ಸೋಮಣ್ಣ ಅವರು ಬಿಜೆಪಿಯ ಉನ್ನತ ನಾಯಕರು - ಶೋಭಾ ಕರಂದ್ಲಾಜೆ

Shobha Karandlaje : ವಿ ಸೋಮಣ್ಣ ಬಿಜೆಪಿ ನಾಯಕರ ಮೇಲಿನ ಅಸಮಾಧಾನದಿಂದಾಗಿ ಕ್ರಾಂಗ್ರೇಸ್‌ ಸೇರಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರವಾಗಿ ಸಿಎಂ ಬೊಮ್ಮಾಯಿ ಸಹ ಸುದ್ದಿಗಾರರೊಂದಿಗೆ ಮಾತನಾಡಿ ಈ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ ವಿ ಸೋಮಣ್ಣ ನಾವು ಮೊದಲಿಂದಲೂ ಸ್ನೇಹಿತರು, ಅವರು ಇಂದು, ಮುಂದೂ ನಮ್ಮ ಜೊತೆಗೆ ಇರುತ್ತಾರೆ ಇದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದಿದ್ದರು.   

Written by - Zee Kannada News Desk | Last Updated : Mar 13, 2023, 05:27 PM IST
  • ಅವರು ಬಿಜೆಪಿಗೆ ಬಂದಾಗಿನಿಂದ ಒಂದಲ್ಲಾ ಒಂದು ಜವಾಬ್ದಾರಿ ನೀಡಿದ್ದೇವೆ.
  • ಕಳೆದ ನಾಲ್ಕೂವರೆ ವರ್ಷದಲ್ಲಿ ರಾಜ್ಯಾದ್ಯಂತ ಓಡಾಡಿದ್ದಾರೆ
  • ಈಗ ಅವರ ಕ್ಷೇತ್ರ ಬಲಪಡಿಸಲು ಓಡಾಡುತ್ತಿದ್ದಾರೆ
ಸೋಮಣ್ಣ ಅವರು ಬಿಜೆಪಿಯ ಉನ್ನತ ನಾಯಕರು - ಶೋಭಾ ಕರಂದ್ಲಾಜೆ  title=

ವಿ ಸೋಮಣ್ಣ ಕಾಂಗ್ರೇಸ್‌ ಸೇರುವ ವಿಚಾರವಾಗಿ ಶೋಭಾ ಕರಂದ್ಲಾಜೆ ಹೇಳಿಕೆಯನ್ನು ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಮಣ್ಣ ಅವರು ಬಿಜೆಪಿಯ ಉನ್ನತ ನಾಯಕರು, ಅವರು ಬಿಜೆಪಿಗೆ ಬಂದಾಗಿನಿಂದ ಒಂದಲ್ಲಾ ಒಂದು ಜವಾಬ್ದಾರಿ ನೀಡಿದ್ದೇವೆ. 2008ರಲ್ಲೂ ಸೋಮಣ್ಣ ಅವರಿಗೆ ಸಚಿವ ಸ್ಥಾನ‌ ಕೊಟ್ಟದ್ದೆವು, ಬಿಜೆಪಿಯಲ್ಲಿನ ಯಾವುದೇ ಸೀನಿಯರ್ ಗಳಿಗೂ ಸಿಗದ ಹುದ್ದೆ ವಿ.ಸೋಮಣ್ಣ ಅವರಿಗೆ ಸಿಕ್ಕಿದೆ ಹೀಗಾಗಿ ಸೋಮಣ್ಣ ಅವರಿಗೆ ಬಿಜೆಪಿ ಪಕ್ಷದ ಯಾವುದೇ ನಾಯಕರ ಮೇಲೆ ಬೇಸರ ಇಲ್ಲ,

ಇದನ್ನೂ ಓದಿ-ಕಾಂಗ್ರೆಸ್ ನೇತೃತ್ವ ವಹಿಸಿರೋರೇ ರೌಡಿ ಶೀಟರ್-ಶೋಭಾ ಕರಂದ್ಲಾಜೆ 

ಈಗಲೂ ಅವರು ಮಂತ್ರಿಯಾಗಿದ್ದಾರೆ, ಎಂಎಲ್ ಎ ಇಲ್ಲದಿದ್ದಾಗಲೂ ಅವರನ್ನು ಎಂಎಲ್ ಸಿ ಮಾಡಿದ್ದಾರೆ ಕಳೆದ ನಾಲ್ಕೂವರೆ ವರ್ಷದಲ್ಲಿ ರಾಜ್ಯಾದ್ಯಂತ ಓಡಾಡಿದ್ದಾರೆ ಈಗ ಅವರ ಕ್ಷೇತ್ರ ಬಲಪಡಿಸಲು ಓಡಾಡುತ್ತಿದ್ದಾರೆ ನಾವು ಸೋಮಣ್ಣ ಅವರ ಜೊತೆ ಸಂಪರ್ಕದಲ್ಲಿದ್ದೇವೆ ಬಿಜೆಪಿಯಲ್ಲಿ ಅವರ ಬಗ್ಗೆಯೂ ಗೌರವ ಇದೆ. ಅದೇ ರೀತಿ ಪಾರ್ಟಿಯಲ್ಲಿಯೂ ಮುಂದುವರೀತಾರೆ ಅನ್ನೋ ವಿಶ್ವಾಸ ಇದೆ" ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ-ಭಾರತವೆಂದರೆ ಕೇವಲ ಹಿಂದಿ ಭಾಷೆಯಲ್ಲ: ನಟಿ ರಮ್ಯಾ  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News