ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ಶಫಿ ಎಂಬವರ ಫೇಸ್​ಬುಕ್​ನಲ್ಲಿ, ಈ ವಿಡಿಯೋ ಮೊದಲು ಪ್ರಕಟವಾಗಿದ್ದು, ಆನಂತರ ಸೋಶಿಯಲ್ ಮೀಡಿಯಾಗಳಲ್ಲಿ ಪರ-ವಿರೋಧ ಚರ್ಚೆಗಳೊಂದಿಗೆ ಹಂಚಿಕೆಯಾಗುತ್ತಿದೆ. 


COMMERCIAL BREAK
SCROLL TO CONTINUE READING

ಏನಿದೆ ವಿಡಿಯೋದಲ್ಲಿ? 
ಮೂರು ದಿನಗಳ ಹಿಂದಿನ ವಿಡಿಯೋ ಇದಾಗಿದ್ದು, ಅಲ್ಪಸಂಖ್ಯಾತ ಮುಖಂಡರು ಕೆ.ಎಸ್​.ಈಶ್ವರಪ್ಪನವರೊಂದಿಗೆ ಸೇರಿದ್ದ ಸಭೆಯಲ್ಲಿ ಮಾಜಿ ಸಚಿವರು ಮಾತನಾಡಿದ್ದಾರೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರ ಮಾತು ಇಲ್ಲಿದೆ.. 


‘‘ ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು. ಹಿಂದೂಗಳಲ್ಲಿಯು ಕೆಲ ತಲೆಹರಟೆಗಳಿದ್ದಾರೆ. ನಾನು ಇಲ್ಲ ಅನ್ನಲ್ಲ. ಮುಸ್ಲಿಮರಲ್ಲಿಯು ತಲೆಹರಟೆಗಳಿದ್ದಾರೆ. ಅವರೊಂದು ನಾಲ್ಕು ಜನ ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆಹರಟೆ ಕೆಲಸಮಾಡಿದಾಗ ಗಲಾಟೆ ಶುರುವಾಗುತ್ತದೆ, ಇಲ್ಲಾಂದ್ರೆ ತಣ್ಣಗೆ ಇರುತ್ತದೆ. ನಾನು ಏನು ಹೇಳಲು ಹೊರಟಿದ್ದೇನೆ. ನಾನು ತಪ್ಪು ಮಾಡಿದ್ರೆ ಇಲ್ಲಿಯೇ ಸಭೆಯಲ್ಲಿ ಹೇಳಿ, ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಇರುತ್ತೇವೆ. ನಾನ್ಯಾವ ವಿಚಾರಕ್ಕೆ ಗಲಾಟೆ ಮಾಡುತ್ತೇನೆ ಎಂದರೆ ಉದಾಹರಣೆಗೆ ಹೇಳುವುದಾದರೆ, ಶಿವಪ್ಪನಾಯಕ ಸರ್ಕಲ್​ನಲ್ಲಿ ಎಸ್​ಡಿಡಿಪಿಐನವರು ಒಂದು ಸಮ್ಮೇಳನ ಮಾಡಿದ್ದರು.


ಇದನ್ನೂ ಓದಿ-ಸೋಮಣ್ಣ ಅವರು ಬಿಜೆಪಿಯ ಉನ್ನತ ನಾಯಕರು - ಶೋಭಾ ಕರಂದ್ಲಾಜೆ 


 ಆ ಸಮ್ಮೇಳನದಲ್ಲಿ ಯಾವನೋ ಒಬ್ಬ ಹಿಂದೂಸ್ತಾನ್​ ಮುರದಾಬಾದ್, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ. ಸುಮ್ಮನಿರುತ್ತಾರಾ? ಯಾರಾದ್ರೂ ಇದನ್ನ ಕೇಳಿಕೊಂಡು, ನೀವು ಸುಮ್ಮನಿರುತ್ತೀರಾ? ನಾನು ಬಾಯಿ ಬಿಟ್ಟು ಹೇಳುತ್ತೇನೆ ನೀವು ಸುಮ್ಮನಿರ್ತೀರಿ, ಆದರೆ ನಾನು ಸುಮ್ಮನಿರಲಿಲ್ಲ. ಮತ್ತೆ ಅಂದು ವಾಪಸ್ ಹೋಗುತ್ತಾ ಗಾಜನೂರು ಹತ್ತರ ತಲವಾರ್ ಬೀಸಿದ್ರು. ಯಾರು? ಅಂದರೆ ಶಿವಮೊಗ್ಗದವರಲ್ಲ,  ಯಾರೋ ಒಬ್ಬ ಸತ್ತ.  ಇದಕ್ಕೆ ಶಿವಮೊಗ್ಗ ಮುಸಲ್ಮಾನರು ಕಾರಣನಾ? ಉದಾಹರಣೆಗೆ ಹರ್ಷ ಸತ್ತ. ರಾತ್ರಿ ಬಂದು ಯಾರೋ ಹೊಡೆದುಹೋದ್ರು. 


ಸುಮ್ಮಸಮ್ಮನೆ ನಮ್ಮ ನಿಮ್ಮ ಮಕ್ಕಳನ್ನ ಹೊಡೆದ್ರೆ ಸುಮ್ಮನಿರೋದಕ್ಕಾಗುತ್ತಾ? ಖಂಡಿಸಬೇಕಾ ಬೇಡವಾ? ನಾನಂತು ಖಂಡಿಸ್ತೇನೆ, ಬಿಜೆಪಿಯಲ್ಲಿ ಬಹಳ ಜನ ಮಾಡಲ್ಲ, ಆ ಪ್ರಶ್ನೆ ಬೇರೆ. ಆದರೆ ನನಗೆ ತಡೆದುಕೊಳ್ಳಲಾಗಲ್ಲ. ಕೆಟ್ಟದನ್ನು ಎಂದೂ ಕೂಡ ನಾನು ಬಿಡೋದಿಲ್ಲ. ಎಲ್ಲಾ ಮುಸಲ್ಮಾನರ ಬಗ್ಗೆ ನಾವು ಹೇಳೋದಿಲ್ಲ, ಗೂಂಡಾಗಿರಿ ಮಾಡಿ ತೊಂದರೆ ಕೊಡುವವರ ಬಗ್ಗೆ ನಾನು ಖಂಡಿಸ್ತೀನಿ ಎಂದಿದ್ದಾರೆ.’’


ಸದ್ಯ ಈ ವಿಡಿಯೋದ ಸ್ಕ್ರೀನ್ ರೆಕಾರ್ಡ್​ಗಳು ವಾಟ್ಸ್ಯಾಪ್​ ಗ್ರೂಪ್​ಗಳಲ್ಲಿ ಹರಿದಾಡುತ್ತಿದ್ದು, ಮಾಜಿ ಸಚಿವರ ಹೇಳಿಕೆಯನ್ನು ತಮ್ಮದೇ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಅಲ್ಲದೆ ಈ ಸಂಬಂಧ ಚರ್ಚೆಗಳು ಸಹ ನಡೆಯುತ್ತಿವೆ.


ಇದನ್ನೂ ಓದಿ-ಕಾಂಗ್ರೆಸ್ ನೇತೃತ್ವ ವಹಿಸಿರೋರೇ ರೌಡಿ ಶೀಟರ್-ಶೋಭಾ ಕರಂದ್ಲಾಜೆ  


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.