿ ಕೃಷಿ ಕಾಯ್ದೆಗಳ ಪ್ರಭಾವ ಬೀರಲು ಶುರು ಮಾಡಿವೆ, ಉದ್ಯಮಿಗಳು ಕಾಯ್ದೆಗಳ ಲಾಭ ಪಡೆದು ರೈತರನ್ನು ಮುಗಿಸಲು ಶುರು ಮಾಡಿದ್ದಾರೆ. ಹಿಮಾಚಲ ಪ್ರದೇಶದ ಸೇಬು ಬೆಳೆಗಾರರ ಬದುಕಿನ ಮೇಲೆ ಅದಾನಿ ಕಂಪೆನಿ ನಡೆಸುತ್ತಿರುವ ಸವಾರಿಯೇ ಇದಕ್ಕೆ ಸ್ಪಷ್ಟ ಉದಾಹರಣೆ’ ಅಂತಾ ಕುಟುಕಿದೆ.

‘ರೈತರು ಕೃಷಿ ಕಾಯ್ದೆ(Farm laws)ಗಳನ್ನು ಅರ್ಥ ಮಾಡಿಕೊಂಡಿಲ್ಲ ಎಂಬ ಸುಳ್ಳನ್ನು ಬಿಜೆಪಿ ಬಿತ್ತುತ್ತಿದೆ. ರೈತರು ಬಿಜೆಪಿ(BJP)ಯವರಂತೆ ಅಜ್ಞಾನಿ, ಅವಿದ್ಯಾವಂತರಲ್ಲ, ಕಾಯ್ದೆಗಳ ಹುನ್ನಾರ ಅರಿತೇ ವಿರೋಧಿಸುತ್ತಿದ್ದಾರೆ. ಕಾಯ್ದೆಗಳು ಅನುಕೂಲಕರವೇ ಆಗಿದ್ದರೆ 10 ತಿಂಗಳಿಂದ ರೈತರಿಗೆ ಮನವರಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಏಕೆ ಸಾಧ್ಯವಾಗಿಲ್ಲವೆಂದು’ ಪ್ರಶ್ನಿಸಿದೆ.

ಇದನ್ನೂ ಓದಿ: ಬಿ.ಸಿ.ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ!

‘ಕರಾಳ ಕೃಷಿ ಕಾಯ್ದೆ(Farm laws)ಗಳು, ಭೂಸುಧಾರಣಾ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ಅನ್ನದಾತರ ಪ್ರತಿಭಟನೆಗೆ ಅನುಮತಿ ನೀಡದೆ ಬಿಜೆಪಿ ಸರ್ಕಾರ ತನ್ನ ರೈತ ವಿರೋಧಿ ನಿಲುವನ್ನು ಸಾಬೀತು ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಪ್ರತಿ ಪ್ರಜೆಯ ಹಕ್ಕು, ರೈತರಿಂದ ಆ ಹಕ್ಕನ್ನು ಬಿಜೆಪಿ ಕಸಿದಿದೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News